ಬೆಂಗಳೂರು, ಜೂ.26: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯರನ್ನು ರೆಸಾರ್ಟ್‍ಗೆ ಕರೆದುಕೊಂಡು ಹೋಗಿದ್ದಕ್ಕೆ ಸಂಬಂಧಿಸಿದಂತೆ ವ್ಯಂಗ್ಯವಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಣ್ಣದಾಗಿ ಕೆಮ್ಮಿದ್ದಕ್ಕೆ ರೆಸಾರ್ಟ್‍ಗೆ ಓಡಿ ಹೋದರು ಇನ್ನೂ ದೊಡ್ಡದಾಗಿ ಸದ್ದು ಮಾಡಿದ್ದರೆ ಎಲ್ಲಿಗೆ ಹೋಗುತ್ತಿದ್ದರು ಗೊತ್ತಿಲ್ಲ ಎಂದು ಹೇಳಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಯಾರಿಗೂ ಯಾವುದೆ ಟಾಸ್ಕ್ ನೀಡಿರಲಿಲ್ಲ, ಕೇವಲ ಶೆಟ್ಟರ್ ಅವರಿಗೆ ಟಾಸ್ಕ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿದವು. ಬಿಜೆಪಿಯಲ್ಲಿನ ಅಸಮಾಧಾನ ಹೆಚ್ಚಾದವು ಎಂದು ತಿಳಿಸಿದ್ದಾರೆ.ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಯಾರಿಗೂ ಯಾವುದೇ ಟಾಸ್ಕ್ ನೀಡಿರಲಿಲ್ಲ, ಕೇವಲ ಶೆಟ್ಟರ್ ಅವರಿಗೆ ಟಾಸ್ಕ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿದವು. ಬಿಜೆಪಿಯಲ್ಲಿನ ಅಸಮಾಧಾನ ಹೆಚ್ಚಾದವು.ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಯ ನಾಯಕರು ಪಾಲಿಕೆ ಸದಸ್ಯರನ್ನು ರೆಸಾರ್ಟ್ ಗೆ ಕರೆದುಕೊಂಡು…ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಯ ನಾಯಕರು ಪಾಲಿಕೆ ಸದಸ್ಯರನ್ನು ರೆಸಾರ್ಟ್‍ಗೆ ಕರೆದುಕೊಂಡು ಹೋದರು. ಸಣ್ಣದಾಗಿ ಕೆಮ್ಮಿದ್ದಕ್ಕೆ ರೆಸಾರ್ಟ್‍ಗೆ ಓಡಿ ಹೋದರು ಇನ್ನೂ ದೊಡ್ಡದಾಗಿ ಸದ್ದು ಮಾಡಿದ್ದರೆ ಎಲ್ಲಿಗೆ ಹೋಗುತ್ತಿದ್ದರು ಗೊತ್ತಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.  