ಬೆಂಗಳೂರು, ಜೂ.25:ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂವಿಧಾನತಜ್ಞ, ಹೈಕೋರ್ಟ್ ನ್ಯಾಯಮೂರ್ತಿ(ವಿ) ನಾಗಮೋಹನ್ ದಾಸ್ ಅವರನ್ನು ರವಿವಾರ ಭೇಟಿ ಮಾಡಿದರು. ಈ ವೇಳೆ ನ್ಯಾ.ನಾಗಮೋಹನ್ ದಾಸ್ ಅವರು ಸಭಾಧ್ಯಕ್ಷರನ್ನು ಅಭಿನಂದಿಸಿದರು.   ವಿಧಾನಸಭೆಯಲ್ಲಿ ಜನಪರ ಕಾಯ್ದೆ, ಕಾನೂನುಗಳ ರಚನೆಗೆ ಸಂಬಂಧಿಸಿ ಮಾಹಿತಿ ಹಂಚಿಕೊಂಡ ನ್ಯಾ.ನಾಗಮೋಹನ್ ದಾಸ್, ಕಾಯ್ದೆ, ಕಾನೂನುಗಳು ರಚನೆಗೂ ಮುನ್ನ ಶಾಸಕರುಗಳಿಗೆ ಕಾನೂನಿನ ಮಾಹಿತಿಯನ್ನು ನೀಡಿ ವಿಸ್ತೃತ ಚರ್ಚೆಗೆ ಒಳಗಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಶಾಸಕರನ್ನು ಸಿದ್ದಗೊಳಿಸಬೇಕು ಎಂದು ಸಲಹೆ ಹೇಳಿದರು.   ಕರ್ನಾಟಕ ಶಾಸಕಾಂಗಕ್ಕೆ ಕಾಲಕಾಲಕ್ಕೆ ಸಂವಿಧಾನದ ಅರಿವು ಮತ್ತು ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನ್ಯಾ.ನಾಗಮೋಹನ್ ದಾಸ್ ಅವರನ್ನು ಕೋರಿಕೊಂಡರು.  