ಮಾರ್ಥಂಡ ಜೋಶಿ ಬಸವಕಲ್ಯಾಣಬಸವ ತತ್ವ ಪ್ರಚಾರ, ಪ್ರಸಾರದ ಜತೆಗೆ ಶರಣ ಸಂಸ್ಕೃತಿ ಪರಿಚಯಿಸುವ ಆಶಯದೊಂದಿಗೆ ಕಾಯಕ ಭೂಮಿ ಬಸವಕಲ್ಯಾಣದಲ್ಲಿ 12 ವರ್ಷಗಳ ಹಿಂದೆ ಬಸವ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಗಿತ್ತು. ಆದರೆ ಆರಂಭದಲ್ಲಿದ್ದ ಉತ್ಸಾಹ ನಂತರ ಕಂಡಿಲ್ಲ. ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಪ್ರತಿ ವರ್ಷ ಉತ್ಸವ ನಡೆಯದೇ ಮೂಲ ಆಶಯಕ್ಕೆ ಹಿನ್ನಡೆ ಆಗಿದೆ.
ಕಲ್ಯಾಣ ಕರ್ನಾಟಕದ ಜನರ ಆಶಯಕ್ಕೆ ಸ್ಪಂದಿಸಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (2010ರಲ್ಲಿ) ಬಸವ ಉತ್ಸವ ಆಚರಣೆಗೆ ಚಾಲನೆ ನೀಡಿದ್ದರು. ಅವರ ಸಮ್ಮುಖದಲ್ಲಿ ಅಂದು ಪಂಜಾಬ್ ರಾಜ್ಯಪಾಲರಾಗಿದ್ದ ಶಿವರಾಜ ಪಾಟೀಲ್ ಉತ್ಸವಕ್ಕೆ ಚಾಲನೆ ನೀಡಿದ್ದರು. ಮೊದಲೆರಡು ಎರಡು ವರ್ಷ ಅದ್ದೂರಿ ಆಚರಣೆ ನಡೆದವು. ಆದರೆ ನಂತರ ಎದುರಾದ ಅಡಚಣೆಗಳು ಇನ್ನೂ ಮುಗಿದಿಲ್ಲ. ಕಳೆದ ಮೂರು ವರ್ಷದಿಂದ ಸಕರ್ಾರ ಬಸವ ಉತ್ಸವವೇ ಮರೆತಿದೆ.
2012, 2013ರಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಬಸವ ಉತ್ಸವ ನಡೆಯಲಿಲ್ಲ. 2014 ಮತ್ತು 2015ರಲ್ಲಿ ಉತ್ಸವ ಆಚರಿಸಲಾಯಿತು. ಆದರೆ ಉತ್ಸವದ ಅನುದಾನ 50 ಲಕ್ಷ ರೂ.ಗಳಿಂದ 30 ಲಕ್ಷಕ್ಕೆ ಕಡಿತಗೊಳಿಸಲಾಯಿತು. ಆದರೂ ಸಂಭ್ರಮ ಕಡಿಮೆಯಾಗಲಿಲ್ಲ. ಇನ್ನು 2016, 2017ರಲ್ಲಿ ಬಸವ ಉತ್ಸವಕ್ಕೆ ಕಾಲ ಕೂಡಿಯೇ ಬರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ 2018ರಲ್ಲಿ ಬಸವ ಉತ್ಸವ ಆಚರಿಸಲಾಯಿತು. ನಂತರದಲ್ಲಿ ಕೋವಿಡ್ ನೆಪದಿಂದ ಉತ್ಸವ ನಡೆಯಲಿಲ್ಲ. ಈಗ ಕೋವಿಡ್ ಕಡಿಮೆಯಾಗಿದ್ದರೂ ಆಚರಣೆ ಸಂಬಂಧ ಚರ್ಚೆಯೇ ಇಲ್ಲ, ಸಿದ್ಧತೆಗಳೂ ನಡೆದಿಲ್ಲ. ಹೀಗಾಗಿ ಸದ್ಯಕ್ಕೆ ಉತ್ಸವ ಆಚರಿಸುವ ಲಕ್ಷಣಗಳು ಕಾಣುತ್ತಿಲ್ಲ.
ಮೊದಲ ಬಸವ ಉತ್ಸವ ವೇಳೆ ಜಿಲ್ಲಾಧಿಕಾರಿ ಆಗಿದ್ದ ಹರ್ಷ ಗುಪ್ತ, ಎರಡನೇ ಉತ್ಸವದ ವೇಳೆ ಡಿಸಿ ಆಗಿದ್ದ ಸಮೀರ್ ಶುಕ್ಲಾ ಅವರ ಮಾರ್ಗದರ್ಶನದಲ್ಲಿ ಸಹಾಯಕ ಆಂಯುಕ್ತರಾಗಿದ್ದ ಎಚ್.ಪ್ರಸನ್ನ ನೇತೃತ್ವದಲ್ಲಿ ಅಧಿಕಾರಿಗಳು ಟೀಮ್ ವರ್ಕ್​ ಮಾಡಿ ಸಾಕಷ್ಟು ಶ್ರಮ ಹಾಕಿದ್ದರು. ಜನಪ್ರತಿನಿಧಿಗಳು ಕೂಡ ಸಾಥ್ ನೀಡಿದ್ದರು. ಹೀಗಾಗಿ ಉತ್ಸವ ನೀರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ನಂತರ ಉತ್ಸವಕ್ಕೆ ಅಷ್ಟೊಂದು ಒತ್ತು ನೀಡಿರುವುದು ಕಂಡಿಲ್ಲ.
ಬಸವ ಉತ್ಸವ ಪ್ರತಿ ವರ್ಷ ನಿರಂತರ ನಡೆಯಬೇಕು. ಇದಕ್ಕೆ ಅಗತ್ಯ ಅನುದಾನ ಕಲ್ಪಿಸಿ ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಅದ್ದೂರಿ ಆಚರಿಸಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆ. ಆದರೆ ಕಳೆದ 12 ವರ್ಷಗಳಲ್ಲಿ 5 ಸಲ ಮಾತ್ರ ಉತ್ಸವ ನಡೆದಿದೆ. ಪ್ರತಿ ವರ್ಷ ಆಚರಣೆ ಸಂಬಂಧ ಅಧಿಸೂಚನೆ ಹೊರಡಿಸಲಾಗುವುದು ಎಂದು ನೀಡಿದ್ದ ಭರವಸೆ ಹುಸಿಯಾಗಿವೆ. ಬೇರೆ ಉತ್ಸವಕ್ಕಿಂತ ಬಸವ ಉತ್ಸವ ಭಿನ್ನವಾಗಿದೆ. ಈ ಉತ್ಸವಕ್ಕೆ ಶರಣ ಸಂಸ್ಕೃತಿಯ ಸ್ಪರ್ಶ ನೀಡುವ ಮೂಲಕ ಶರಣರ ತತ್ವ, ಸಂದೇಶಗಳನ್ನು ಜನಮನಕ್ಕೆ ಮುಟ್ಟಿಸುವ ಆಶಯ ಹೊಂದಿದೆ. ನಾಡಿನಲ್ಲಿ ಯಾತ್ರೆ, ಜಾತ್ರೆ, ಸಭೆ, ಸಮಾವೇಶಗಳಿಗೆ ನಿಷೇಧವಿಲ್ಲ. ಬಸವ ಉತ್ಸವಕ್ಕೆ ಏಕೆ ಅಡೆತಡೆ? ಎನ್ನುವುದು ಬಸವಾಭಿಮಾನಿಗಳ ಪ್ರಶ್ನೆ.
ಜಾರಿಗೆ ಬರಲಿಲ್ಲ ಘೋಷಣೆ
ಹಿಂದೆ ಯಾವಾಗ ನಡೆದಿದ್ದವು…2010ರಲ್ಲಿ ಮಾರ್ಚ್​ 27, 28 ಮತ್ತು 292011ರಲ್ಲಿ ಮಾರ್ಚ್​ 25, 26 ಮತ್ತು 272014ರಲ್ಲಿ ಜನೆವರಿ 19, 20ಹಾಗೂ 212015ರಲ್ಲಿ ಮಾರ್ಚ್​ 9, 10 ಮತ್ತು 152018ರಲ್ಲಿ ಫೆ.9, 10 ಮತ್ತು 112012, 13, 16, 17, 19, 20, 21ರಲ್ಲಿ ಉತ್ಸವ ನಡೆದಿಲ್ಲ.
2010ರಂದು ಆಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಸವ ಉತ್ಸವಕ್ಕೆ ಚಾಲನೆ ನೀಡಿದ್ದರು. ಈ ಮಹತ್ವದ ಉತ್ಸವ ಪ್ರತಿ ವರ್ಷವೂ ಜನೋತ್ಸವವಾಗಿ ಆಚರಣೆಯಾಗಬೇಕೆಂಬುದು ನಮ್ಮೆಲ್ಲರ ಆಶಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಮನಕ್ಕೆ ತಂದು ಶೀಘ್ರ ಉತ್ಸವ ಮುಹೂರ್ತ ನಿಗದಿಪಡಿಸಲು ಕೋರುವೆ.| ಶರಣು ಸಲಗರ, ಬಸವಕಲ್ಯಾಣ ಶಾಸಕ
ಬಸವಣ್ಣನವರ ತತ್ವ ಪ್ರಚಾರ, ಪ್ರಸಾರದ ಉದ್ದೇಶದಿಂದ ಬಸವಕಲ್ಯಾಣದಲಿ ಬಸವ ಉತ್ಸವ ಪ್ರತಿ ವರ್ಷ ಯಾವುದೇ ಅಡೆತಡೆ ಇಲ್ಲದೆ ಅರ್ಥಪೂರ್ಣವಾಗಿ ಆಚರಿಸಲೇಬೇಕು. ಪ್ರಸಕ್ತ ಮಾಚರ್್ ಅಂತ್ಯದವರೆಗೆ ಉತ್ಸವ ನಡೆಸಬೇಕು. ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.| ರಾಜಶೇಖರ ಪಾಟೀಲ್, ಹುಮನಾಬಾದ್ ಕ್ಷೇತ್ರದ ಶಾಸಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + one =
Remember me
