ವಿಜಯಪುರ :‘ಕರ್ನಾಟಕದ ಸೈಕ್ಲಿಂಗ್ ಜನಕ’ ಎಂದೇ ಖ್ಯಾತಿ ಪಡೆದ ಶ್ರೀಧರ ಮಾರುತಿರಾವ್ ಗೋರೆ ಸೋಮವಾರ ನಿಧನರಾದರು.ಇಲ್ಲಿನ ಸೈನಿಕ ಶಾಲೆ ಸಮೀಪದ ನಿವಾಸಿ ಆಗಿದ್ದ ಅವರು, ರಾಜ್ಯದಲ್ಲಿ ಸೈಕ್ಲಿಂಗ್ ಕ್ರೀಡಾಕೂಟಗಳ ಆಯೋಜನೆಗೆ ಅವರ ಕೊಡುಗೆ ಅಪಾರವಾಗಿದೆ. ಭಾರತೀಯ ಸೈಕ್ಲಿಂಗ್ ಫೆಡರೇಶನ್‌ನ ಉಪಾಧ್ಯಕ್ಷ ಹಾಗೂ ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷರಾಗಿ ಕಳೆದ 2005ರಿಂದ ಅವಿರೋಧವಾಗಿ ಈ ವರೆಗೆ ಆಯ್ಕೆಯಾಗಿದ್ದರು. ಅಂತಾರಾಷ್ಟ್ರೀಯ ಸೈಕ್ಲಿಂಗ್‌ಪಟು ಚಂದ್ರಪ್ಪ ಕುರಣಿ ಅವರೊಂದಿಗೆ ಜತೆಗೂಡಿ ಕಳೆದ 40 ವರ್ಷಗಳಿಂದ ಸೈಕ್ಲಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. 2005ರಲ್ಲಿ ಭಾರತ ಸೈಕ್ಲಿಂಗ್ ತಂಡದ ವ್ಯವಸ್ಥಾಪಕರಾಗಿ ಫ್ರಾನ್ಸ್‌ನಲ್ಲಿ ನಡೆದ ಕ್ರೀಡಾಕೂಟಕ್ಕೆ ತೆರಳಿದ್ದರು. 2002ರಲ್ಲಿ ಬೆಳಗಾವಿ, 2006ರಲ್ಲಿ ವಿಜಯಪುರ, 2008, 2014 ಮತ್ತು 2017 ರಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಸ್ಪರ್ಧೆ ಆಯೋಜನೆಗೆ ಸಂಘಟಕರಾಗಿದ್ದರು. ಅಲ್ಲದೆ ಪ್ರತಿ ವರ್ಷ ನವದೆಹಲಿಯಲ್ಲಿ ನಡೆಯುವ ಏಷ್ಯಾಕಪ್ ಟ್ರಾೃಕ್ ಸೈಕ್ಲಿಂಗ್‌ಗೆ ವೀಕ್ಷಕರಾಗಿ ತೆರಳುತ್ತಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − ten =
Remember me
