ಚಿತ್ರದುರ್ಗ: ಜಿಲ್ಲಾ ನ್ಯಾಯಾಲಯದ ಕಾರಿಡಾರ್‌ನಲ್ಲೇ ವಿಚಾರಣಾಧೀನ ಕೈದಿ ಸಮ್ಮು ಗಲಾಟೆ ಮಾಡಿದ್ದು, ಕೈಯಿಂದ ಗುದ್ದಿ ಕಿಟಕಿ ಗ್ಲಾಸ್ ಪೀಸ್ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಸಮ್ಮು, ಶಿವಮೂರ್ತಿ ಮುರುಘಾ ಶರಣರನ್ನು ಬೆದರಿಸಲು ಜೈಲಿನೊಳಗೆ ಗಾಂಜಾ, ಮೊಬೈಲ್ ಇನ್ನಿತರೆ ವಸ್ತುಗಳು ಬಂದವು. ಸ್ವಾಮೀಜಿಯನ್ನು ಬ್ಲಾಕ್ ಮೇಲ್ ಮಾಡೋಕೆ ಅಧಿಕಾರಿಗಳೇ ಫೋಟೋ ತೆಗೆಯಲು ನನ್ನನ್ನು ಬಳಸಿಕೊಂಡು ಕೆಲಸ ಮುಗಿದ ಬಳಿಕ ನಮಗೆ ಬೀಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ.
ಹಿಂದಿನ ಜೈಲರ್ ಮಹದೇವಿ ಮರಕಟ್ಟಿ ಸೇರಿ ಸಿಬ್ಬಂದಿ ಶ್ರೀಮಂತಗೌಡ ಪಾಟೀಲ್, ಬಸವರಾಜ್, ಕುತುಬುದ್ದೀನ್, ಮೇಡಂ ಪತಿ ಕಾಂಬಳೆ ಹೇಳಿದ್ದಕ್ಕೆ ಫೋಟೋ ತೆಗೆದುಕೊಟ್ಟಿದ್ದೇನೆ. ಅಧಿಕಾರಿಗಳು ಹೇಳದೆ, ನಾವೇಗೆ ಮಾಡಲು ಸಾಧ್ಯ. ಈ ವಿಚಾರವನ್ನು ಹಿಂದೆ ಪಿಡಿಜೆ, ಸಿಜೆಎಂ ನ್ಯಾಯಾಧೀಶರ ಮುಂದೆಯೂ ಹೇಳಿದ್ದೇನೆ. ಈ ಕುರಿತು ಹೈಕೋರ್ಟ್‌ನಲ್ಲೇ ಸಬ್ಮಿಟ್ ಮಾಡಿದ್ದಾರೆ ಎಂದು ಹಿಂದಿನ ಜೈಲಾಧಿಕಾರಿಗಳ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾನೆ.
ನನಗೆ ಇಲ್ಲಿ ಯಾರೂ ಗೊತ್ತಿಲ್ಲ, ಸಂಬಂಧಿಕರೂ ಇಲ್ಲ. ಹಿಂದಿನ ಅಧಿಕಾರಿಗಳು ಹೇಳಿದ ಕೆಲಸ ಮಾಡಿದ್ದಕ್ಕೆ ನನಗೆ ಕೋಟಿ ಕೋಟಿ ಏನಾದ್ರೂ ಕೊಟ್ಟಿದ್ದಾರಾ? ಇಲ್ಲ. 20 ಸಾವಿರ ರೂ. ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಈಗಿನ ಹೊಸ ಸಾಹೇಬರ ಬಲಗೈ ಬಂಟರೊಬ್ಬರ ಮೊಬೈಲ್ ನಂಬರ್ ತನಿಖೆಗೆ ಒಳಪಡಿಸಿ ಎಷ್ಟು ಲಕ್ಷ ರೂ. ದೋಚಿದ್ದಾರೆ ಗೊತ್ತಾಗಲಿದೆ ಎಂದು ದೂರಿದ.
ಜೈಲಿನಲ್ಲಿ ಸರಿಯಾಗಿ ತಿಂಡಿ-ಊಟ ಕೊಡುತ್ತಿಲ್ಲ. ಅದರಲ್ಲೂ ಲಕ್ಷ-ಲಕ್ಷ ದೋಚುತ್ತಾರೆ. ಪ್ರತಿ ಶುಕ್ರವಾರ ಜೈಲಿಗೆ ಮಾಂಸ ಬಂದರೆ, ತೊಡೆ ಮಾಂಸ ಮನೆಗೆ ಒಯ್ತರೆ. ಕೈದಿಗಳಿಗೆ ಮೂರು ಮೂಳೆ, ಒಂದು ಪೀಸ್ ಕೊಡ್ತಾರೆ. ಅದನ್ನು ಬೆಕ್ಕು ಕೂಡ ಮೂಸಿ ನೋಡಲ್ಲ. ಪೇಸ್ಟ್, ಸೋಪ್, ಫಿನಾಯಿಲ್ ಯಾವುದನ್ನು ಸರಿಯಾಗಿ ವಿತರಿಸುತ್ತಿಲ್ಲ. ಸರ್ಕಾರ ನೀಡೋದನ್ನು ದೋಚುತ್ತಿದ್ದಾರೆ ಎಂದು ಆರೋಪಿಸಿದ.
ಅಧಿಕಾರಿಗಳು ಹೇಳಿದಂತೆ ಕೇಳದಿದ್ದರೆ, ಆ ಕೇಸು, ಈ ಕೇಸು ಅಂತೆಲ್ಲ ಬೆದರಿಸುತ್ತಾರೆ. ಜೈಲಿನಲ್ಲಿ ಊಟದೊಳಗೆ ವಿಷ ಹಾಕ್ತೀವಿ ಅಂತಾರೆ. ಕಟಿಂಗ್, ಶೇವಿಂಗ್, ಉಗುರು ಕಟ್ ಮಾಡಲಿಕ್ಕೂ ಬಿಡುತ್ತಿಲ್ಲ. ವಕೀಲರಿಗೆ ಫೋನ್ ಮಾಡುವಂತೆ ಮನವಿ ಮಾಡಿದರೆ, ಹಿಂದಿನ ಬಾರಿ ನೀನು ದುಡ್ಡು ಕೊಟ್ಟಿಲ್ಲವೆಂದು ಪೊಲೀಸರು ಆಗಲ್ಲ ಎಂದರು. ಬಾಯರಿಕೆ ಆದರೂ ನೀರು ಕೊಡಲಿಲ್ಲ ಎಂದು ದೂರಿದ.
ಜಡ್ಜ್ ಹೇಳಿದರೆ, ಕತ್ತು ಕೊಯ್ದುಕೊಳ್ತೀನಿ: ನನ್ನಿಂದ ತಪ್ಪಾಗಿದ್ದರೆ, ಶಿಕ್ಷಿಸಲು ಕಾನೂನು-ನ್ಯಾಯಾಧೀಶರಿದ್ದಾರೆ. ಅವರ ಮುಂದೆ ಸತ್ಯ ಹೇಳಲು ಬಿಡುತ್ತಿಲ್ಲ. ಪ್ರಕರಣ ಯಾವುದು, ಸಾಹೇಬರು ಯಾರು ನನಗೆ ಗೊತ್ತಿಲ್ಲ. ನಾನೂ ಬೆಂಗಳೂರಿನವನು. ಇಲ್ಲಿಗೆ ತಂದು ಬಾಡಿ ವಾರೆಂಟ್ ಅಂತಾರೆ. ಜಡ್ಜ್ ಹೇಳಿದರೆ, ಕತ್ತು ಕೊಯ್ದುಕೊಳ್ಳಲು ಸಿದ್ಧನಿದ್ದೇನೆ. ಜಡ್ಜ್ ಮುಂದೆ ಬೇಕಾದರೆ ಸಾಯಿಸಲಿ ಎಂದು ಸಮ್ಮು ಹೇಳಿದ.
ಸ್ಥಳಕ್ಕೆ ಎಸ್‌ಪಿ ಭೇಟಿ: ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಕುಮಾರಸ್ವಾಮಿ, ಡಿವೈಎಸ್‌ಪಿ ದಿನಕರ್, ಜೈಲು ಅಧೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಘಟನೆ ಸಂಬಂಧ ನ್ಯಾಯಾಧೀಶರೊಂದಿಗೆ ಕೆಲಕಾಲ ಚರ್ಚಿಸಿದರು. ಎಫ್‌ಎಸ್‌ಎಲ್ ತಂಡ ಕೂಡ ಭೇಟಿ ನೀಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
