ಚಿತ್ರದುರ್ಗ: ಪತ್ರಿಕೆ ಸಮಾಜದ ಪ್ರತಿಬಿಂಬ. ಪ್ರಜಾಪ್ರಭುತ್ವದ ರಕ್ಷಾಕವಚವೂ ಹೌದು ಎಂದು ಸಂಸದ ಗೋವಿಂದ ಎಂ.ಕಾರಜೋಳ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತ ಎಂಬುದೇ ದೊಡ್ಡ ಸಾಧನೆಯೆಂದು ಭಾವಿಸಿಕೊಳ್ಳಿ. ಕಾಟಾಚಾರಕ್ಕೆ ವೃತ್ತಿಯಲ್ಲಿದ್ದರೆ ಪ್ರಯೋಜನವಿಲ್ಲ. ಸಾಮಾಜಿಕ ಕಳಕಳಿ ಹೆಚ್ಚಾಗಲಿ. ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪತ್ರಿಕೋದ್ಯಮ ಬೆಳೆಸಲು ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕಿದೆ ಎಂದು ಹೇಳಿದರು.
ಕವಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಮಾಧ್ಯಮ ಈ ಹಿಂದೆಯೂ ಉದ್ಯಮವಾಗಿತ್ತು. ಕೆಲವರು ಪತ್ರಿಕೋದ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾರಣ ಸಾಮಾಜಿಕ ಲೋಪ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
1970 ರಿಂದ 80 ರ ಅವಧಿಯಲ್ಲಿ ಅನೇಕ ಚಳವಳಿಗಳ ಬೆಳವಣಿಗೆಗೆ ಮಾಧ್ಯಮ ಕಾರಣವಾಗಿತ್ತು. ಈಗಲೂ ಅಂತಹ ವೈಭವ ಮರುಕಳಿಸಬೇಕಿದೆ ಎಂದರು.
ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಪತ್ರಿಕೋದ್ಯಮ ವೃತ್ತಿಗೆ ಕೆಲವರಿಂದ ಕಳಂಕ ಉಂಟಾಗುತ್ತಿದ್ದು, ಅಂತಹ ಕ್ರಿಮಿಗಳನ್ನು ಬುಡಸಮೇತ ಕಿತ್ತು ಹಾಕುವ ಮೂಲಕ ಉತ್ಕೃಷ್ಟ ಮಟ್ಟಕ್ಕೆ ಮಾಧ್ಯಮವನ್ನು ಕೊಂಡೊಯ್ಯೋಣ ಎಂದು ಸಲಹೆ ನೀಡಿದರು.
ಸ್ಟಿಂಗ್ ಆಪರೇಷನ್ ನೆಪದಲ್ಲಿ ಪತ್ರಕರ್ತರೆಂದು ಕೆಲವರು ವಸೂಲಿ, ದಂಧೆಗೆ ಇಳಿದಿದ್ದು, ಪತ್ರಿಕೋದ್ಯಮಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಸಮಾಜ ತಿದ್ದುವ ವೃತ್ತಿಯಲ್ಲಿರುವ ನಮಗೆ ಬೇರೆಯವರು ಬೊಟ್ಟು ಮಾಡಿ ತೋರಿಸಬಾರದು. ಆತ್ಮಾವಲೋಕನ ದಿನವನ್ನಾಗಿ ಆಚರಿಸಲು ಇದು ಸುಸಂದರ್ಭವಾಗಿದ್ದು, ಭ್ರಷ್ಟಾಚಾರಮುಕ್ತವಾಗಿಸಲು ಕೈಜೋಡಿಸಿ ಎಂದು ಸಲಹೆ ನೀಡಿದರು.
ಯಾವುದೇ ಮಾಧ್ಯಮ ಮತ, ಧರ್ಮ ಮತ್ತು ವಾಣಿಜ್ಯ ಪ್ರಚಾರ ಹೀಗೆ ತಮ್ಮ ಸಿದ್ಧಾಂತ ಪ್ರತಿಪಾದಿಸುವುದರಲ್ಲಿ, ಉದ್ಯಮವಾಗಿ ಸ್ವಾವಲಂಬಿಯಾಗುವುದರಲ್ಲಿ ತಪ್ಪಿಲ್ಲ. ಇದಕ್ಕೆ ಸಂವಿಧಾನ ಅವಕಾಶ ನೀಡಿದೆ. ಆದರೆ, ಹಗರಣಗಳನ್ನು ಬಯಲಿಗೆಳೆಯದಿದ್ದರೆ, ಮುಚ್ಚಿ ಹೋಗುತ್ತವೆ. ಹೀಗಾಗಿ ಪತ್ರಕರ್ತರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ರವಿ ಹೆಗಡೆ ಅವರಿಗೆ ಕೋಟೆನಾಡಿನ ಸುಪುತ್ರ ಹೆಸರಿನಲ್ಲಿ ಗೌರವ ಅರ್ಪಿಸಲಾಯಿತು. ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಎಂಎಲ್ಸಿ ಕೆ.ಎಸ್‌.ನವೀನ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಜಿಲ್ಲಾಧ್ಯಕ್ಷ ದಿನೇಶ್‌ ಗೌಡಗೆರೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್‌.ಅಹೋಬಳಪತಿ, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಇತರರಿದ್ದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seven − 5 =
Remember me
