ನವದೆಹಲಿ/ಬೆಂಗಳೂರು: ಕ್ಯಾನ್ಸರ್ ವೇಗವನ್ನೂ ಮೀರಿ ಭಾರತದಲ್ಲಿ ಬೇರು ವಿಸ್ತರಿಸಿಕೊಳ್ಳುತ್ತಿರುವ ಕರೊನಾ ಮಾರಿಯನ್ನು ಮಟ್ಟಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿರುವ ನಡುವೆಯೇ ದೇಶದಲ್ಲಿ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಈ ಆತಂಕದ ನಡುವೆಯೂ ವಿಶ್ವಾಸ ಕಳೆದುಕೊಳ್ಳದ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಾಣ ಒತ್ತೆ ಇಟ್ಟು ಹಗಲಿರುಳು ಶ್ರಮಿಸುತ್ತಿದ್ದಾರೆ.
ಪ್ರಧಾನಿ, ರಾಷ್ಟ್ರಪತಿ ಕಳಕಳಿ:ಕರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಹೋಳಿ ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ನಿರ್ಧರಿಸಿದ್ದಾರೆ. ಕರೊನಾ ವೈರಸ್ ಹರಡುವುದನ್ನು ತಡೆಯಲು ಜನರು ದೊಡ್ಡ ಗುಂಪುಗಳಲ್ಲಿ ಸೇರುವುದಕ್ಕೆ ಅವಕಾಶ ನೀಡದಂತೆ ತಜ್ಞರು ಸಲಹೆ ಮಾಡಿರುವುದರಿಂದ ತಾವು ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೋದಿ ಬುಧವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. ‘ಹೋಳಿ ಭಾರತದ ಒಂದು ಪ್ರಮುಖ ಹಬ್ಬ. ಆದರೆ ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ’ ಎಂದು ಷಾ ಹೇಳಿದ್ದಾರೆ.
ಜನರು ತಮ್ಮ ಹಾಗೂ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಕೋರಿದ್ದಾರೆ. ಸೀನು, ಕೆಮ್ಮಿನ ಮೂಲಕ ಸೋಂಕು ಹರಡುವ ಸಂಭವವಿರುವುದರಿಂದ ಜನರು ಗುಂಪು ಸೇರಬಾರದು, ಜನನಿಬಿಡ ಪ್ರದೇಶಗಳಲ್ಲಿ ಬೆರೆಯಬಾರದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಮನವಿ ಮಾಡಿದ್ದಾರೆ.
15 ಇಟಲಿಗರಿಗೆ ಸೋಂಕು: 28 ಸೋಂಕುಪೀಡಿತರ ಪೈಕಿ ಇಟಲಿಯಿಂದ ಬಂದ 15 ಪ್ರವಾಸಿಗಳಲ್ಲಿ ವೈರಾಣು ಇರುವುದು ದೃಢಪಟ್ಟಿದೆ. ಈ ನಡುವೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 90,000 ದಾಟಿದೆ. ಇಟಲಿಯ ಸೋಂಕಿತ 15 ಜನರ ಪೈಕಿ 14 ಮಂದಿಯನ್ನು ದೆಹಲಿಯಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಇವರೆಲ್ಲರೂ ಕಳೆದ ತಿಂಗಳು ರಾಜಸ್ಥಾನಕ್ಕೆ ಪ್ರವಾಸ ಬಂದ 23 ಸದಸ್ಯರ ತಂಡದಲ್ಲಿದ್ದರು. ಅವರ ಪೈಕಿ ಒಬ್ಬ ಜೈಪುರದಲ್ಲಿದ್ದು ಆತನ ಹಾಗು ಪತ್ನಿಯ ಫಲಿತಾಂಶ ಪಾಸಿಟಿವ್ ಬಂದಿದೆ. ಒಂದೇ ಗುಂಪಿನಲ್ಲಿ ಇಷ್ಟೊಂದು ಜನರು ಕರೊನಾ ಸೋಂಕಿತರಾಗಿರುವುದು ಭಾರತದಲ್ಲಿ ಇದೇ ಮೊದಲ ಪ್ರಕರಣ. ಈ ನಡುವೆ ಹೈದರಾಬಾದ್​ನಲ್ಲಿ ಇನ್ನೂ ಇಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಗುರುಗ್ರಾಮದಲ್ಲಿರುವ ಪೇಟಿಎಂ ನೌಕರನೊಬ್ಬನಿಗೆ ಸೋಂಕಿರುವುದು ದೃಢಪಟ್ಟಿದೆ ಎಂದು ಕಂಪನಿ ತಿಳಿಸಿದೆ. ರಜೆ ಕಳೆಯಲು ಇಟಲಿಗೆ ಹೋಗಿದ್ದ ಈ ನೌಕರ ಇತ್ತೀಚೆಗೆ ಮರಳಿದ್ದ.
ಕರೊನಾ ಸೋಂಕು ಕುರಿತು ಯಾರೂ ವದಂತಿ ಹರಡಬಾರದು. ಹಾಗೇನಾದರೂ ಮಾಡಿದರೆ ಅಂತಹವರ ವಿರುದ್ಧ ಕೇರಳ, ತೆಲಂಗಾಣ ಮಾದರಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಲಾಗುವುದು.
| ಪಂಕಜ್ ಕುಮಾರ್ ಪಾಂಡೆ, ಆರೋಗ್ಯ ಇಲಾಖೆ ಆಯುಕ್ತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 16 =
Remember me
