ಯಾದಗಿರಿ:ರಾತ್ರೋರಾತ್ರಿ ಕಳ್ಳತನವಾಗಿದ್ದ ಜೋಡೆತ್ತು ಕಳ್ಳರಿಂದ ತಪ್ಪಿಸಿಕೊಂಡು ಅನ್ನದಾತನನ್ನೆ ಹುಡುಕಿಕೊಂಡು ರೈತನ ಮನೆ ಮುಂದೆ ಬಂದು ನಿಂತಿವೆ. ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ.
ಸಗರ ಗ್ರಾಮದ ರೈತ ತಿರುಪತಿ ಎನ್ನುವವರಿಗೆ ಸೇರಿದ್ದ ಜೋಡೆತ್ತುಗಳನ್ನು ಖದೀಮರು ತಡರಾತ್ರಿ ಕಳ್ಳತನ ಮಾಡಿದ್ದರು. ಬೆಳಗಿನ ಜಾವ 4 ಗಂಟೆಗೆ ಕೊಟ್ಟಿಗೆ ನೋಡಿದ ರೈತನಿಗೆ ತನ್ನ ಎತ್ತುಗಳು ಕಾಣದೆ ಇದ್ದಾಗ ಗೋಳಾಡಿದ್ದ. ಬೆನ್ನೆಲುಬಾದ ಎತ್ತುಗಳು ಇಲ್ಲದಕ್ಕೆ ಕಂಗಲಾಗಿ ಕಣ್ಣೀರಿಟ್ಟಿದ್ದ. ನನ್ನ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತುಗಳು ಕಳೆದಿವೆ ಎಂದು ರೋಧಿಸಿದ್ದ.
ಗ್ರಾಮಸ್ಥರು ಎತ್ತುಗಳು ಹುಡುಕೋಣ ಎಂದು ರೈತ ತಿರುಪತಿಗೆ ಧೈರ್ಯ ತುಂಬಿದ್ರು, ಕಣ್ಣೀರು ಹಾಕುತ್ತಾ ಎತ್ತುಗಳಿಗಾಗಿ ಕಾಯುತ್ತಾ ಕುಳಿತಿದ್ದ ತಿರುಪತಿ. ಆದರೆ ಅದೇನಾಯ್ತೋ ಗೊತ್ತಿಲ್ಲ ಎತ್ತುಗಳು ಕಳ್ಳರಿಂದ ತಪ್ಪಿಸಿಕೊಂಡು ಸಗರ ಗ್ರಾಮದಲ್ಲಿರುವ ತನ್ನ ಮಾಲೀಕನ ಮನೆಗೆ ಬಂದಿವೆ. ಎತ್ತು ಕಾಣದೆ ಬೇಸರದಿಂದ ಕುಳಿತಿದ್ದ ರೈತನಿಗೆ ಎತ್ತುಗಳು ಕಾಣುತ್ತಿದ್ದಂತೆ ಸಂತೋಷವಾಗಿದೆ. ರೈತ ತಿರುಪತಿ ಮರಳಿ ಬಂದ ಎತ್ತುಗಳ ಮೈ ಸವರಿ ಪ್ರೀತಿ ತೊರಿದ್ದಾರೆ.
ಹಿರಿಯ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
