ಬಾಗಲಕೋಟೆ:ಲೋಕ ಕಲ್ಯಾಣಾರ್ಥವಾಗಿ ಜಿಲ್ಲೆಯ ನವನಗರದ ಸೆಕ್ಟರ್ ನಂಬರ್ 8ರಲ್ಲಿ. ಶ್ರೀ ಧರ್ಮಸ್ಥಳ ಮಂಜನಾಥ‌ ಮಹಿಳಾ ಸಂಘ ಹಾಗೂ ಸ್ತ್ರೀ ಶಕ್ತಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮಹಿಳೆಯರು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ, ಒಂದು ಕೋಟಿ ಶಿವಲಿಂಗಗಳನ್ನ ತಯಾರಿಸಿದ್ದಾರೆ.
ಫೆ.18 ರ ಶಿವರಾತ್ರಿಯಂದು ಬಾಗಲಕೋಟೆಯ ಬಸವೇಶ್ವರ ಮಹಾವಿದ್ಯಾಲಯದ ಮೈದಾನದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ. ಪೂಜೆಯ ಬಳಿಕ ಈ ಮಹಿಳೆಯರು ಕಾಶಿ ಮತ್ತು ಕೂಡಲಸಂಗಮದಲ್ಲಿ ಶಿವಲಿಂಗಗಳನ್ನ ವಿಸರ್ಜನೆ ಮಾಡಲಿದ್ದಾರೆ. ನಿತ್ಯ ಸರತಿ ಸಾಲಿನಂತೆ ಮಹಿಳೆಯರು ಸೆಕ್ಟರ್ ನಂಬರ್ 8ರ‌ ಸಭಾಭವನ ಒಂದರಲ್ಲಿ ಲಿಂಗಗಳನ್ನ ತಯಾರಿಸಿದ್ದಾರೆ. ಕಳೆದ ಒಂದು ವರ್ಷದಿಂದ ಲಿಂಗ ತಯಾರಿಕೆ ಮಾಡುತ್ತಿದ್ದು, ಕೋಟಿ ಲಿಂಗಗಳನ್ನು ತಯಾರಿಸಿ ವಿಶೇಷ ರೀತಿಯಲ್ಲಿ ಭಕ್ತಿ ಮೆರೆಯುತ್ತಿದ್ದಾರೆ.
ಮಹಿಳೆಯರ ಕೋಟಿ ಲಿಂಗಗಳ ತಯಾರಿ ಎಲ್ಲರ‌ ಮೆಚ್ಚುಗೆಗೆ ಮಾತ್ರವಾಗಿದೆ. ಮಹಾಶಿವರಾತ್ರಿಗೆ ಶಿವನಿಗೆ ವಿಶೇಷ ವಾಗಿ ಭಕ್ತಿ ಸಮರ್ಪಿಸಿ ಇವರು ಗಮನ ಸೆಳೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 8 =
Remember me
