ಬೆಂಗಳೂರು:ಲವಂಗವು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಮಸಾಲೆಗಳಲ್ಲಿ ಒಂದಾಗಿದೆ. ಲವಂಗವು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಲವಂಗವನ್ನು ಅಡುಗೆಗೆ ಮಾತ್ರವಲ್ಲದೆ ಟೀ ಮಾಡಿ ಸೇವನೆ ಮಾಡಿದ್ರೂ ಕೂಡಾ ಆರೋಗ್ಯಕ್ಕೆ ಅನೇಕ ಲಾಭಗಳಿವೆ…
ಲವಂಗದಲ್ಲಿ ವಿಟಮಿನ್-ಬಿ1, ವಿಟಮಿನ್-ಸಿ, ಬೀಟಾ-ಕ್ಯಾರೋಟಿನ್ ಮುಂತಾದ ಪ್ರಮುಖ ಪೋಷಕಾಂಶಗಳಿವೆ. ಅಲ್ಲದೆ ಇವುಗಳಲ್ಲಿರುವ ವಿಟಮಿನ್-ಕೆ, ಪ್ರೊಟೀನ್, ಕಾರ್ಬೋಹೈಡ್ರೇಟ್ ಗಳಂತಹ ಪೋಷಕಾಂಶಗಳು ದೇಹವನ್ನು ಸದೃಢವಾಗಿಡಲು ನೆರವಾಗುತ್ತವೆ.
ಲವಂಗ ಟೀ  ಮಾಡುವ ವಿಧಾನ:ಕುದಿಯುವ ನೀರಿಗೆ ಎರಡು ಲವಂಗ ಮತ್ತು ಒಂದು ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಕುದಿಸಿದರೆ ವಿವಿಧ ದೈಹಿಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅಲ್ಲದೆ ಪ್ರತಿದಿನ ಊಟದ ನಂತರ ಈ ಚಹಾವನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮತ್ತು ರೋಗಗಳು ಗುಣವಾಗುತ್ತವೆ.
ಆಹಾರದಲ್ಲಿ ಸೇವಿಸಿದರೆ ಆಯಾಸ, ನಿದ್ರಾಹೀನತೆ ಮತ್ತು ದುರ್ವಾಸನೆ ಹೋಗಲಾಡಿಸಲು ಉಪಯುಕ್ತ.
ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯಲು ಪ್ರತಿದಿನ 2 ಲವಂಗವನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಲವಂಗವು ಜೀರ್ಣಕ್ರಿಯೆಗೆ ಅತ್ಯುತ್ತಮ ಔಷಧವಾಗಿದೆ.
ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಎರಡು ಲವಂಗವನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಲವಂಗದಲ್ಲಿ ಫೈಬರ್ ಸಮೃದ್ಧವಾಗಿದೆ.


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − fourteen =
Remember me
