ಬೆಳಗಾವಿ:ಸರ್ಕಾರ ನಡೆಸುವ ಶೈಕ್ಷಣಿಕ ಹಾಗೂ ನೇಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಠಿಣ ಕಾನೂನು ತರಲು ಮುಂದಾಗಿರುವ ಸರ್ಕಾರ ವಿಧೇಯಕವನ್ನು ಶಾಸನ ಸಭೆ ಮುಂದೆ ಮಂಡಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಹಾಗೂ ನೇಮಕ ಸಂಬಂಧಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಗಳು ಬಹಿರಂಗವಾಗುತ್ತಿದ್ದರಿಂದ ಸರ್ಕಾರ ಮುಜುಗರ ಅನುಭವಿಸಿತ್ತು. ಎಷ್ಟೇ ಕಠಿಣ ಕ್ರಮಕೈಗೊಂಡರೂ ಅಕ್ರಮದ ಜಾಲ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿತ್ತು. ಸಾರ್ವಜನಿಕ ಪರೀಕ್ಷೆಗಳ ಅಕ್ರಮ ಹಾಗೂ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಬಳಕೆ ಮಿತಿ ಮೀರುತ್ತಿರುವುದರಿಂದ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ, 2023ನ್ನು ತರಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಹಾಗೂ ಹಿತಾಸಕ್ತಿಗಳಿಗೆ ಅಗಾಧ ಪ್ರಮಾಣದ ಹಣಕಾಸಿನ ಅನುಕೂಲ ಲಭ್ಯವಾಗಲಿದೆ. ಇದು ರಾಜ್ಯದ ಯುವ ಜನತೆಯ ಪ್ರಗತಿಯ ಅವಕಾಶಗಳನ್ನು ಕುಂಠಿತಗೊಳಿಸುತ್ತದೆ. ಸರ್ಕಾರಕ್ಕೂ ಹೊರೆ ಹೆಚ್ಚಿಸಲಿದೆ. ರಾಜ್ಯದ ಗೌರವಕ್ಕೂ ಚ್ಯುತಿಯಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಹೀಗಾಗಿ ಅಕ್ರಮ ಪ್ರತಿಬಂಧಿಸಲು ಹೊಸ ಕಾನೂನು ತರಲಾಗುತ್ತಿದ್ದು, ಅಕ್ರಮದಲ್ಲಿ ಪಾಲ್ಗೊಂಡವರಿಗೆ ಹತ್ತು ವರ್ಷಗಳ ವರೆಗೆ ದಂಡನೆ ಮತ್ತು ಜುಲ್ಮಾನೆ ರೂಪದಲ್ಲಿ ಹತ್ತು ಕೋಟಿ ರೂ. ವರೆಗಿನ ದಂಡ ವಿಧಿಸಲಾಗುತ್ತದೆ. ಜತೆಗೆ ಸ್ವತ್ತುಗಳ ಜಪ್ತಿ, ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಉಪ ಬಂಧಗಳನ್ನು ಒಳಗೊಂಡಿದೆ.
ಕಾಯ್ದೆಯ ಪರಿಧಿ:ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸರ್ಕಾರದ ಮೂಲಕ ರಚಿಸಲಾದ ಅಥವಾ ಈ ಕಾರ್ಯದಲ್ಲಿ ನಿರತವಾದ ಇತರ ಪ್ರಾಧಿಕಾರ, ಏಜೆನ್ಸಿ, ರಾಜ್ಯದ ಧನಸಹಾಯ ನೀಡಿದ ವಿಶ್ವವಿದ್ಯಾಲಯ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, ಕರ್ನಾಟಕ ಪೊಲೀಸ್ ನೇಮಕಾತಿ ಮತ್ತು ಮುಂಬಡ್ತಿ ಮಂಡಳಿ, ಸರ್ಕಾರವು ಅಧಿಸೂಚಿಸಿದ ಯಾವುದೇ ಇತರ ಪ್ರಾಧಿಕಾರಗಳಿಗೆ ಈ ಮಸೂದೆಗೂ ಆಗಲಿದೆ.
ವ್ಯಾಪ್ತಿ ವಿಸ್ತಾರ:ಪರೀಕ್ಷೆಗೆ ಮುನ್ನ ನಡೆಯುವ ಪ್ರಶ್ನೆ ಪತ್ರಿಕೆ ಯಾವುದೇ ಭಾಗವನ್ನು ಸಂಗ್ರಹಿಸುವುದು, ವಿತರಿಸುವ ವಿಚಾರ, ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾರ್ಥಿಯಲ್ಲದ ಯಾರೇ ವ್ಯಕ್ತಿ ಪ್ರವೇಶಿಸದಂತೆ ತಡೆಯುವುದು, ಪರೀಕ್ಷೆಗೆ ಗುರುತು ಮಾಡಿದ ಸ್ಥಳ ಹೊರತು ಅನ್ಯ ಸ್ಥಳ ಬಳಸದಂತೆ, ಆಡಳಿತ ಮಂಡಳಿಗಳ ನಿಯಂತ್ರಣದ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಶಿಕ್ಷೆ ಪ್ರಮಾಣ:ಪರೀಕ್ಷಾರ್ಥಿ ಅನುಚಿತ ವರ್ತನೆಗೆ ಐದು ವರ್ಷದವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ, ಹತ್ತು ಲಕ್ಷ ರೂ. ಗೆ ಕಡಿಮೆ ಇಲ್ಲದಂತೆ ದಂಡ, ಒಳಸಂಚು ನಡೆಸುವ ವ್ಯಕ್ತಿಗೆ ಎಂಟು ವರ್ಷಕ್ಕೆ ಕಡಿಮೆ ಇಲ್ಲದಂತೆ 12 ವರ್ಷದ ವರೆಗೆ ಕಾರಾಗೃಹ ವಾಸ ಮತ್ತು 15 ಲಕ್ಷಕ್ಕೆ ಕಡಿಮೆ ಇಲ್ಲದಂತೆ 10 ಕೋಟಿವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ವಿಧಿಸಲು ಅವಕಾಶ ನೀಡಲಾಗುತ್ತಿದೆ.
ತೆರಿಗೆ ವಿಧೇಯಕ ಮಂಡನೆ:ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಆನ್​ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಮೇಲಿನ ತೆರಿಗೆ ವಿಚಾರವಾಗಿ ಜಿಎಸ್​ಟಿ ಕೌನ್ಸಿಲ್ ಸೂಚನೆಯಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಈಗ ವಿಧೇಯಕ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
