ಶಿವಮೊಗ್ಗ:ಎರಡು ಬಸ್​ಗಳ ನಡುವೆ ಮುಖಾಮುಖಿಯಾಗಿ ಭೀಕರ ರಸ್ತೆ ಅಪಘಾತ ಆಗಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಕುಂಸಿ ಬಳಿಯ ಚೋರಡಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಹಲವಾರು ಮಂದಿ ಮೃತಪಟ್ಟಿದ್ದು ಸಾವಿಗೀಡಾದವರ ಸಂಖ್ಯೆ ಇನ್ನು ಖಚಿತವಾಗಿಲ್ಲ.
ಶಿಕಾರಿಪುರದಿಂದ ಶಿವಮೊಗ್ಗ ನಗರದ ಕಡೆಗೆ ಬರುತ್ತಿದ್ದ ವೆಂಕಟಮಹಾಲಕ್ಷ್ಮೀ ಹೆಸರಿನ ಖಾಸಗಿ ಬಸ್​ ಹಾಗೂ ಶಿವಮೊಗ್ಗದಿಂದ ಶಿಕಾರಿಪುರದೆಡೆಗೆ ತೆರಳುತ್ತಿದ್ದ ಶ್ರೀನಿವಾಸ ಹೆಸರಿನ ಬಸ್​ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಶಿವಮೊಗ್ಗ-ಸಾಗರ ರಸ್ತೆಯ ಚೋರಡಿ ಬಳಿ ಇರುವ ಕುಮದ್ವತಿ ಬಳಿ ಘಟನೆ ನಡೆದಿದ್ದು ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ಅಟೆಂಡರ್​ನಿಂದ ಶಾಲಾ ಬಾಲಕಿಗೆ ಕಿರುಕುಳ; ಆರೋಪಿ ವಶಕ್ಕೆ
ಅಪಘಾತದ ಭೀಕರವಾಗಿದ್ದು ಎರಡು ಬಸ್​ಗಳು ಒಂದರೊಳಗೊಂದು ಸಿಲುಕಿಕೊಂಡಿವೆ. ಸಾವಿಗೀಡಾದವರ ಸಂಖ್ಯೆ ಬಗ್ಗೆ ಇನ್ನು ತಿಳಿದಿಲ್ಲ ಎಂದು ಪ್ರತ್ಯಕ್ಷದರ್ಶಿ ಒಬ್ಬರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್​ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಹಲವರಿಗೆ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 2 =
Remember me
