ಬೆಂಗಳೂರು:ತಾಂತ್ರಿಕ ಸಮಸ್ಯೆಯಿಂದಾಗಿ ಬೆಂಗಳೂರು ನಗರ ಕಮಿಷನರೇಟ್ ಸೇರಿ ರಾಜ್ಯದ ಕೆಲವು ವಿಭಾಗಗಗಳ ಪೊಲೀಸರಿಗೆ ಎರಡು ವಾರ ಕಳೆದರೂ ಫೆಬ್ರವರಿ ತಿಂಗಳ ವೇತನ ಕೈಸೇರಿಲ್ಲ. ನಿತ್ಯದ ಖರ್ಚುವೆಚ್ಚ, ಮಕ್ಕಳ ಶಾಲಾ ಶುಲ್ಕ, ಸಾಲದ ಕಂತು ಪಾವತಿಗೆ ಹಣವಿಲ್ಲದೆ ಪೊಲೀಸರಿಗೆ ಪೀಕಲಾಟವಾಗಿದೆ.
ಪ್ರತಿ ತಿಂಗಳ ಕೊನೇ ದಿನ ಅಥವಾ ತಿಂಗಳ ಮೊದಲ ದಿನ ವೇತನ ಖಾತೆಗೆ ಜಮೆ ಆಗುತ್ತಿತ್ತು. ಫೆಬ್ರವರಿಯಲ್ಲಿ ಮಾತ್ರ ಈ ಸಮಸ್ಯೆ ಆಗಿದೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ. ಶೇ.90 ಮಂದಿಗೆ ವೇತನ ಆಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಶೇ.10 ಮಂದಿಗೆ ವೇತನ ಸಿಕ್ಕಿಲ್ಲ.
ರಾಜ್ಯ ಸರ್ಕಾರ ನೌಕರರಿಗೆ ಸಂಬಳವನ್ನು ಖಜಾನೆ-1 ಮೂಲಕ ನೀಡುತ್ತಿತ್ತು. ತಂತ್ರಜ್ಞಾನ ಅಳವಡಿಸಿಕೊಂಡು ಖಜಾನೆ-2ನಲ್ಲಿ ವೇತನ ಮಂಜೂರು ಮಾಡುತ್ತಿದೆ. ಇದನ್ನು ತಿಳಿಯದ ಕೆಲವರು ಖಜಾನೆ-1ಗೆ ಡಿಮಾಂಡ್ ಡ್ರಾಫ್ಟ್ ಸಲ್ಲಿಸಿದ್ದರು. ಅದರಿಂದ ವಾಪಸ್ ಬಂದಿದೆ. ಹೊಸ ಡಿಡಿ ಸಿದ್ಧಪಡಿಸಿ ಖಜಾನೆ-2ಗೆ ಸಲ್ಲಿಕೆ ಮಾಡಿದ್ದು, ಶೀಘ್ರ ವೇತನ ಸಿಗಲಿದೆ ಎಂದು ಪೊಲೀಸ್ ಪ್ರಧಾನ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಟೆಕ್ಕಿಗಳೇ ಹುಷಾರ್​!: ಬೆಂಗಳೂರಿನ ಎರಡು ಟಾಪ್​ ಟೆಕ್​ ಕಂಪನಿಗಳಲ್ಲೇ ಕರೊನಾ ಕಾಣಿಸಿಕೊಂಡಿದ್ದು

ಟ್ರಾಫಿಕ್​ ಪೊಲೀಸರಿಗೆ ದೊಡ್ಡ ತಲೆನೋವು ತಂದಿಟ್ಟ ಕರೊನಾ ವೈರಸ್​; ಅಂಥದ್ದೇನಾಗ್ತಿದೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
