ಬೆಂಗಳೂರು:ನಗರದ ಪೊಲೀಸರಿಗೆ ಕರೊನಾ ಬೆಂಬಿಡದೆ ಕಾಡುತ್ತಿದೆ. ಕಳೆದ 24 ಗಂಟೆಯಲ್ಲಿ 16 ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿರುವ ವರದಿ ಭಾನುವಾರ ಬಂದಿದೆ. ಈ ಪೈಕಿ ಚಿಕಿತ್ಸೆ ಫಲಿಸದೆ ಸಹಾಯಕ ಸಬ್​ಇನ್​ಸ್ಪೆಕ್ಟರ್ ಮೃತಪಟ್ಟಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಪೊಲೀಸರ ಸುರಕ್ಷತೆ ಸಲುವಾಗಿ 55 ವರ್ಷ ಮೇಲ್ಪಟ್ಟ ಅಧಿಕಾರಿ/ಸಿಬ್ಬಂದಿಗೆ ರಜೆ ಸೇರಿ 10 ಸೂಚನೆಗಳನ್ನು ಆಯುಕ್ತ ಭಾಸ್ಕರ್ ರಾವ್ ನೀಡಿದ್ದಾರೆ.
ಅಗ್ನಿಶಾಮಕ ದಳದ ನೌಕರನಿಗೆ ಸೋಂಕು
ಹೈಗ್ರೌಂಡ್ಸ್ ಸಮೀಪ ಇರುವ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 32 ವರ್ಷದ ನೌಕರನಿಗೆ ಸೋಂಕು ತಗುಲಿದೆ. ಇತ್ತೀಚೆಗೆ ಸ್ಯಾನಿಟೈಸರ್ ಸಿಂಪಡಿಸಲು ಕಂಟೇನ್ಮೆಂಟ್ ಜೋನ್​ಗೂ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಎಸ್​ಐ ಸಾವು:ವಿಲ್ಸನ್ ಗಾರ್ಡನ್ ಸಂಚಾರ ಠಾಣೆಯ 59 ವರ್ಷದ ಎಎಸ್​ಐ ಮೃತರು. ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಜೂ. 16ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕೋವಿಡ್ ಪರೀಕ್ಷೆ ಒಳಪಡಿಸಿದಾಗ ಸೋಂಕು ತಗುಲಿರುವುದು ಗೊತ್ತಾಗಿದೆ. ಚಿಕಿತ್ಸೆ ಫಲಿಸದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಕಲಾಸಿಪಾಳ್ಯ ಎಸ್​ಐ ಸೇರಿ 14 ಮಂದಿಗೆ ಬಂಡೇಪಾಳ್ಯ-1 ಮತ್ತು ಕೋರಮಂಗಲ ಠಾಣೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಕಲಾಸಿಪಾಳ್ಯ ಠಾಣೆಯ ಸೋಂಕಿಗೆ ಒಳಗಾಗುತ್ತಿರುವ ಸಿಬ್ಬಂದಿ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಬಂಡೇಪಾಳ್ಯ ಮತ್ತು ಕೋರಮಂಗಲ ಠಾಣೆಯ 21 ಮಂದಿ ಸಂರ್ಪತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಎರಡೂ ಠಾಣೆಗಳನ್ನು ಸೀಲ್​ಡೌನ್ ಮಾಡುವ ಪ್ರಕ್ರಿಯೆ ನಡೆದಿದೆ.
ಪೊಲೀಸರ ಸುರಕ್ಷತೆಗೆ 10 ಸೂತ್ರಗಳು55 ವರ್ಷ ಮೇಲ್ಪಟ್ಟ ಅಧಿಕಾರಿ/ಸಿಬ್ಬಂದಿಗೆ ವಿಶ್ರಾಂತಿ, ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ. · ಠಾಣೆ ಹೊರಗೆ ಶಾಮಿಯಾನ ಹಾಕಿ ಅಲ್ಲಿಯೇ ಜನರ ಸಮಸ್ಯೆ ಆಲಿಸಬೇಕು · ದೂರು ಆಲಿಸುವಾಗ ವ್ಯಕ್ತಿಗತ ಅಂತರ, ಮಾಸ್ಕ್, ಕೈಗವಸು, ಅಗತ್ಯವಿದ್ದರೆ ಪಿಪಿಇ ಕಿಟ್ ಬಳಸಬೇಕು · ನಿಗದಿತ ಸ್ಥಳದಲ್ಲೇ ಹೊಯ್ಸಳ, ಚೀತಾ ಕರ್ತವ್ಯ. ಪದೇಪದೆ ಠಾಣೆಗೆ ಬರುವಂತಿಲ್ಲ. · ಪ್ರಮುಖ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಬೇಕು. ಡಿಸಿಪಿ, ಎಸಿಪಿ ಅನುಮತಿ ಕಡ್ಡಾಯ. · ಪ್ರತಿ ಠಾಣೆಗೆ 25 ಸಿಬ್ಬಂದಿಗೆ ಅಗತ್ಯವಿರುವಷ್ಟು ಸೌಕರ್ಯ ಇರುವ ಕಲ್ಯಾಣ ಮಂಟಪ ಗುರುತು. · ಠಾಣೆಯ ಯಾವುದೇ ನೌಕರನಿಗೆ ಪಾಸಿಟಿವ್ ಬಂದಿದ್ದರೆ ಆತ್ಮಸ್ಥೈರ್ಯ ತುಂಬಬೇಕು. · ಠಾಣೆಗೆ ಬಂದು ಸಹಿ ಮಾಡಲು ಹಾಗೂ ವಶಪಡಿಸಿಕೊಳ್ಳಲು ತಂತ್ರಜ್ಞಾನ ಬಳಸುವುದು. ಶಂಕಿತರನ್ನು ಠಾಣೆಗೆ ಕರೆಸದಿರುವುದು. · ಜೀಪು, ದ್ವಿಚಕ್ರ ವಾಹನಗಳನ್ನು ಪ್ರತಿದಿನ ಸ್ಯಾನಿಟೈಜರ್ ಮಾಡುವುದು. · ಪೊಲೀಸ್ ಕ್ವಾರ್ಟರ್ಸ್​ಗಳಿಗೆ ಅಪರಿಚಿತರ ಪ್ರವೇಶ ನಿರ್ಬಂಧ.
ಟ್ರೋಲ್​ಗೆ ಹೆದರಿದ ಸೋನಾಕ್ಷಿ ಸಿನ್ಹಾ…! ಟ್ವಿಟರ್ ಖಾತೆ ಡಿ- ಆ್ಯಕ್ಟಿವೇಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nineteen =
Remember me
