ಹರೀಶ್ ಬೇಲೂರು ಬೆಂಗಳೂರುರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರಿದೆ. 1994ರಿಂದ 2023ರವರೆಗೆ ಅಂದರೆ 29 ವರ್ಷದಲ್ಲಿ ಬರೀ 100 ಕೇಸ್ ದಾಖಲಿಸಿದೆ. 31 ಜಿಲ್ಲೆಗಳ ಪೈಕಿ 14 ಜಿಲ್ಲೆಗಳಲ್ಲಿ ಇದುವರೆಗೆ ಒಂದೂ ಕೇಸ್ ದಾಖಲಿಸಿಲ್ಲ. ಆರು ಜಿಲ್ಲೆಗಳಲ್ಲಿ ತಲಾ ಒಂದು ಕೇಸ್ ವರದಿಯಾದರೆ, ಉಳಿದ ಜಿಲ್ಲೆಗಳಲ್ಲೂ ಬೆರಳೆಣಿಕೆಯಷ್ಟು ಪ್ರಕರಣಗಳು ದಾಖಲಾಗಿವೆ. ಇತರ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಅತಿ ಹೆಚ್ಚು, ಅಂದರೆ 31 ಕೇಸ್ ವರದಿಯಾಗಿದೆ. ಸಾವಿರಾರು ಪ್ರಕರಣಗಳು ನಡೆದಿದ್ದರೂ ಬೆರಳೆಣಿಕೆ ಕೇಸ್​ಗಳು ಮಾತ್ರ ಬೆಳಕಿಗೆ ಬರುತ್ತಿದ್ದು, ಉಳಿದವು ಮುಚ್ಚಿಹೋಗಿವೆ.
ಭ್ರೂಣ ಹತ್ಯೆ ತಡೆಗೆ ಆರೋಗ್ಯ ಇಲಾಖೆಯಲ್ಲಿ ರಾಜ್ಯಮಟ್ಟದ ಸಲಹಾ ಸಮಿತಿ ಇದೆ. ಈ ಸಮಿತಿಗೆ ಆರೋಗ್ಯ ಸಚಿವರು ಮುಖ್ಯಸ್ಥರು, ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ರಾಜ್ಯ ಸಕ್ಷಮ ಪ್ರಾಧಿಕಾರ, ರಾಜ್ಯ ಸಲಹಾ ಸಮಿತಿಗಳಿವೆ. ಈ ಸಲಹಾ ಸಮಿತಿ ವ್ಯಾಪ್ತಿಗೆ 8 ತಾಂತ್ರಿಕ ಅಧಿಕಾರಿಗಳು, ವಿವಿಧ ವೈದ್ಯರು ಬರುತ್ತಾರೆ. ತಪಾಸಣೆ ಮತ್ತು ಮೇಲ್ವಿಚರಣಾ ಸಮಿತಿಯೂ ಇರುತ್ತದೆ. ಈ ಸಮಿತಿಗೆ ಯೋಜನಾ ನಿರ್ದೇಶಕರು, ಸದಸ್ಯ ಕಾರ್ಯದರ್ಶಿಯಾಗಿ ವೈದ್ಯರು ಇರುತ್ತಾರೆ. ಇವೆಲ್ಲಾ ರಾಜ್ಯ ಮಟ್ಟದ ಸಮಿತಿಗಳಾಗಿವೆ. ಈ ಸಮಿತಿಗಳು ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್, ನರ್ಸಿಂಗ್ ಆಸ್ಪತ್ರೆ, ರೋಗನಿರ್ಣಯ ಕೇಂದ್ರಗಳ ಮೇಲೆ ದಾಳಿ ನಡೆಸಿ ನಿಯಮ ಪಾಲನೆ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಆದರೆ, ಈ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಮೂರು ಸಮಿತಿಗಳಿವೆ. ಜಿಲ್ಲಾ ಸಕ್ಷಮ ಪ್ರಾಧಿಕಾರ, ಜಿಲ್ಲಾ ಸಲಹಾ ಸಮಿತಿ, ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣಾ ಸಮಿತಿಗಳಿವೆ. ಈ ಸಮಿತಿಯಲ್ಲಿ ಡಿಎಚ್​ಒ ಸೇರಿ ಇತರೆ ಅಧಿಕಾರಿಗಳು ಇರುತ್ತಾರೆ. ಇವರು 3 ತಿಂಗಳಿಗೊಮ್ಮೆ ನರ್ಸಿಂಗ್ ಆಸ್ಪತ್ರೆಗಳು, ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್​ಗಳ ಮೇಲೆ ದಾಳಿ ನಡೆಸಬೇಕು. ಆದರೆ, ನೆಪ ಮಾತ್ರ ದಾಳಿ ನಡೆಸುವ ಅಧಿಕಾರಿಗಳು ಮಾಮೂಲಿ ಪಡೆದು ಸುಮ್ಮನಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.
ಈ ಸಮಿತಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸೇರಿ ಇತರೆ ಅಧಿಕಾರಿಗಳು ಇರುತ್ತಾರೆ. ಈ ಸಮಿತಿಗಳು ನಿಯಮದಂತೆ ಮೂರು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿರುವ ನರ್ಸಿಂಗ್ ಆಸ್ಪತ್ರೆಗಳು, ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್​ಗಳ ಮೇಲೆ ದಾಳಿ ನಡೆಸಬೇಕು. ಆದರೆ, ನೆಪ ಮಾತ್ರಕ್ಕೆ ಒಂದೆರಡು ಕಡೆ ದಾಳಿ ನಡೆಸುವ ಅಧಿಕಾರಿಗಳು ಮಾಮೂಲಿ ಪಡೆದು ಸುಮ್ಮನಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.
6,300 ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್:ರಾಜ್ಯದಲ್ಲಿ 6,300ಕ್ಕೂ ಅಧಿಕ ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್​ಗಳಿವೆ ಎಂದು ಇಲಾಖೆಯೇ ಮಾಹಿತಿ ಕೊಟ್ಟಿದೆ. ಇಲಾಖೆ ಅನುಮತಿ ಪಡೆಯದೆ ಪ್ರತಿ ವರ್ಷ ನೂರಾರು ಸ್ಕಾ್ಯನಿಂಗ್ ಸೆಂಟರ್​ಗಳು ಅಕ್ರಮವಾಗಿ ಪ್ರಾರಂಭವಾಗುತ್ತಿವೆ. ಶೇ.70 ಸ್ಕಾ್ಯನಿಂಗ್ ಸೆಂಟರ್​ಗಳು ನಿಯಮ ಪಾಲಿಸುತ್ತಿಲ್ಲ. ಹಣದ ಆಸೆಗಾಗಿ ಈ ಸೆಂಟರ್​ಗಳಲ್ಲಿ ಮೂರು ತಿಂಗಳಿಂದ ಆರು ತಿಂಗಳದೊಳಗಿನ ಭ್ರೂಣವನ್ನು ಪರೀಕ್ಷಿಸಿ ಹೆಣ್ಣು ಅಥವಾ ಗಂಡು ಎಂಬುದನ್ನೂ ಹೇಳುತ್ತಾರೆ. ಬಳಿಕ, ಹೆಣ್ಣಾದರೆ ಭ್ರೂಣವನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದು ಮಹಿಳಾ ಸಂಘಟನೆಗಳ ಆರೋಪವಾಗಿದೆ.
ದಾಖಲಾದ ಭ್ರೂಣ ಹತ್ಯೆ ಕೇಸ್​ಗಳು:ಬೆಂಗಳೂರು-31, ಬೆಳಗಾವಿ-15, ವಿಜಯಪುರ-14, ತುಮಕೂರು-6, ಮಂಡ್ಯ-6, ಚಿಕ್ಕಬಳ್ಳಾಪುರ-5, ಬಾಗಲಕೋಟೆ-5, ಕೋಲಾರ-4, ಧಾರವಾಡ-4, ರಾಮನಗರ-2, ಮೈಸೂರು-2, ಚಿತ್ರದುರ್ಗ-1, ದಾವಣಗೆರೆ-1, ಶಿವಮೊಗ್ಗ-1, ಹಾಸನ-1, ಕಲಬುರಗಿ-1.
ಶೂನ್ಯ ಕೇಸ್ ಹೊಂದಿರುವ ಜಿಲ್ಲೆಗಳು:ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಉಡುಪಿ, ಗದಗ, ಹಾವೇರಿ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ಬೀದರ್, ಬಳ್ಳಾರಿ, ಯಾದಗಿರಿ, ವಿಜಯನಗರ.
5 ವರ್ಷ ಜೈಲು ಶಿಕ್ಷೆ:ಮೊದಲ ಬಾರಿ ಭ್ರೂಣ ಹತ್ಯೆಯಲ್ಲಿ ಸಿಕ್ಕಿಬೀಳುವವರಿಗೆ ಮೂರು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, ಎರಡನೇ ಬಾರಿ ಸಿಕ್ಕಿಬೀಳುವವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, 100 ಕೇಸ್​ಗಳ ಪೈಕಿ 76 ಕೇಸ್​ಗಳು ಖುಲಾಸೆಗೊಂಡರೆ, 24 ಕೇಸ್​ಗಳು ಬಾಕಿ ಉಳಿದಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
6,300 ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್:ರಾಜ್ಯದಲ್ಲಿ 6,300ಕ್ಕೂ ಅಧಿಕ ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್​ಗಳಿವೆ ಎಂದು ಇಲಾಖೆಯೇ ಮಾಹಿತಿ ಕೊಟ್ಟಿದೆ. ಇಲಾಖೆ ಅನುಮತಿ ಪಡೆಯದೆ ಪ್ರತಿ ವರ್ಷ ನೂರಾರು ಸ್ಕಾ್ಯನಿಂಗ್ ಸೆಂಟರ್​ಗಳು ಅಕ್ರಮವಾಗಿ ಪ್ರಾರಂಭವಾಗುತ್ತಿವೆ. ಶೇ.70 ಸ್ಕಾ್ಯನಿಂಗ್ ಸೆಂಟರ್​ಗಳು ನಿಯಮ ಪಾಲಿಸುತ್ತಿಲ್ಲ. ಹಣದ ಆಸೆಗಾಗಿ ಈ ಸೆಂಟರ್​ಗಳಲ್ಲಿ ಮೂರು ತಿಂಗಳಿಂದ ಆರು ತಿಂಗಳದೊಳಗಿನ ಭ್ರೂಣವನ್ನು ಪರೀಕ್ಷಿಸಿ ಹೆಣ್ಣು ಅಥವಾ ಗಂಡು ಎಂಬುದನ್ನೂ ಹೇಳುತ್ತಾರೆ. ಬಳಿಕ, ಹೆಣ್ಣಾದರೆ ಭ್ರೂಣವನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದು ಮಹಿಳಾ ಸಂಘಟನೆಗಳ ಆರೋಪವಾಗಿದೆ.
ಶೂನ್ಯ ಕೇಸ್ ಹೊಂದಿರುವ ಜಿಲ್ಲೆಗಳು:ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಉಡುಪಿ, ಗದಗ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ಬೀದರ್, ಬಳ್ಳಾರಿ, ಯಾದಗಿರಿ, ವಿಜಯನಗರ.
ದಾಖಲಾದ ಭ್ರೂಣ ಹತ್ಯೆ ಕೇಸ್​ಗಳು:ಬೆಂಗಳೂರು-31, ಬೆಳಗಾವಿ-15, ವಿಜಯಪುರ-14, ತುಮಕೂರು-6, ಮಂಡ್ಯ-6, ಚಿಕ್ಕಬಳ್ಳಾಪುರ-5, ಬಾಗಲಕೋಟೆ-5, ಕೋಲಾರ-4, ಧಾರವಾಡ-4, ರಾಮನಗರ-2, ಮೈಸೂರು-2, ಚಿತ್ರದುರ್ಗ-1, ದಾವಣಗೆರೆ-1, ಶಿವಮೊಗ್ಗ-1, ಹಾಸನ-1, ಕಲಬುರಗಿ-1.
ರಾಜ್ಯದ ಎಲ್ಲ ಸ್ಕ್ಯಾನಿಂಗ್ ಕೇಂದ್ರ ಮತ್ತು ಕ್ಲಿನಿಕ್​ಗಳನ್ನು ಈ ವರ್ಷಾಂತ್ಯದೊಳಗೆ ಪರಿಶೀಲಿಸಲಾಗುತ್ತಿದೆ. ಈ ಪರಿಶೀಲನೆ ವೇಳೆ ನಕಲಿ ಕ್ಲಿನಿಕ್ ಪತ್ತೆಯಾದಲ್ಲಿ ತಕ್ಷಣವೇ ಬಂದ್ ಮಾಡಲಾಗು ವುದು. ಇದಕ್ಕೆ ಸಂಬಂಧಿಸಿ ದಂತೆ ಆರೋಗ್ಯ ಇಲಾಖೆ ಜತೆ ಪೊಲೀಸರು ಕೂಡ ಕೈಜೋಡಿಸಿದ್ದಾರೆ. ಇತ್ತೀಚಿಗೆ ಭ್ರೂಣಹತ್ಯೆ ತಡೆಗೆ ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಇಬ್ಬರು ವೈದ್ಯರು ಸೇರಿ ನಾಲ್ವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
| ಡಿ. ರಂದೀಪ್ ಆರೋಗ್ಯ ಇಲಾಖೆಯ ಆಯುಕ್ತರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seventeen =
Remember me
