ಬೆಂಗಳೂರು:ಒಂದೇ ದಿನದಂದು ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ “ಬಿ’ ಮತ್ತು “ಸಿ’ ವೃಂದದ 100 ಅಬಕಾರಿ ಅಧಿಕಾರಿಗಳನ್ನು ಎತ್ತಂಗಡಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಆದರೆ, ಅಬಕಾರಿ ಉಪ ಆಯುಕ್ತರ ಹುದ್ದೆ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳಿಗೆ ಬೇರೆ ಜಿಲ್ಲೆಯಲ್ಲಿರುವ ಅಬಕಾರಿ ಹುದ್ದೆಗೆ ಪ್ರಭಾರ ಮೇರೆಗೆ ನಿಯೋಜಿಸಲಾಗಿದೆ. ಈ ಮೂಲಕ ಒಬ್ಬ ಉಪ ಆಯುಕ್ತರಿಗೆ ಎರಡು ಹುದ್ದೆ ಕರುಣಿಸಲಾಗಿದೆ. ಬೆಂಗಳೂರಿನ ವ್ಯಾಪ್ತಿಯ 8 ಅಬಕಾರಿ ಉಪ ಆಯುಕ್ತರ ಹುದ್ದೆಗಳಿವೆ. ಹೆಚ್ಚು ಹಣ ಕೊಡುವ ಅಧಿಕಾರಿಗೆ ಇಲ್ಲಿನ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹಾಸನ, ತುಮಕೂರು, ಮೈಸೂರು ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಬೇಡಿಕೆ ಸ್ಥಳಗಳಿಗೆ ಕೆಲವರನ್ನು ವರ್ಗಾಯಿಸಲಾಗಿದೆ. ಕೆಲ ಅಬಕಾರಿ ಉಪ ಆಯುಕ್ತರನ್ನು ಒಂದೇ ವರ್ಷದಲ್ಲಿ 3 ಬಾರಿ ವರ್ಗಾ ಮಾಡಲಾಗಿದೆ. ಗ್ರೂಪ್​ ” ಎ’ ಅಡಿ ಬರುವ ಅಬಕಾರಿ ಉಪ ಆಯುಕ್ತರು ಒಂದು ಸ್ಥಳಕ್ಕೆ ವರ್ಗಾವಣೆಗೊಂಡರೆ ಅದೇ ಸ್ಥಳದಲ್ಲಿ 2 ವರ್ಷ ಕಾಲ ಕಾರ್ಯನಿರ್ವಹಿಸಬಹುದು. ಹೀಗಿದ್ದರೂ, ಕಳೆದ ವರ್ಷ ಕೆಲವರನ್ನು ಅವಧಿ ಪೂರ್ವ ಮುನ್ನವೇ ಉಪ ಆಯುಕ್ತರನ್ನು ಏಕಾಏಕಿ ಎತ್ತಂಗಡಿ ಮಾಡಲಾಗಿತ್ತು. ಕೆಲವರು ಕೋರ್ಟ್​ನಿಂದ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರಿದಿದ್ದರು. ಜತೆಗೆ, ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ನಿಯಮಬಾಹಿರವಾಗಿ ವರ್ಗಾವಣೆ ಬಗ್ಗೆ ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಅವರಿಗೆ ದೂರು ದಾಖಲಾಗಿತ್ತು.
ಆಡಳಿತಾತ್ಮಕ ಕಾರಣ ಕೊಟ್ಟು ವರ್ಗ10 ಅಬಕಾರಿ ಉಪ ಆಯುಕ್ತರು, 25 ಉಪ ಅಧೀಕ್ಷಕರು, 50 ಅಬಕಾರಿ ನಿರೀಕ್ಷಕರು ಹಾಗೂ 11 ಅಧೀಕ್ಷಕರನ್ನು ಬೇರೆ ಕಡೆಗೆ ವರ್ಗಾವಣೆಗೊಳಿಸಲಾಗಿದೆ. ಸಿಎಂ ಅನುಮೋದನೆ ಮೇರೆಗೆ ಆಡಳಿತಾತ್ಮಕ ಕಾರಣ ಕೊಟ್ಟು ವರ್ಗಾ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹುದ್ದೆ ತೋರಿಸದ “ಬಿ’ ವೃಂದದ ಕೆಲ ಅಧಿಕಾರಿಗಳಿಗೆ ಸರ್ಕಾರ ಮಟ್ಟದಲ್ಲಿ, “ಸಿ’ವೃಂದದ ಕೆಲವರು ಮುಂದಿನ ಸ್ಥಳ ನಿಯುಕ್ತಿಗಾಗಿ ಅಬಕಾರಿ ಇಲಾಖೆಯ ಆಯುಕ್ತರ ಕೇಂದ್ರ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ನಿಯಂತ್ರಣಾಧಿಕಾರಿ, ಅಬಕಾರಿ ನಿರೀಕ್ಷಕರನ್ನು ವರ್ಗಾಯಿಸಿ ಆದೇಶಿಸಿದ ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ಛಲವಾದಿ ನಾರಾಯಣಸ್ವಾಮಿಗಿಲ್ಲ ಟೀಕಿಸುವ ನೈತಿಕತೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಆಕ್ರೋಶ
ಅವಧಿ ಪೂರ್ವ ವರ್ಗಗ್ರೂಪ್​ “ಸಿ’ಅಡಿ ಬರುವ ಅಬಕಾರಿ ನಿರೀಕ್ಷರು, ಬೇರೆ ಕಡೆಗೆ ವರ್ಗಾವಣೆಯಾದರೆ ಸರ್ಕಾರದ ನಿಯಮದಂತೆ ಆ ಹುದ್ದೆಯಲ್ಲಿ ನಾಲ್ಕು ವರ್ಷ ಕಾಲ ಕಾರ್ಯನಿರ್ವಹಿಸಬಹುದು. ಆದರೆ, ಹಿಂದೆ ವರ್ಗಾವಣೆಗೊಂಡ ಈಗ 2&3 ವರ್ಷ ಕಳೆಯುವಷ್ಟರಲ್ಲೇ ಹಲವು ಅಬಕಾರಿ ನಿರೀಕ್ಷಕರನ್ನು ಪ್ರಿ ಮಚ್ಯೂರ್​( ಅವಧಿ ಪೂರ್ವ ಮುನ್ನ) ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ಇಲಾಖೆಯಲ್ಲಿ ವಿವಿಧ ವೃಂದದ ಒಟ್ಟು 400 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದರಲ್ಲಿ ಅಂದಾಜು 200 ಅಧಿಕಾರಿಗಳು ಅವಧಿ ಪೂರ್ವ ಮುನ್ನ ಕಾರಣ ಕೊಟ್ಟು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ವೇಳೆ ಬೇಡಿಕೆ ಇರುವ ಸ್ಥಳಗಳಿಗೆ ಅಧಿಕಾರಿಗಳಿಂದ ಹೆಚ್ಚು ಕಮಿಷನ್​ ಪಡೆದು ವರ್ಗಾವಣೆ ಮಾಡಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + seventeen =
Remember me
