ಬೆಂಗಳೂರು:ವಿಶ್ವದಾದ್ಯಂತ ಡಿಸೆಂಬರ್​ 25 ರಂದು ಕ್ರಿಸ್​ಮಸ್​ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವರ್ಷದ ಕೊನೆ ತಿಂಗಳು ಸಮೀಪಿಸುತ್ತಿದ್ದಂತೆ, ಈ ತಿಂಗಳ ಮೊದಲ ದಿನದಿಂದಲೇ ಹಬ್ಬದ ಸಡಗರ ಜನರಲ್ಲಿ ಮೂಡಿರುತ್ತದೆ. ಈ ಫೆಸ್ಟಿವಲ್ ಹಿನ್ನೆಲೆ ಮನೆಯನ್ನು ವಿವಿಧ ವಸ್ತುಗಳಿಂದ ಅಲಂಕರಿಸುವ ಅನೇಕರು, ಹಬ್ಬಕ್ಕೆ ಆಗಮಿಸುವ ಅತಿಥಿಗಳ ಗಮನ ಸೆಳೆಯುತ್ತಾರೆ. ಇದೀಗ ಕ್ರಿಸ್ಮಸ್​ ಸಂಭ್ರಮದ ಛಾಯೇ ರಾಜ್ಯ ರಾಜಧಾನಿಯಲ್ಲಿ ಜೋರಾಗಿಯೇ ಇದ್ದು, 100 ಅಡಿ ಎತ್ತರದ ಕ್ರಿಸ್​ಮಸ್​ ಟ್ರೀ ತಲೆ ಎತ್ತಿದೆ.
ಇದನ್ನೂ ಓದಿ:ಫ್ರೂಟ್ಸ್ ತಂತ್ರಾಂಶದಲ್ಲಿ ಶೇ. 100 ರಷ್ಟು ಗುರಿ ಸಾಧನೆಗೆ ಕ್ರಮ
ಜನರಲ್ಲಿ ಸದ್ಯ ಕ್ರಿಸ್​ಮಸ್​ ಸಮಯ ಮತ್ತು ಹಬ್ಬದ ಮೂಡ್ ಶುರುವಾಗಿದ್ದು, ಈ ಸಮಯದಲ್ಲಿ ರಜೆಯಿರುವ ಕಾರಣ ಹಲವರು ನಗರದ ಮಾಲ್​ ಸೇರಿದಂತೆ ಇತರೆ ತಾಣಗಳಿಗೆ ಭೇಟಿ ನೀಡುತ್ತಾರೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಫೀನಿಕ್ಸ್​ ಮಾಲ್​ ಆಫ್​ ಏಷ್ಯಾ ಇದೀಗ ಮಾಲ್​ನ ಮುಂಭಾಗದಲ್ಲಿ 100 ಅಡಿ ಎತ್ತರದ ಬೃಹತ್​ ಕ್ರಿಸ್ಮಸ್​ ಟ್ರೀ ಅನ್ನು ಸ್ಥಾಪಿಸಿದೆ.
Behold the grandeur of Christmas at Phoenix Mall of Asia! 🎄✨ Dive into the festive spirit as you visit our spectacular 100ft Christmas tree adorned with enchanting decorations. . 🌟#ChristmasMagic#GrandTree#PhoenixMall#FestiveWonders#phoenixmallofasia#phoenixmallofasiapic.twitter.com/4rpc4UK4BM
— Phoenix Mall of Asia Bangalore (@MOA_Bangalore)December 11, 2023

ಈ 100 ಅಡಿ ಎತ್ತರದ ಕ್ರಿಸ್​ಮಸ್​ ಟ್ರೀ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅನೇಕ ನೆಟ್ಟಿಗರನ್ನು ಸೆಳೆದಿದ್ದು, ಮಾಲ್​ನತ್ತ ಭೇಟಿ ನೀಡುವಂತೆ ಆಹ್ವಾನಿಸುತ್ತಿದೆ,(ಏಜೆನ್ಸೀಸ್).
ಟಿಕೆಟ್ ಮಾರಾಟದಲ್ಲಿ ‘ಸಲಾರ್’ ಅಬ್ಬರ! ಯಾವ ರಾಜ್ಯದಲ್ಲಿ ಎಷ್ಟೆಷ್ಟು? ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
