ಬೆಂಗಳೂರುಉನ್ನತ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿ ಹಾಗೂ ಪ್ರಾದೇಶಿಕ ಕಚೇರಿಗಳಲ್ಲಿ ನಿಯೋಜನೆ ಮೇಲೆ ಬಂದು ಹತ್ತಾರು ವರ್ಷಗಳಿಂದ ಬೇರೆಲ್ಲೂ ಹೋಗದೆ ತಳವೂರಿದ್ದ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾತೃ ಕಾಲೇಜಿಗೆ ಎತ್ತಂಗಡಿ ಮಾಡಲಾಗಿದೆ.
ಒಂದೆಡೆ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಪ್ರಾಧ್ಯಾಪಕರಿಲ್ಲದೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ, ಪ್ರಾಧ್ಯಾಪಕರು ಕೇಂದ್ರ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ಬೋಧಕೇತರ ಕೆಲಸಗಳನ್ನು ಮಾಡಿಕೊಂಡು ಯುಜಿಸಿ ವೇತನವನ್ನು ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಕಾಲೇಜಗಳಿಂದ ನಿಯೋಜನೆ ಮೇಲೆ ತೆರಳಿದ್ದ 31 ಪ್ರಾಂಶುಪಾಲರೂ ಸೇರಿ ಒಟ್ಟು 100 ಮಂದಿಯನ್ನು ಮಾತೃ ಕಾಲೇಜಿಗೆ ತೆರಳುವಂತೆ ಉನ್ನತ ಶಿಕ್ಷಣ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಉದ್ದೇಶವೇನು?
ರಾಜ್ಯದ ಪದವಿ ಕಾಲೇಜುಗಳಲ್ಲಿ ಕಾಯಂ ಪ್ರಾಧ್ಯಾಪಕರಿಗಿಂತಲೂ ಅತಿಥಿ ಉಪನ್ಯಾಸಕರಿಂದಲೇ ಕಾಲೇಜುಗಳಲ್ಲಿ ಪಾಠ ನಡೆಯುತ್ತಿದೆ. ಆದರೆ, ಕೆಲವು ಪ್ರಾಧ್ಯಾಪಕರು 10 ಮತ್ತಯ 15 ವರ್ಷಗಳಿಂದಲೂ ನಿಯೋಜನೆ ಮೇಲೆ ತೆರಳಿದವರು ಮತ್ತೆ ಮಾತೃ ಕಾಲೇಜಿಗೆ ತೆರಲಿ ಪಾಠ ಮಾಡುವ ಆಲೋಚನೆ ಮಾಡುತ್ತಿಲ್ಲ.
ಒಂದೆಡೆ ಪ್ರಾಧ್ಯಾಪಕರ ಕೊರತೆ ಎದುರಿಸುತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ಪ್ರಥಮ ದರ್ಜೆ ಸಹಾಯಕರು ಮಾಡುವಂತಹ ಕೆಲಸವನ್ನು ಮಾಡಿಕೊಂಡು ಲಕ್ಷಾಂತರ ರೂ. ವೇತನ ಪಡೆಯುತ್ತಿದ್ದಾರೆ. ಇದರಿಂದ ಇಲಾಖೆಗೆ ಎರಡೂ ರೀತಿಯಲ್ಲಿ ನಷ್ಟವಾಗುತ್ತಿದೆ. ಈ ಕಾರಣದಿಂದ ಎತ್ತಂಗಡಿ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಬೇರೆ ಉಪನ್ಯಾಸಕರ ನಿಯೋಜನೆಗೆ ಚಿಂತನೆ:
ಇಲಾಖೆಯಲ್ಲಿ ಕಲಿಕಾ ನಿರ್ವಹಣೆ ವ್ಯವಸ್ಥೆ (ಎಲ್‌ಎಂಎಸ್)ಮ ನ್ಯಾಕ್ ಸಂಯೋಜನೆ ಪ್ರಕ್ರಿಯೆ ಕುರಿತ ಕೆಲಸಗಳು ಸೇರಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಪ್ರಾಧ್ಯಾಪಕರೇ ಮಾಡಬೇಕಾದ ಹಲವು ಕೆಲಸಗಳಿವೆ. ಇದಕ್ಕಾಗಿ ಬೇರೊಬ್ಬ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕಾಗುತ್ತದೆ. ಸದ್ಯ ನಿಯೋಜನೆ ಮೇಲೆ ಬಂದಿರುವವರು ಹಲವು ವರ್ಷಗಳಿಂದ ಬೇರೆಲ್ಲೂ ಕದಲಲಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ನಿಯೋಜನೆ ರದ್ದುಗೊಳಿಸಿ ಮಾತೃ ಕಾಲೇಜಿಗೆ ತೆರಳುವಂತೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್ ತಿಳಿಸಿದ್ದಾರೆ.
ಹಿರಿಯತನದ ಮೇಲೆ ಪ್ರಾಂಶುಪಾಲ ಹುದ್ದೆ:
ಆಯಾ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರಲ್ಲಿ ಹಿರಿತನದ ಆಧಾರದಲ್ಲಿ ಪ್ರಾಂಶುಪಾಲ ಹುದ್ದೆಯನ್ನು ನೀಡುವಂತೆ ಈ ಹಿಂದೆಯೇ ಆದೇಶ ಮಾಡಲಾಗಿದೆ. ಆದರೆ, ಕೆಲವು ಪ್ರಾಧ್ಯಾಪಕರು ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ತೆರಳಿ 31 ಮಂದಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ನಿಯೋಜನೆ ರದ್ದುಗೊಳಿಸಿರುವ ಕಾರಣ ಆಯಾ ಕಾಲೇಜಿನಲ್ಲಿರುವ ಹಿರಿಯ ಪ್ರಾಧ್ಯಾಪಕರೇ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
12 ಮಂದಿ ಮೇಲೆ ಉಪನ್ಯಾಸಕರ ಆಕ್ಷೇಪ
ಉನ್ನತ ಶಿಕ್ಷಣ ಇಲಾಖೆಯು ನಿಯೋಜನೆ ರದ್ದುಗೊಳಿಸುವುದಾದರೆ ಎಲ್ಲರನ್ನೂ ಮಾತೃ ಕಾಲೇಜಿಗೆ ವಾಪಸ್ ಕಳಿಸಬೇಕು. ಆದರೆ, ಇಲಾಖೆಯ ಆದೇಶದಲ್ಲಿ ಇಲಾಖೆಯ ಕೇಂದ್ರ ಕಚೇರಿಯಲ್ಲಿರುವ 12 ಮಂದಿಯನ್ನು ಬಿಟ್ಟು ಉಳಿದವರನ್ನು ಮಾತೃ ಇಲಾಖೆಗೆ ಕಳಿಸಿದೆ. ಅವರನ್ನೂ ಕಳುಹಿಸಬೇಕು ಎಂದು ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರು ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
