ಬೆಂಗಳೂರು:ದಾವೋಸ್ ಪ್ರವಾಸ ಫಲಪ್ರದವಾಗಿದ್ದು, ರಾಜ್ಯಕ್ಕೆ 1 ಸಾವಿರ ಕೋಟಿ ರೂ.ಗೂ ಅಧಿಕ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಬಂಡವಾಳ ಹೂಡಿಕೆ ವಿಚಾರವಾಗಿ 40ಕ್ಕೂ ಅಧಿಕ ಕಂಪನಿಗಳ ಜತೆ ಮೂರು ದಿನಗಳ ಕಾಲ ಮಾತುಕತೆ ನಡೆದಿದೆ. ರಾಜ್ಯದಲ್ಲಿ ನವೆಂಬರ್​ನಲ್ಲಿ ನಡೆಯಲಿರುವ ಹೂಡಿಕೆದಾರರ ಸಮಾವೇಶಕ್ಕೆ ವಿಶ್ವದ ನಾನಾ ಭಾಗದ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ ಎಂದು ಸಿಎಂ ಯಡಿಯೂರಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭೂ ಸುಧಾರಣೆ ಕಾಯ್ದೆ 109 ಸೆಕ್ಷನ್ ಅನ್ವಯ ಕೈಗಾರಿಕೋದ್ಯಮಿಗಳು ಅಹವಾಲು ಸಲ್ಲಿಸಿದ್ದಾರೆ. ಅದರಲ್ಲಿ ಯಾವುದನ್ನು ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಮಾಡುತ್ತೇವೆ. ಕಾನೂನಾತ್ಮಕ ಬದಲಾವಣೆಗಳನ್ನು ಮುಂದಿನ ಅಧಿವೇಶನದಲ್ಲಿ ತರಲಾಗುವುದು ಎಂದರು. ಎಲ್ಲೆಲ್ಲಿ ವಿಳಂಬವಾಗುತ್ತಿದೆ ಎನ್ನುವುದನ್ನು ಪರಿಶೀಲಿಸಿ, ಸುದೀರ್ಘ ಅವಧಿ ಪ್ರಕ್ರಿಯೆಗಳನ್ನು ಕಡಿಮೆ ಅವಧಿಗೆ ಇಳಿಸುವುದು ಉದ್ದೇಶವಾಗಿದೆ ಎಂದರು.
ಭೂ ಪರಿವರ್ತನೆ ಸರಳ
ಕಾಯ್ದೆಗಳಿಂದಾಗಿ ರಾಜ್ಯದಲ್ಲಿ ಭೂಮಿ ಖರೀದಿ ವಿಳಂಬವಾಗುತ್ತಿರುವುದನ್ನು ಕೈಗಾರಿಕೋದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಕಾನೂನು ಸರಳೀಕರಣ ಮಾಡಲಾಗುವುದು. ಆನ್​ಲೈನ್ ಮೂಲಕ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಲಾಗುವುದು. 30 ದಿನದಲ್ಲಿ ಭೂ ಪರಿವರ್ತನೆಯಾಗದಿದ್ದರೆ ಅದನ್ನು ಡೀಮ್ಡ್ ಭೂ ಪರಿವರ್ತನೆ ಎಂದು ಪರಿಗಣಿಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಹಿಂಜರಿಕೆ ಇತ್ತು
ದಾವೋಸ್​ಗೆ ನಾವು ಹಿಂಜರಿಕೆಯಿಂದಲೇ ಹೋಗಿದ್ದೆವು. ಆದರೆ ಅಲ್ಲಿ ಹೋದ ನಂತರ ಅದರ ಮಹತ್ವ ತಿಳಿಯಿತು. ಆರ್ಥಿಕ ಶೃಂಗಸಭೆಯಲ್ಲಿ ನಾವು ಭಾಗವಹಿಸಿದ್ದು ಅನುಕೂಲವಾಗಿದೆ. 40ಕ್ಕೂ ಹೆಚ್ಚು ಉದ್ಯಮಗಳು ಹಾಗೂ ಹೂಡಿಕೆದಾರರ ಜತೆ ಮಾತುಕತೆ ಮಾಡಲಾಗಿದೆ. ಜಗತ್ತಿನ ದೊಡ್ಡ ಉದ್ದಿಮೆದಾರರೊಂದಿಗೂ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಇರುವ ಅವಕಾಶ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದೇವೆ. ಎಲ್ಲ ರೀತಿಯ ಮಾತುಕತೆ ಫಲಪ್ರದವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಬಂಡವಾಳ ಬರಲಿದೆ. ದಾವೋಸ್​ನಲ್ಲಿ ರಾಜ್ಯ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಯಾವುದೇ ದೇಶ ಮತ್ತು ರಾಜ್ಯಗಳು ಮಾಡಲಾಗದಷ್ಟು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಡಬ್ಲ್ಯೂ ಇಎಎಫ್ ಎಂಡಿ ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಹೇಳಿದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:two × four =
Remember me
