ಬೆಂಗಳೂರು:ಅಪಾರ್ಟ್​ಮೆಂಟ್​ಗಳಲ್ಲಿ ನಾನಾ ಥರದ ಶುಲ್ಕಗಳು ಇರುತ್ತವೆ. ಆದರೆ ಇಲ್ಲೊಂದು ಅಪಾರ್ಟ್​ಮೆಂಟ್​ನ ಸಂಗತಿ ಕೇಳಿ ಸಾರ್ವಜನಿಕರು ದಂಗಾಗಿದ್ದು, ಬಳಿಕ ಅಪಾರ್ಟ್​ಮೆಂಟ್​ನವರು ತೀವ್ರ ಅಸಮಾಧಾನವನ್ನೂ ಎದುರಿಸುವಂತಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇಟ್ಟಿನ ಮಹಾವೀರ್ ಅಪಾರ್ಟ್​ಮೆಂಟ್​​ನ ರೆಸಿಡೆಂಟ್ಸ್​ ವೆಲ್​ಫೇರ್ ಅಸೋಸಿಯೇಷನ್ (ಆರ್​​ಡಬ್ಲ್ಯುಎ) ನಿಯಮ ಸಾರ್ವಜನಿಕರು ಮಾತ್ರವಲ್ಲದೆ ಪ್ರಾಣಿಹಕ್ಕು ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದೆ. ನಾಯಿ ಸಾಕಣೆ ಹಿನ್ನೆಲೆಯಲ್ಲಿ ಇಲ್ಲಿ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿದೆ.
ಇದನ್ನೂ ಓದಿ:ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!
ಅಂದರೆ ಈ ಅಪಾರ್ಟ್​ಮೆಂಟ್​ ನಿವಾಸಿಗಳು ನಾಯಿಯನ್ನು ಸಾಕುವುದಾದರೆ ಹತ್ತು ಸಾವಿರ ರೂ. ಠೇವಣಿ ನೀಡಬೇಕು. ಮಾತ್ರವಲ್ಲದೆ ಈಗಾಗಲೇ ನಾಯಿಯನ್ನು ಸಾಕುತ್ತಿರುವವರು ನ. 15ರ ಒಳಗೆ 10 ಸಾವಿರ ರೂ. ಠೇವಣಿ ಇಡಬೇಕು, ತಪ್ಪಿದರೆ ನ. 16ರಿಂದ ದಿನಕ್ಕೆ 100 ರೂಪಾಯಿಯಂತೆ ದಂಡ ವಿಧಿಸಲಾಗುವುದು ಎಂದೂ ಇಲ್ಲಿನ ಆರ್​​ಡಬ್ಲ್ಯುಎ ಹೇಳಿದೆ ಎನ್ನಲಾಗಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಹೀಗೆ ಠೇವಣಿ ಇಟ್ಟ ಹಣವನ್ನು ನಾಯಿಯಿಂದ ಕಡಿತಕ್ಕೆ ಒಳಗಾದ ಸಂತ್ರಸ್ತರ ಚಿಕಿತ್ಸೆಗೆ ಇಲ್ಲವೇ ನಾಯಿಗೆ ಸಂಬಂಧಿಸಿದ ನಿರ್ವಹಣೆಗೆ ಬಳಸಲಾಗುವುದು ಎಂದು ಹೇಳಲಾಗಿದೆ. ಆದರೆ ಅಪಾರ್ಟ್​ಮೆಂಟ್​ನ ಈ ನಿಯಮಕ್ಕೆ ಸಾರ್ವಜನಿಕರಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಇದೊಂದು ಕಾನೂನುಬಾಹಿರ ಕ್ರಮ ಎಂದಿದ್ದಾರೆ. ಮಾತ್ರವಲ್ಲ, ಮನೆಯಲ್ಲಿ ನಾಯಿ ಸಾಕುವುದಕ್ಕೆ ಶುಲ್ಕ ವಿಧಿಸುವಂತಿಲ್ಲ. ಯಾವುದೇ ನಿವಾಸಿಗರ ಕಲ್ಯಾಣ ಸಂಘವೂ ಪ್ರಾಣಿಗಳ ನಿರ್ವಹಣೆ ಹೆಸರಲ್ಲಿ ಹಣ ಸಂಗ್ರಹಿಸುವಂತಿಲ್ಲ. ಬಿಬಿಎಂಪಿ ಪಶು ಆಸ್ಪತ್ರೆಗಳಲ್ಲಿ ನಾಯಿಗಳಿಗೆ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ. ಅಲ್ಲದೆ, ನಾಯಿ ಕಚ್ಚಿದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ 2 ಸಾವಿರ ರೂ. ಪರಿಹಾರ ಕೂಡ ನೀಡಲಾಗುತ್ತದೆ ಎಂದಿದ್ದಾರೆ.
🚨 An apartment complex 'Ittina Mahavir' in Electronic city, Bengaluru is charging ₹10,000 registration fee for keeping pet in flat.pic.twitter.com/uBLuWqw4a0
— Indian Tech & Infra (@IndianTechGuide)November 2, 2023

ಚಿತ್ರರಂಗದ ಮಂದಿಗೆ ಸಂತಸದ ಸುದ್ದಿ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ಇಬ್ಬರ ಮಧ್ಯೆ ಮನಸ್ತಾಪ ಬಂದ ಮಾತ್ರಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಸರಿಯಲ್ಲ: ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
