ಬೆಂಗಳೂರು:ಪೊಲೀಸರ ಬಂಧಿಯಾಗಿರುವ ವಂಚಕರಲ್ಲೇ ಮಹಾ ವಂಚಕ ಯುವರಾಜ್ ಅಲಿಯಾಸ್​ ಸ್ವಾಮಿಯ ಮೋಸದ ಬೇರು ಅಗೆದಷ್ಟು ಹಾಳವಾಗುತ್ತಿದ್ದು, ಇದೀಗ ಮತ್ತೊಂದು ಸ್ಫೊಟಕ ವಿಚಾರ ಬೆಳಕಿಗೆ ಬಂದಿದೆ.
ವಂಚಕ ಯುವರಾಜ್ ಮೊಬೈಲ್​ನಲ್ಲಿ 108 ಫೋಟೊಗಳು ಪತ್ತೆಯಾಗಿವೆ. ಕನ್ನಡದ ಟಾಪ್ ನಟಿಯರ ಫೋಟೋಗಳಿದ್ದು, ಇವುಗಳೇ ಯುವರಾಜ್ ಅಸ್ತ್ರವಾಗಿದ್ದವು ಎನ್ನಲಾಗಿದೆ.
ಇದನ್ನೂ ಓದಿ:ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!
ವಂಚಿಸಲು ತನ್ನ ಮಾತಲ್ಲಿ ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದ ಯುವರಾಜ್​, ವಿಫಲವಾದಾಗ ಅಸ್ತ್ರವಾಗಿ ತನ್ನ ಕಾಂಟಾಕ್ಟ್‌ ಹಾಗೂ ಪೋಟೋಗಳನ್ನು ತೋರಿಸುತ್ತಿದ್ದ. ಅದಕ್ಕೂ ಬಗ್ಗದಿದ್ರೆ ಮೂರನೇ ಅಸ್ತ್ರವಾಗಿ ನಟಿ ಹಾಗೂ ಮಾಡೆಲ್​ಗಳ ಫೋಟೋ ಪ್ರಯೋಗ ಮಾಡುತ್ತಿದ್ದ ಎನ್ನಲಾಗಿದೆ. ಸಿಸಿಬಿ ತನಿಖೆ ವೇಳೆ ಯುವರಾಜ್​ ತಪ್ಪೋಪ್ಪಿಕೊಂಡಿರುವ ಮಾಹಿತಿ ಇದೆ.
ಇದಕ್ಕೆ ಪೂರಕವಾಗಿ ಅವನ ಮೊಬೈಲ್ ರಿಟ್ರೀವ್ ಸಾಕ್ಷಿ ಹೇಳಿದೆ. ಲೋಕೇಷನ್ಸ್, ಆಡಿಯೋ ಜತೆಗೆ ಈತನ ಸಂಪರ್ಕದಲ್ಲಿದ್ದ ಪೋಟೋಗಳು ಪತ್ತೆಯಾಗಿವೆ. ಬರೋಬ್ಬರಿ 108 ನಟಿಯರು, ಮಾಡೆಲ್​ಗಳ ಪೋಟೋಗಳು ಪತ್ತೆಯಾಗಿವೆ. ಜತೆಗೆ ಇವನ ಅಕೌಂಟ್​ನಿಂದ ಅವರ ಅಕೌಂಟ್​ಗೆ ಹಣ ವರ್ಗಾವಣೆಯಾಗಿದೆ. ಇದೇ ವಿಚಾರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿರಿ:ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​
ಫೋಟೋದಲ್ಲಿರುವವರಿಗೂ ಯುವರಾಜ್​ನಿಗೂ ಏನು ಸಂಬಂಧ? ಯಾವ ಕಾರಣಕ್ಕೆ ಹಣ ನೀಡಿದ್ದ ಎಂಬ ವಿಚಾರ ರಹಸ್ಯವಾಗಿದೆ. 7 ಮಂದಿ ಜತೆ ಹೆಚ್ಚು ವ್ಯವಹಾರ ಇರುವುದು ಪತ್ತೆಯಾಗಿದೆ. ಸದ್ಯ ಆತನ ವಾಟ್ಸ್ ಚಾಟ್ ಮತ್ತು ಅಕೌಂಟ್​​ಗಳ ಹೋಲಿಕೆ ನಡೆಸಲಾಗ್ತಿದೆ. ಜತೆಗೆ ಅವರಿಂದ ಹಣ ರಿಕವರಿ ಮಾಡಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ ಎಂದು ಕೆಲ ಮೂಲಗಳಿಂದ ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್​)
ಮಾನವನ ಹೆಬ್ಬೆರಳು ಅಂದುಕೊಂಡು ಪೊಲೀಸರನ್ನು ತಕ್ಷಣ ಕರೆಸಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​! ​

ನಾನು ತುಂಬಾ ಒಳ್ಳೆಯವಳು ಮೇಡಂ… ಆದ್ರೆ ಎಲ್ಲಾ ತಪ್ಪಾಗಿ ಭಾವಿಸ್ತಾರೆ, ಏನ್​ ಮಾಡ್ಲಿ?

2020ನೇ ವರ್ಷದಲ್ಲಿ ಹಾಲು ಮಾರಿ ಈಕೆ ಸಂಪಾದಿಸಿದ ಹಣದ ಮೊತ್ತ ಕೇಳಿದ್ರೆ ಬೆಕ್ಕಸ ಬೆರಗಾಗುತ್ತೀರಿ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:8 + twelve =
Remember me
