ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರುಎಲ್ಲರನ್ನೂ ಕರೆದು ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.ರಾಷ್ಟ್ರದ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳೊದಕ್ಕೆ ನಮಗೆ ಶಕ್ತಿ‌ಇಲ್ಲಾ. ಕೇರಳದವರು ಆಗೊದೇ ಇಲ್ಲ ಎಂದು ಬಿಟ್ಟು ಹೋದರು. ಹಾಗಾಗಿ ಈ ಮೈತ್ರಿ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿದೆ. ಎಲ್ಲ ಬಿಟ್ಟು ಹೋದಾಗ ನಮಗೆ ಸಿಂಬಲ್ ಉಳಿಯುತ್ತಾ? ಎಲ್ಲ ರಾಜ್ಯಗಳ ಘಟಕದ ನಾಯಕರನ್ನ ಕರೆಯಬೇಕು. ಮಹಾರಾಷ್ಟ್ರದಲ್ಲೂ ನಮ್ಮ ಪಾರ್ಟಿ ಸ್ಟ್ರಾಂಗ್ ಇದೆ.ಮೈತ್ರಿಗೆ ನಾವು ಒಪ್ಪುವುದಿಲ್ಲ ಎಂದು 11 ಶಾಸಕರೆ ನನ್ನ ಬಳಿ ಹೇಳಿದ್ದಾರೆ. ಆದರೆ ಹೆಸರು ಪ್ರಸ್ತಾಪ ಮಾಡಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ನನಗೆ ಗೌರವ ಇದೆ. ಅವರು ಏನು ಹೇಳುತ್ತಾರೆ ನೋಡಿ ಮುಂದಿನ ತೀರ್ಮಾನ ಕೈಗೊಳ್ತೇನೆ ಎಂದು ಹೇಳಿದರು.ಮುಸ್ಲಿಂ ಸಮುದಾಯದ ಶೇ. 20 ರಷ್ಟು ಮತಗಳು ಪಕ್ಷಕ್ಕೆ ಬಂದಿವೆ. ಇದನ್ನು ಕುಮಾರಸ್ವಾಮಿ ಸಹ ಒಪ್ಪಿಕೊಂಡಿದ್ದಾರೆ.ಕುಮಾರಸ್ವಾಮಿಗೆ 18 ಸಾವಿರ ಮತಗಳು ಬಂದಿವೆ. ಈಗ ಗೆದ್ದಿರುವ 19 ಶಾಸಕರಲ್ಲಿ ಇಬ್ಬರನ್ನು ಹೊರತು ಪಡಿಸಿದರೆಎಲ್ಲ ಶಾಸಕರು ಗೆದ್ದಿರುವುದು ಮುಸ್ಲಿಂ ಸಮುದಾಯದ ಮತಗಳಿಂದ ಎಂದರು.ಬಿಜೆಪಿ ಸೋತರೂ ಸರಿ ಜೆಡಿಎಸ್ ಮುಗಿಸಬೇಕು ಅನ್ನೋದು ಬಿಜೆಪಿ ಗುರಿ.ಮೋದಿ 20 ಸಭೆಗಳನ್ನು ಎಲ್ಲಿ ಮಾಡಿದರು?ಮೊದಲು ಜೆಡಿಎಸ್ ಮುಗಿಸ ಬೇಕು ಅನ್ನೋದು ಬಿಜೆಪಿ ಗುರಿ ಎಂದು ಟೀಕಿಸಿದರು.ಇಬ್ರಾಹಿಂ ಕಾಂಗ್ರೆಸ್ ಗೆ ಸೇರುತ್ತಾರಾ ಎಂಬ ಪ್ರಶ್ನೆಗೆ, ಶರತ್ ಪವಾರ್ ಮಾತಡಿದ್ದಾರೆ, ಎಎಪಿ ಅವರು ಮಾತಡಿದ್ದಾರೆ.ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಮಾತಡಿದ್ದಾರೆ‌. ಆದರೆ ರಾಜ್ಯ ನಾಯಕರು ಮಾತಡಿಲ್ಲ ಎಂದು ಪ್ರತಿಕ್ರಿಯಿಸಿದರು.ಇಬ್ರಾಹಿಂ ಅವರನ್ನು ನಾವೇನು ಕರೆದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ, ನೀವು ನೋಡಿದ್ದೀರಿ ಕುಮಾರಸ್ವಾಮಿ ಎಷ್ಟು ಬಾರಿ ನಮ್ಮ ಮನೆಗೆ ಬಂದಿದ್ದರು ಅಂತ ಎಂದು ಟಾಂಗ್ ಕೊಟ್ಟರು.ಅ.16ಕ್ಕೆ ಚರ್ಚೆ ಆದ ಮೇಲೆ ಅಭಿಪ್ರಾಯ ಪಡೆಯುತ್ತೇನೆ. ರಾಷ್ಟ್ರೀಯ ಅದ್ಯಕ್ಷರಿಗೆ ತಿಳಿಸಿ ಅವರು ಏನು ತೀರ್ಮಾನ ಮಾಡ್ತಾರೆ ಅಂತ ನೋಡಬೇಕಿದೆ. ಪಕ್ಷದ ಸಿದ್ದಾಂತಗಳನ್ನು ಜೀರ್ಣಿಸಿಕೊಂಡಿದ್ದೇನೆ. ಈಗಲೂ ವಿಷಕಂಠನಾಗಿದ್ದೇನೆ.ಕುಮಾರಸ್ವಾಮಿ ಅವರ ಒಂದು ವಿಡಿಯೋ ವೈರಲ್ ಆಗಿದೆ. ಎಲ್ಲಿ ಜೆಡಿಎಸ್ ಪ್ರಾಬಲ್ಯ ಇಲ್ಲವೊ ಅಲ್ಲಿ ಕಾಂಗ್ರೆಸ್ ಗೆ ಮತ ನೀಡಿ ಅಂತ ಹೇಳಿರೋ ವಿಡಿಯೋ ವೈರಲ್ ಆಗಿದೆ. ಇದರಿಂದ ಆತಂಕ ಪಡೆಯಬೇಕಿಲ್ಲ.ಎರಡು ಇದ್ದ ಜನತಾದಳ ೧೦೦ ಆಯಿತು. ಈಗ 19 ರಿಂದ ಮತ್ತೆ ಜಾಸ್ತಿಯಾಗುತ್ತದೆ ಎಂದರು.ಸಿಎಂ ಇಬ್ರಾಹಿಂ ರಾಜ್ಯಾಧ್ಯಕ್ಷರಾದ ಮೇಲೆ ನಾವು ಸಂಪಾದನೆ ಮಾಡಿದಾದ್ರು ಏನು ಎಂಬ ಕುಮಾರಸ್ವಾಮಿ ಹೇಳಿಕೆಗೆ,ಕುಮಾರಸ್ವಾಮಿ ಅವರು ತಿರುಗಾಡಿದ್ಸಾರೆ ನಾನು ತಿರುಗಾಡಿದ್ದೇನೆ. ನಮಿಬ್ಬರನ್ನ ಬಿಟ್ಟರೆ ಮೂರುವನೆಯವರು ಇಲ್ಲ.ಬಿಜೆಪಿಯವರು ಜೆಡಿಎಸ್ ಮುಗಿಸಬೇಕಂತ ಇದ್ದರು.ಮೋದಿ 2೦ ಬಾರಿ ಜೆಡಿಎಸ್ ಕ್ಷೇತ್ರಗಳಲ್ಲಿ ಸರ್ವೆ ಮಾಡಿಸಿದರು. ಪಾರ್ಲಿಮೆಂಟ್ ಗೂ ಅಷ್ಟೆನಾ ತಾಲ್ಲೂಕು, ಜಿಲ್ಲಾ ಪಂಚಾಯತ್ ಗೂ ಮೈತ್ರಿ ಯಾಗುತ್ತಾ.?ಮದಯವೆ ಬಹಿರಂಗವಾಗಿ ಆಗಿಲ್ಲಾ ಫ್ರೀ ಅರೆಂಜ್ ಮದುವೆ ಆಗಿಲ್ಲ. ಮದ್ವೆ ಆಗಿದ್ದು‌ ಹುಡುಗಿ ಮನೆಯ ಒಳಗೆ ಕರೆದುಕೊಳ್ಳಬೇಕೋ ಬೇಡವೋ ಎಂಬ ಚರ್ಚೆಯಿದೆ ಅಷ್ಟೇ. ಜೆಡಿಎಸ್ ತತ್ವಕ್ಕೆ ವಿರೋಧ ಮಾಡೊಲ್ಲಾ ಅಂತ ಬಿಜೆಪಿಯವರು ಒಪ್ಪಿಕೊಳ್ತಾರಾ..? ಒಪ್ಪಿದರೆ ಚರ್ಚೆ ಮಾಡೋಣ ಎಂದು ಇಬ್ರಾಹಿಂ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 6 =
Remember me
