ಬೊಗೋಟಾ:ಅಮೆಜಾನ್ ಕಾಡಿನಲ್ಲಿ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ನಾಪತ್ತೆಯಾಗಿದ್ದ ನಾಲ್ಕು ಮಕ್ಕಳು 40 ದಿನಗಳ ನಂತರ ಪವಾಡಸದೃಶ ರೀತಿಯಲ್ಲಿ ಜೀವಂತವಾಗಿ ಪತ್ತೆಯಾದ ಪ್ರಕರಣ ವರದಿಯಾಗಿದೆ. ವಿಮಾನ ಉರುಳಿದ ಅಮೆಜಾನ್ ಕಾಡುಗಳಲ್ಲಿ ವ್ಯಾಪಕವಾಗಿ ನಡೆದ ಶೋಧ ಕಾರ್ಯವನ್ನು ದೇಶದ ಜನರು ತುದಿಗಾಲ ಮೇಲೆ ನಿಂತು ಫಲಿತಾಂಶಕ್ಕೆ ಕಾಯುತ್ತಿದ್ದರು ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ತಾವೋ ಪೆತ್ರೋ ಹೇಳಿದ್ದಾರೆ.
ಮೇ 1ರಂದು ಸಂಭವಿಸಿದ ದುರಂತದಲ್ಲಿ ಮೂವರು ಹಾಗೂ ವಯಸ್ಕರು ಮೃತಪಟ್ಟಿದ್ದರು. ನಾಲ್ಕು ಬುಡಕಟ್ಟು ಮಕ್ಕಳು ನಾಪತ್ತೆಯಾಗಿದ್ದರು. ದಟ್ಟ ಮಳೆಕಾಡುಗಳಲ್ಲಿ ಕೊಲಂಬಿಯಾ ಸೈನಿಕರು ಭಾರಿ ಸವಾಲು ಗಳನ್ನು ಎದುರಿಸಿ ನಡೆಸಿದ ಶೋಧಕ್ಕೆ ಕೊನೆಗೂ ಫಲ ಸಿಕ್ಕಿದ್ದು ಶುಕ್ರವಾರ (ಜೂನ್ 9) ನಾಲ್ಕೂ ಮಕ್ಕಳು ಜೀವಂತವಾಗಿ ಸಿಕ್ಕಿರುವುದರಿಂದ ಮಕ್ಕಳ ಅಜ್ಜಿ ಹಾಗೂ ಜನರ ಹರ್ಷ ಮೇರೆ ಮೀರಿದೆ. ನೆಲಕ್ಕುರುಳಿದ ಸೆಸ್ನಾ ಏಕ-ಇಂಜಿನ್ ವಿಮಾನದಲ್ಲಿದ್ದ ಮಕ್ಕಳು ದಿಕ್ಕು ತೋಚದೆ ಕಾಡುಮೇಡಿನಲ್ಲಿ ಅಲೆದಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಯೂಬಾದಿಂದ ಮರಳಿದ್ದು ಅಧ್ಯಕ್ಷ ಪೆತ್ರೋ, ಮಕ್ಕಳು ಜೀವಂತವಾಗಿ ಪತ್ತೆಯಾದ ಸುದ್ದಿಯನ್ನು ಸಂಭ್ರಮಿಸಿದರು. ಆರೋಗ್ಯ ತಪಾಸಣೆಗಾಗಿ ಚಿಣ್ಣರನ್ನು ಬೊಗೋಟಾಕ್ಕೆ ಕರೆ ತರಲಾಗುತ್ತಿದ್ದು ಅಲ್ಲಿ ಅವರನ್ನು ಕಂಡು ಮಾತನಾಡಲು ಪೆತ್ರೋ ಕಾತರರಾಗಿದ್ದಾರೆ.
ಬದುಕುಳಿದ ಒಂದೇ ಕುಟುಂಬದ ಮಕ್ಕಳಲ್ಲಿ 13, 9, 4 ವರ್ಷದವರಲ್ಲದೆ 11 ತಿಂಗಳ ಒಂದು ಮಗುವೂ ಇರುವುದು ವಿಶೇಷವಾಗಿದೆ.
ಮೇಲೆತ್ತಲು ಹೆಲಿಕಾಪ್ಟರ್ ಬಳಕೆ:ಮಕ್ಕಳು ಪತ್ತೆಯಾದ ಮಳೆ ಕಾಡಿನ ದಟ್ಟ ಕಾನನ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸಾಧ್ಯವಾಗದ್ದರಿಂದ ಹಗ್ಗಗಳನ್ನು ಬಳಸಿ ಮಕ್ಕಳನ್ನು ಮೇಲೆತ್ತಿದ್ದ ವಾಯು ಪಡೆ ಯೋಧರ ಕಾರ್ಯವನ್ನು ವಿಡಿಯೋ ದೃಶ್ಯ ದಾಖಲಿಸಿದೆ. ಕಾಡಿನ ಅಂಚಿನಲ್ಲಿರುವ ಸ್ಯಾನ್ – ಡೋಸ್ ಡೆಲ್ ಗುವಿಯಾರೆ ಪಟ್ಟಣಕ್ಕೆ ಹೋಗುತ್ತಿರುವುದಾಗಿ ಮಂಕಾಗುತ್ತಿರುವ ಬೆಳಕಿನಲ್ಲಿ ಸಾಗಿದ ಹೆಲಿಕಾಪ್ಟರ್ ಸಿಬ್ಬಂದಿ ಹೇಳಿದ್ದರು.
ಮೇ 1ರಂದು ಆರು ಪ್ರಯಾಣಿಕರು ಹಾಗೂ ಒಬ್ಬ ಪೈಲಟ್‌ನೊಂದಿಗೆ ಪ್ರಯಾಣಿಸುತ್ತಿದ್ದ ಸಿಂಗಲ್ – ಇಂಜಿನ್ ಪ್ರೊಪೆಲರ್ ವಿಮಾನ ಸೆಸ್ನಾದ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ತುರ್ತಾಗಿ ಇಳಿಸುವುದಾಗಿ ಪೈಲಟ್ ಘೋಷಿಸಿದ್ದ. ಅದಾದ ಸ್ವಲ್ಪ ಹೊತ್ತಿನಲ್ಲಿ ವಿಮಾನವು ರೇಡಾರ್‌ನಿಂದ ಅದೃಶ್ಯವಾಗಿತ್ತು. ವಿಮಾನದಲ್ಲಿದ್ದ 3 ವಯಸ್ಕರ ಶವ ಮೇ 16ರಂದು ಶೋಧ ಕಾರ್ಯದಲ್ಲಿ ಸಿಕ್ಕಿದ್ದವು. ಆದರೆ ಅಚ್ಚರಿಯೆನ್ನುವಂತೆ ನಾಲ್ಕು ಮಕ್ಕಳೂ ಸಿಕ್ಕಿರಲಿಲ್ಲ. ಅವರು ಬದುಕಿರಬಹುದೆಂಬ ಆಶಾಭಾವದಿಂದ ಕೊಲಂಬಿಯಾ ಸೇನೆ ಶೋಧ ಕಾರ್ಯಕ್ಕೆ ಇಳಿದಿತ್ತು. 150 ಸೈನಿಕರಲ್ಲದೆ ಶ್ವಾನಗಳನ್ನೂ ಬಳಸಿಕೊಳ್ಳಲಾಗಿತ್ತು.
ಈ ನಾಲ್ಕು ಮಕ್ಕಳು ಬದುಕುಳಿದದ್ದು ಹೇಗೆ? ಅದರಲ್ಲೂ ಇಷ್ಟು ದೀರ್ಘ ಕಾಲ ಜೀವಂತವಿರಲು ಹೇಗೆ ಸಾಧ್ಯವಾಯಿತು ಎನ್ನುವ ಬಗ್ಗೆ ಯಾವುದೇ ವಿವರಗಳನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ತೀರಾ ಒಳನಾಡು ಪ್ರದೇಶದಲ್ಲಿ ವಾಸಿಸುವ ಒಂದು ಬುಡಕಟ್ಟು ಜನಾಂಗಕ್ಕೆ ಸೇರಿದವರಾದರೂ ಮಕ್ಕಳು ಹೇಗೆ ಬದುಕುಳಿದರು ಎನ್ನುವುದು ನಿಗೂಢವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + twelve =
Remember me
