ವಿಜಯಪುರ:ರಣಭೀಕರ ಮಳೆಗೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿದೆ. ಮೂಕ ಪ್ರಾಣಿಗಳು ಆಹಾರವಿಲ್ಲದೆ ರೋದಿಸುತ್ತಿವೆ. ಜನರ ಬುದುಕು ಮೂರಾಬಟ್ಟೆಯಾಗಿದೆ. ಕೃಷಿ ಜಮೀನು ಜಲಾವೃತವಾಗಿದ್ದು, ಅಪಾರಪ ಪ್ರಮಾಣದ ಸಾವು-ನೋವು ಸಂಭವಿಸಿದೆ. ಮನೆಗಳಿಗೆಲ್ಲ ನೀರು ನುಗ್ಗಿ ಜನ ಊರು ಬಿಡುತ್ತಿದ್ದಾರೆ… ಈ ನಡುವೆ ಪ್ರವಾಹದಿಂದ ತಪ್ಪಿಸಿಕೊಳ್ಳಲು ಮರವೇರಿ ಕುಳಿತ 110 ವರ್ಷದ ವೃದ್ಧೆಯೊಬ್ಬರು ರಾತ್ರಿಯಿಡೀ ಅಲ್ಲೇ ಕಳೆದಿದ್ದಾರೆ!
ಭೀಮಾತೀರದಲ್ಲಿ ಭೀಮಾನದಿಯ ಪ್ರವಾಹ ಉಂಟಾಗಿದ್ದು, ಪ್ರಾಣಭಯದಲ್ಲಿ ಮರವೇರಿ ಕುಳಿತ 110 ವರ್ಷದ ವೃದ್ಧೆ ಮತ್ತು ಇವರ ಪುತ್ರ ಇಬ್ಬರು ರಾತ್ರಿಯಿಡೀ ಚಳಿ-ಮಳೆಯಲ್ಲೇ ಜಾಗರಣೆ ಮಾಡಿರುವ ಘಟನೆ ಇಂಡಿ ತಾಲೂಕಿನಲ್ಲಿ ಸಂಭವಿಸಿದೆ.
ಭೀಮಾ ನದಿಯಲ್ಲಿ ನೀರು ಹೆಚ್ಚಾದ ಕಾರಣ ಇಂಡಿ ತಾಲೂಕಿನ ಹಿಂಗಣಿ ಗ್ರಾಮದ ಶಿವಮಲ್ಲಪ್ಪ ಹಾಗೂ ಇವರ ತಾಯಿ ನೀಲವ್ವ ಗುರುವಾರ ಸಂಜೆ ಮರವೇರಿ ಕುಳಿತಿದ್ದರು. ಶುಕ್ರವಾರ ಬೆಳಗ್ಗೆ ಈ ವಿಷಯ ತಿಳಿಯುತ್ತಿದ್ದಂತೆ ಅವರ ರಕ್ಷಣೆಗೆ ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಧಾವಿಸಿದರು. ಮರದಲ್ಲಿ ಕುಳಿತ್ತಿದ್ದ ಅಮ್ಮ-ಮಗನನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.
ಕಾಲುವೆಗೆ ಬಿದ್ದಿದ್ದ ಕಾರು, ಒಂದು ದಿನದ ಬಳಿಕ ಪತ್ತೆ! ಬಾಗಿಲು ತೆರೆದವರಿಗೆ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eight =
Remember me
