ಚಿತ್ರದುರ್ಗ:ಆಯಸ್ಸು ಗಟ್ಟಿಯಾಗಿದ್ದರೆ ಜವರಾಯನೇ ಎದುರಿಗೆ ಬಂದರೂ ಏನೂ ಆಗಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಇದಕ್ಕೆ ತಾಜಾ ಉದಾಹರಣೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್​ ಸೋಂಕಿನ ವಿರುದ್ಧ 110 ವರ್ಷದ ಅಜ್ಜಿ ಸಿದ್ದಮ್ಮ ಗೆದ್ದಿರುವುದು.
ಕರೊನಾ ತೊಂದೊಡ್ಡುತ್ತಿರುವ ಸಾವು-ನೋವು ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಈ ನಡುವೆ ಅಲ್ಲಲ್ಲಿ ಶತಾಯುಷಿಗಳು ಕರೊನಾ ವಿರುದ್ಧ ಗೆದ್ದು ಬೀಗುತ್ತಿರುವ ಸುದ್ದಿಗಳು ಬುದುಕಿಗೆ ಜೀವ ಸೆಲೆಯಂತೆ ಗೋಚರಿಸುತ್ತಿವೆ. ‘ಕರೊನಾ ಅಪಾಯಕಾರಿ ರೋಗವಲ್ಲ, ವಿನಾಕಾರಣ ಭಯ ಬೇಡ. ಆದರೆ, ಎಚ್ಚರಿಕೆ ಇರಲಿ’ ಎಂಬುದುಕ್ಕೆ ಸಿದ್ದಮ್ಮ ಅಜ್ಜಿಯೇ ಸಾಕ್ಷಿ.
ಇದನ್ನೂ ಓದಿರಿಕರೊನಾ ಸೋಂಕಿತ ವೃದ್ಧ ನಾಪತ್ತೆಯೋ, ಸಾವೋ ? ಪೊಲೀಸ್ ಠಾಣೆ ಮಟ್ಟಿಲೇರಿತು ಪ್ರಕರಣ
ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ಎದುರಿಗೆ ಇರುವ ಪೊಲೀಸ್ ಕ್ವಾಟ್ರಸ್ ನಿವಾಸಿ 110 ವರ್ಷದ ಸಿದ್ದಮ್ಮ ಅವರಿಗೆ ಜು.27ರಂದು ಕರೊನಾ ಸೋಂಕು ದೃಢಪಟ್ಟಿತ್ತು. 28ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕೇ ದಿನದಲ್ಲಿ ಕರೊನಾ ಸೋಂಕಿನಿಂದ ಗುಣಮುಖರಾದ ಸಿದ್ದಮ್ಮ ಅಜ್ಜಿಯನ್ನು ಇಂದು(ಶನಿವಾರ) ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಹೊಸದುರ್ಗ ತಾಲೂಕಿನ 97 ವರ್ಷದ ಅಜ್ಜಿ, ಬೆಂಗಳೂರಿನ 99 ವರ್ಷದ ಅಜ್ಜಿ, ಚಿತ್ರದುರ್ಗದಲ್ಲಿ 96 ವರ್ಷದ ಅಜ್ಜಿ, ಬಳ್ಳಾರಿ ಕೋವಿಡ್‌ ಆಸ್ಪತ್ರೆಯಲ್ಲಿ 93 ವರ್ಷದ ವೃದ್ಧೆಯೊಬ್ಬರು ಇದಾಗಲೇ ಕರೊನಾದಿಂದ ಗುಣಮುಖರಾಗಿದ್ದನ್ನ ಸ್ಮರಿಸಬಹುದು.
ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವಾಗಲೇ ಅರ್ಚಕ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
