ಬೆಂಗಳೂರು:ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು2023–24ನೇ ಸಾಲಿನಲ್ಲಿ143ಕೋಟಿ ರೂ.ತೆರಿಗೆ ಪೂರ್ವ ಲಾಭ ಗಳಿಸಿದೆ. 115ಕೋಟಿ ರೂ.ತೆರಿಗೆ ನಂತರ ಲಾಭ ಬಂದಿದೆ.ಕಳೆದ ವರ್ಷ ವಿವಿಧ ಸಾಲ ಯೋಜನೆಗಳಡಿ827ಕೋಟಿ ರೂ.ಸಾಲ ಮಂಜೂರಾತಿ ಮಾಡಿದೆ.ಇದರಲ್ಲಿ775ಕೋಟಿ ರೂ.ಸಾಲವನ್ನು610ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಉದ್ದಿಮೆಗಳಿಗೆ ನೀಡಲಾಗಿದೆ. 2024ರ ಮಾರ್ಚ್​ವರೆಗೆ ಸಂಚಿತ ಸಾಲ ಮಂಜೂರಾತಿ ಮೊತ್ತ20,507ಕೋಟಿ ರೂ.ಅನ್ನು1.76ಲಕ್ಷ ಉದ್ಯಮಗಳಿಗೆ ನೀಡಲಾಗಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ613ಕೋಟಿ ರೂ.ಸಾಲ ವಿತರಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ರೇಜು ಹೇಳಿದ್ದಾರೆ.
2023–24ರಲ್ಲಿ820ಕೋಟಿ ರೂ.ಸಾಲ, 257ಕೋಟಿ ರೂ.ಬಡ್ಡಿ ಮೊತ್ತ ವಸೂಲಾತಿ ಮಾಡಲಾಗಿದೆ. 2024ರ ಮಾರ್ಚ್​ವರೆಗೆ ಸಂಚಿತ ವಸೂಲಾತಿ ಮೊತ್ತವು20,844ಕೋಟಿ ರೂ.ಆಗಿದೆ.ಅನುತ್ಪಾದಕ ಆಸ್ತಿಯು ಶೇ.3.43ಕ್ಕೆ ಇಳಿಕೆಯಾಗಿದೆ. 31,706ಕ್ಕಿಂತ ಅಧಿಕ ಮಹಿಳಾ ಉದ್ಯಮಿಗಳಿಗೆ ಈವರೆಗೆ5,174ಕೋಟಿ ರೂ.ಸಾಲ ಮಂಜೂರಾತಿ ಮಾಡಲಾಗಿದೆ. 22,636ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಯಮಿಗಳಿಗೆ3,082ಕೋಟಿ ರೂ., 41,321ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಉದ್ಯಮಿಗಳಿಗೂ ಅಂದಾಜು1,993ಕೋಟಿ ರೂ.ಸಾಲ ಮಂಜೂರಾತಿ ನೀಡಲಾಗಿದೆ ಎಂದರು.
ಅಯೋಧ್ಯೆಯಲ್ಲಿ ನೋನಿ ಗಿಡ ನೆಟ್ಟ ವ್ಯಾಲ್ಯೂ ಪ್ರಾಡಕ್ಟ್​ ಸಂಸ್ಥೆ
2023&24ರಲ್ಲಿ ಸಂಸ್ಥೆಯು ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಸಾಲ ಯೋಜನೆಗಳಲ್ಲಿ ಸಾಲ ಮಂಜೂರಾತಿ ಮಾಡಲಾಗಿದೆ. 103ಮಹಿಳಾ ಉದ್ಯಮಿಗಳಿಗೆ165ಕೋಟಿ ರೂ.,ಸ್ಮೂ ಹಾಗೂ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಗೆ ಶೇ.5.5ರ ಬಡ್ಡಿ ಸಹಾಯಧನ ಸಾಲ ಯೋಜನೆಯಡಿ240ಟಕಗಳಿಗೆ295ಕೋಟಿ ರೂ.ಸಾಲ ಮಂಜೂರಾತಿ ಮಾಡಲಾಗಿದೆ ಎಂದು ಡಾ.ಎಂ.ರೇಜು ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
