ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ 115 ಅಧಿಕಾರಿ-ಸಿಬ್ಬಂದಿಗೆ 2020ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ರಾಜ್ಯ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ.
ಭ್ರಷ್ಟಚಾರ ನಿಗ್ರಹ ದಳ (ಬೆಂಗಳೂರು) ಎಸ್‌ಪಿ ಉಮಾಪ್ರಶಾಂತ್, ಮಲ್ಲೇಶ್ವರ ಉಪ ವಿಭಾಗದ ಎಸಿಪಿ ಕೆ.ಎಸ್.ವೆಂಕಟೇಶ ನಾಯ್ಡು, ಸಿಐಡಿ ಆರ್ಥಿಕ ವಿಭಾಗ ಡಿವೈಎಸ್‌ಪಿ ಪಿ.ಕೆ.ಮುರಳೀಧರ, ಆಂತರಿಕ ಭದ್ರತಾ ವಿಭಾಗ ತಾಂತ್ರಿಕ ಶಾಖೆಯ ಡಿವೈಎಸ್‌ಪಿ ಎಂ.ಜೆ. ಬಾಲಾಜಿ ಸಿಂಗ್, ಹಾವೇರಿ ಜಿಲ್ಲೆ ಶಿಗ್ಗಾವಿ ಕೆಎಸ್‌ಆರ್‌ಪಿ 10ನೇ ಪಡೆ ಸಹಾಯಕ ಕಮಾಂಡೆಂಟ್ ವಿಶ್ವನಾಥ ರೆಡ್ಡಿ, ಮೈಸೂರು ನಗರ ಸಿಸಿಬಿ ಎಸಿಪಿ ಸಿ.ಕೆ. ಅಶ್ವತ್ಥ ನಾರಾಯಣ, ಎಸಿಬಿ (ಬೆಂಗಳೂರು) ಡಿವೈಎಸ್‌ಪಿ ಗೋಪಾಲ ಡಿ. ಜೋಗಿನ, ಬೆಳಗಾವಿ ಉತ್ತರ ವಲಯ ಡಿವೈಎಸ್‌ಪಿ ಪ್ರಮೋದ್ ಎಸ್. ಢಗ್ಗೆ, ಶಿವಮೊಗ್ಗ ಜಿಲ್ಲೆ ಡಿಎಆರ್ ಡಿವೈಎಸ್‌ಪಿ ಟಿ.ಪಿ. ಕೃಷ್ಣಮೂರ್ತಿ, ಬೆಂಗಳೂರಿನ ಬೆರಳು ಮುದ್ರೆ ತಜ್ಞ ಕೇಂದ್ರ ವಲಯ ಕಚೇರಿ ಡಿವೈಎಸ್‌ಪಿ ಮಂಜುನಾಥ ಬಿ. ಗುಂಜೀಕರ ಸೇರಿ 115 ಅಧಿಕಾರಿ-ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಏಪ್ರಿಲ್ 2 ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ನೀಡಲಾಗುತ್ತದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × five =
Remember me
