ಬೆಂಗಳೂರು:ವಿಧಾನಸಭೆ ಮತ್ತು ವಿಧಾನ ಪರಿಷತ್​ನ 118 ಸದಸ್ಯರು ಜೂ.30ಕ್ಕೆ ಗಡುವು ಮೀರಿದರೂ ಲೋಕಾಯುಕ್ತ ಸಂಸ್ಥೆಗೆ 2019-20ನೇ ಸಾಲಿನ ಚರ ಮತ್ತು ಸ್ಥಿರಾಸ್ತಿಯ ವಿವರಗಳನ್ನು ಸಲ್ಲಿಸದೆ ನಿಯಮ ಉಲ್ಲಂಘಿಸಿದ್ದಾರೆ.
ಪ್ರತಿ ವರ್ಷ ಜೂ.30ರೊಳಗೆ ರಾಜ್ಯದ 224 ಶಾಸಕರು ಹಾಗೂ 75 ಮಂದಿ ವಿಧಾನ ಪರಿಷತ್ ಸದಸ್ಯರು ಲೋಕಾಯಕ್ತ ಸಂಸ್ಥೆಗೆ ಆಸ್ತಿ ಘೋಷಣೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ, 2019-20ನೇ ಸಾಲಿನಲ್ಲಿ 74 ಶಾಸಕರು ಹಾಗೂ 44 ಮಂದಿ ವಿಧಾನ ಪರಿಷತ್ ಸದಸ್ಯರು ಲೋಕಾಯುಕ್ತ ಸಂಸ್ಥೆಗೆ ಈವರೆಗೂ ಆಸ್ತಿ ವಿವರ ಸಲ್ಲಿಕೆ ಮಾಡದೆ ನಿರ್ಲಕ್ಷ್ಯ ಧೋರಣೆ ತೋರಿರುವುದು ಸಾಮಾಜಿಕ ಹೋರಾಟಗಾರ ವೆಂಕಟೇಶ್ ಆರ್​ಟಿಐ ಮೂಲಕ ಪಡೆದ ಮಾಹಿತಿಯಿಂದ ತಿಳಿದು ಬಂದಿದೆ.
ಆಸ್ತಿ ವಿವರ ಸಲ್ಲಿಕೆ ಮಾಡದವರಲ್ಲಿ ಸಚಿವರುಗಳೂ ಇದ್ದಾರೆ. ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ಪಾಟೀಲ್, ಕೆ.ಎಸ್. ಈಶ್ವರಪ್ಪ, ಬಿ. ಶ್ರೀರಾಮುಲು, ಎಚ್. ನಾಗೇಶ್, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆಸ್ತಿ ವಿವರ ಸಲ್ಲಿಸಿಲ್ಲ.
ನಿಯಮವೇನಿದೆ?
ನಿಯಮದ ಪ್ರಕಾರ ಜನಪ್ರತಿನಿಧಿಗಳು 2019-20ನೇ ಸಾಲಿನ ಆಸ್ತಿ ಪ್ರಮಾಣ ವನ್ನು 2020 ಜೂ.30ರೊಳಗೆ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬೇಕು. ವಿಳಂಬವಾದರೆ ಲೋಕಾಯುಕ್ತರು ಆಸ್ತಿ ಘೋಷಣೆ ಪ್ರಮಾಣ ಪತ್ರ ಸಲ್ಲಿಸದ ಜನಪ್ರತಿನಿಧಿಗಳಿಗೆ ನೋಟಿಸ್ ಜಾರಿ ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಪರಿಸ್ಥಿತಿ ನೋಡಿಕೊಂಡು ಲೋಕಾಯುಕ್ತ ಸಂಸ್ಥೆ ಆಸ್ತಿ ಘೋಷಿಸಿಕೊಳ್ಳದ ಜನಪ್ರತಿನಿಧಿಗಳಿಗೆ ಇಂತಿಷ್ಟು ಸಮಯ ಗಡುವನ್ನು ನೀಡುತ್ತದೆ. ಇಷ್ಟಾದರೂ ನಿರ್ಲಕ್ಷ್ಯ ತೋರಿದರೆ ಆಸ್ತಿ ಘೊಷಣೆ ಮಾಡದ ಶಾಸಕರ ಹೆಸರುಗಳನ್ನು ಪ್ರಮುಖ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಲು ಅವಕಾಶವಿದೆ. ನಂತರ ಜನಪ್ರತಿನಿಧಿಗಳ ಬಗ್ಗೆ ರಾಜ್ಯಪಾಲರಿಗೆ ವರದಿ ಸಲ್ಲಿಸಲು ಅವಕಾಶಗಳಿವೆ.
ಆಸ್ತಿ ವಿವರ ಸಲ್ಲಿಸದ ಶಾಸಕರು
ಡಿ.ಕೆ.ಶಿವಕುಮಾರ್, ಜಿ.ಟಿ. ದೇವೇಗೌಡ, ಸಿ. ಪುಟ್ಟರಂಗ ಶೆಟ್ಟಿ, ಯು.ಟಿ. ಖಾದರ್, ಡಿ.ಸಿ. ತಮ್ಮಣ್ಣ, ಎನ್.ಎ. ಹ್ಯಾರಿಸ್, ರಾಮಲಿಂಗಾರೆಡ್ಡಿ, ಜಮೀರ್ ಅಹಮ್ಮದ್, ಜೆ.ಎನ್. ಗಣೇಶ್, ಅಖಂಡ ಶ್ರೀನಿವಾಸಮೂರ್ತಿ, ಬಿ.ಸಿ. ಪಾಟೀಲ್, ಡಾ. ಅಂಜಲಿ ನಿಂಬಾಳ್ಕರ್, ಕೌಜಲಗಿ ಮಹಂತೇಶ್ ಶಿವಾನಂದ್, ಸಿದ್ದು ಸವದಿ, ಡಾ. ಎಚ್.ಡಿ.ರಂಗನಾಥ್, ಸೌಮ್ಯಾ ರೆಡ್ಡಿ ಸೇರಿ 74 ಮಂದಿ ಆಸ್ತಿ ವಿವರವನ್ನು ಸಲ್ಲಿಸಿಲ್ಲ.
ವಿಧಾನ ಪರಿಷತ್ ಸದಸ್ಯರು
ಆರ್.ಬಿ. ತಿಮ್ಮಾಪುರ, ಕೆ.ಪಿ.ನಂಜುಂಡಿ, ಡಿ.ಯು.ಮಲ್ಲಿಕಾರ್ಜುನ್, ಎಂ. ನಾರಾಯಣ ಸ್ವಾಮಿ, ಎಸ್.ಎಲ್.ಧಮೇಗೌಡ, ಎಸ್.ಆರ್. ಪಾಟೀಲ್ ಸೇರಿ 44 ಮಂದಿ ಆಸ್ತಿ ವಿವರ ಸಲ್ಲಿಸಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 5 =
Remember me
