ಗಿರೀಶ್ ಗರಗಬೆಂಗಳೂರು: ಅತಿಹೆಚ್ಚು ಸಂಚಾರದಟ್ಟಣೆ ಉಂಟಾಗುವ ರಸ್ತೆಗಳ ಅಭಿವೃದ್ಧಿ ಹಾಗೂ ಅಲ್ಲಿ ಮೋಟಾರು ವಾಹನ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ 12 ಹೈ ಡೆನ್ಸಿಟಿ ಕಾರಿಡಾರ್ ಗುರುತಿಸಿ, ವಿವಿಧ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಕೆಲ ವರ್ಷಗಳ ಹಿಂದೆಯೇ ರೂಪುಗೊಂಡಿದ್ದ ಈ ಕಾರಿಡಾರ್​ಗಳ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗುತ್ತಿದೆ.
ಹೈ ಡೆನ್ಸಿಟಿ ಕಾರಿಡಾರ್​ಗಳು
ಬಳ್ಳಾರಿ ರಸ್ತೆ: ಚಾಲುಕ್ಯ ವೃತ್ತದಿಂದ ಹೆಬ್ಬಾಳ-7.1 ಕಿ.ಮೀ.ಹಳೇ ಮದ್ರಾಸ್ ರಸ್ತೆ: ಟ್ರಿನಿಟಿ ವೃತ್ತ- ಹೋಪ್ ಫಾಮ್ರ್, ಕೆ.ಆರ್. ಪುರ ರೈಲು ನಿಲ್ದಾಣ- ಮೇದಹಳ್ಳಿ-21.6 ಕಿಮೀಹಳೇ ವಿಮಾನ ನಿಲ್ದಾಣ ರಸ್ತೆ: ಎಸಿಎಸ್ ಕೇಂದ್ರ- ಕಾಡುಗುಡಿ-19.5 ಕಿ.ಮೀ.ಸರ್ಜಾಪುರ ರಸ್ತೆ: ಹೊಸೂರು ರಸ್ತೆ- ಬಿಬಿಎಂಪಿ ಸರಹದ್ದು-8.85 ಕಿ.ಮೀ.ಹೊಸೂರು ರಸ್ತೆ: ವೆಲ್ಲಾರ ಜಂಕ್ಷನ್- ಸೆಂಟ್ರಲ್ ಸಿಲ್ಕ್​ಬೋರ್ಡ್-6.7 ಕಿ.ಮೀ.ಬನ್ನೇರಘಟ್ಟ ರಸ್ತೆ: ಹೊಸೂರು ಲಷ್ಕರ್ ರಸ್ತೆ- ಕೋಳಿ ಫಾಮ್ರ್ ಜಂಕ್ಷನ್-13 ಕಿ.ಮೀ.ಕನಕಪುರ ರಸ್ತೆ: ಕೆ.ಆರ್. ರಸ್ತೆ- ನೈಸ್ ರಸ್ತೆ-14.5 ಕಿ.ಮೀ.ಮೈಸೂರು ರಸ್ತೆ: ಹಡ್ಸನ್ ವೃತ್ತ- ಜ್ಞಾನಭಾರತಿ ಜಂಕ್ಷನ್-9 ಕಿ.ಮೀ.ಮಾಗಡಿ ರಸ್ತೆ: ಹಳೇ ಬಿನ್ನಿ ಮಿಲ್- ಅಂಜನಾನಗರ-11.5 ಕಿ.ಮೀ.ತುಮಕೂರು ರಸ್ತೆ: ಸಂಗೊಳ್ಳಿ ರಾಯಣ್ಣ ವೃತ್ತ- ಗೊರಗುಂಟೆಪಾಳ್ಯ ಜಂಕ್ಷನ್-7.85 ಕಿಮೀಕಾರ್ಡ್ ರಸ್ತೆ: ಸ್ಯಾಂಡಲ್ ಸೋಪ್ ಫ್ಯಾಕ್ಟರಿ- ಮೈಸೂರು ರಸ್ತೆ-8.65 ಕಿ.ಮೀ.ಹೊರವರ್ತಲ ರಸ್ತೆ: ಗೊರಗುಂಟೆ ಪಾಳ್ಯ ಜಂಕ್ಷನ್- ಕೊಟ್ಟಿಗೆಪಾಳ್ಯ-62 ಕಿಮೀ
ಈ ಹಿಂದೆ ಬಿಬಿಎಂಪಿಯಿಂದ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಯೋಜನೆ ಹೊಣೆಯನ್ನು ಕರ್ನಾಟಕ ರಸ್ತೆ ಅಭಿವೃದಿಟಛಿ ನಿಗಮಕ್ಕೆ (ಕೆಆರ್​ಡಿಸಿಎಲ್) ವಹಿಸಲಾಗಿದೆ. ಕಾರಿಡಾರ್​ಗಳಲ್ಲಿ ಕೈಗೊಳ್ಳಬೇಕಿರುವ ಅಭಿವೃದಿಟಛಿ ಕಾರ್ಯಗಳ ಕುರಿತು ವಿವರ ಕಾರ್ಯಸಾಧ್ಯತಾ ವರದಿ ಸಿದಟಛಿಪಡಿಸಿ ಸರ್ಕಾರದ ಅನುಮೋದನೆಗೆ ಕೆಆರ್​ಡಿಸಿಎಲ್ ಸಲ್ಲಿಸಿದೆ. ಹೈ ಡೆನ್ಸಿಟಿ ಕಾರಿಡಾರ್​ಗಳಲ್ಲಿ ಸೈಕಲ್ ಪಥ, ರಸ್ತೆ ಡಾಂಬರೀಕರಣ, ಸೂಚನಾ ಫಲಕ ಅಳವಡಿಕೆ ಮತ್ತಿತರ ಕಾಮಗಾರಿ ನಡೆಯಲಿವೆ. ಪ್ರಮುಖವಾಗಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ:ವಾಹಿನಿ ಮುಂದೆ ಕುಳಿತು ಪಾಠ ಆಲಿಸಿದ ಮಕ್ಕಳು
5 ವರ್ಷಕ್ಕೆ ಸಾವಿರ ಕೋಟಿ ರೂ.:ಡಿಎಫ್​ಆರ್ ನಲ್ಲಿರುವಂತೆ ಮೊದಲ ವರ್ಷದ ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 477.29 ಕೋಟಿ ರೂ. ಅವಶ್ಯಕತೆಯಿದೆ. ಉಳಿದಂತೆ, ಮುಂದಿನ 4 ವರ್ಷಗಳ ನಿರ್ವಹಣೆಗಾಗಿ 642.71 ಕೋಟಿ ರೂ. ಬೇಕಾಗಲಿದೆ. ಒಟ್ಟಾರೆ 5 ವರ್ಷಗಳಿಗೆ 1,120 ಕೋಟಿ ರೂ. ಅಗತ್ಯವಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಅಮ್ಮಾ…. ಒಮ್ಮೆ ನಿನ್ನ ಕಣ್ತುಂಬಿಕೊಂಡು ಬಿಡುವೆ: ಐಸಿಯು ಕಿಟಕಿ ಬಳಿ ಕುಳಿತ ಪ್ಯಾಲೆಸ್ತೈನ್ ಯುವಕನ ಕಣ್ಣೀರ ಕಥೆ
ಅನುಮೋದನೆ ಬಾಕಿ:ಕೆಆರ್​ಡಿಸಿಎಲ್ ಸಲ್ಲಿಸಿರುವ ವರದಿಗೆ ಈವರೆಗೆ ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಅನುಮೋದನೆ ಸಿಕ್ಕಿಲ್ಲ. ನಗರಾಭಿವೃದ್ಧಿ ಇಲಾಖೆಯಿಂದ ಅನುಮತಿ ದೊರೆತಿದ್ದು, ಸದ್ಯ ಆರ್ಥಿಕ ಇಲಾಖೆಯಲ್ಲಿ ಕಡತವಿದೆ. ಅಲ್ಲಿ ಒಪ್ಪಿಗೆ ದೊರೆತ ನಂತರ 3 ಪ್ಯಾಕೇಜ್​ಗಳಲ್ಲಿ ಟೆಂಡರ್ ಕರೆಯಲು ಕೆಆರ್​ಡಿಸಿಎಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಮೊದಲ ಬ್ಯಾಚ್​ನ 5 ರಫೆಲ್​ ಜೆಟ್​ಗಳು ಜುಲೈ ಅಂತ್ಯಕ್ಕೆ ಸೇನೆ ಸೇರ್ಪಡೆ
ಹಲವು ಕಾಮಗಾರಿಗಳು:12 ಹೈ ಡೆನ್ಸಿಟಿ ಕಾರಿಡಾರ್​ನಲ್ಲಿ ಬರುವ ರಸ್ತೆ ಅಭಿವೃದ್ಧಿ ಜತೆಗೆ, ಚರಂಡಿ ದುರಸ್ತಿ, ಹೂಳು ತೆಗೆಯುವುದು, ಪಾದಚಾರಿ ಮಾರ್ಗ ಅಭಿವೃದ್ಧಿ, ರಸ್ತೆ ಮಾರ್ಕಿಂಗ್, ಪಥ ವಿಭಜಕ ಅಳವಡಿಕೆ, ಜಂಕ್ಷನ್​ಗಳ ಅಭಿವೃದ್ಧಿ, ಸೈಕಲ್ ಪಥ ನಿರ್ಮಾಣ, ಒಎಫ್​ಸಿ ಅಳವಡಿಕೆಗೆ ಸೂಕ್ತ ಜಾಗ ನೀಡುವುದು- ಹೀಗೆ ಹಲವು ಕಾರ್ಯ ಮಾಡಲಾಗುತ್ತದೆ. ಅದರ ಜತೆಗೆ ಮುಂದಿನ 5 ವರ್ಷ ರಸ್ತೆಗಳ ದುರಸ್ತಿ, ಸ್ವಚ್ಛತೆ ಇನ್ನಿತರ ಕಾರ್ಯಗಳನ್ನು ಮಾಡಬೇಕಿದೆ.
ಸೋಂಕು ಭೀತಿ ನಿವಾರಣೆಗೆ ವಿಶ್ವೇಶ್ವರಯ್ಯ ಮ್ಯೂಸಿಯಂ ಹೊಸ ಹೆಜ್ಜೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
