ಕುಂದಾಪುರ:ಹಾವನ್ನು ನೋಡಿದರೆ ಸಾಕು, ಮಕ್ಕಳು ಒಮ್ಮೆ ಬೆಚ್ಚಿ ಬೀಳುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬ ಬಾಲಕ, ಬರೀ ಹನ್ನೆರಡು ವರ್ಷದ ಪೋರ ಹೆಬ್ಬಾವನ್ನೇ ಹಿಡಿದು ಜನರು ಬೆರಗಾಗುವಂತೆ ಮಾಡಿದ್ದಾನೆ. ಈತ ಹೆಬ್ಬಾವಿನ ಬಾಯಿ ಭಾಗಕ್ಕೇ ಕೈ ಹಾಕಿ ಹಿಡಿದಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ.
ಇಂಥದ್ದೊಂದು ಪ್ರಕರಣ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ನಡೆದಿದೆ. ಇತ್ತೀಚೆಗೆ ಸಾಲಿಗ್ರಾಮ ಪರಿಸರದಲ್ಲಿ ಈ 12 ವರ್ಷದ ಪೋರ ಹೆಬ್ಬಾವಿಗೆ ಹೆದರದೆ ಅದರ ತಲೆಗೆ ಕೈಹಾಕಿ ಹಿಡಿದ ದೃಶ್ಯ ವಾಟ್ಸ್​ಆ್ಯಪ್​, ಫೇಸ್​ಬುಕ್‌ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿದೆ.
ಇದನ್ನೂ ಓದಿ:ವಂಚನೆಗೆ ಸಿನಿಮೀಯ ಶೈಲಿ ಸ್ಕ್ರಿಪ್ಟ್ ತಯಾರಿಸಿದ್ದ ಚೈತ್ರಾ ಗ್ಯಾಂಗ್: ಬಿಜೆಪಿ ಪ್ರಮುಖರಂತೆ ವಿವಿಧ ಪಾತ್ರ ಸೃಷ್ಟಿಸಿ ಆರೋಪಿಗಳಿಂದ ಮೋಸ
ಹೀಗೆ ಹೆಬ್ಬಾವನ್ನು ಹಿಡಿದು ಭೇಷ್ ಎನಿಸಿಕೊಂಡಿರುವ ಈ ಬಾಲಕನ ಹೆಸರು ಧೀರಜ್ ಐತಾಳ್​​. ಈತ ಚಿತ್ರಪಾಡಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಇವರ ತಂದೆ ಸುಧೀಂದ್ರ ಐತಾಳ್, ಇವರು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಮೀಪ ವಾಸವಿದ್ದಾರೆ.
ಸುಧೀಂದ್ರ ಅವರು ಪ್ರಾಣಿಪ್ರೇಮಿಯಾಗಿದ್ದು ಗಾಯಗೊಂಡ ಪ್ರಾಣಿ-ಪಕ್ಷಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ತಾವು ಪ್ರಾಣಿಗಳೊಂದಿಗೆ ಸ್ನೇಹ ಸಂಬಂಧ ವೃದ್ಧಿಸಿಕೊಳ್ಳುವುದರ ಜೊತೆಗೆ ಪುತ್ರನಿಗೂ ಆ ಕುರಿತ ಅಭಿರುಚಿ ಬೆಳೆಸಿದ್ದಾರೆ. ಈ ಪುಟ್ಟ ಪೋರನ ಧೀರತನಕ್ಕೆ ಮನಸೋತಿರುವ ಜನರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

A post shared by Vijayavani (@vijayavanino1)

‘ನಂಗೆ ಕನ್ನಡ ತುಂಬಾ ಇಷ್ಟ..’ ಎಂದು ಕ್ರಿಕೆಟಿಗ ಕಪಿಲ್​ದೇವ್ ಅವರಿಂದ ಹೇಳಿಸಿದ್ರು ಕನ್ನಡದ ನಟಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 7 =
Remember me
