| ತಾಳೂರು ಎಸ್.ಎರ್ರಿಸ್ವಾಮಿ ಬಳ್ಳಾರಿ
ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ ಹೆಣ್ಣು-ಗಂಡು ಸೇರಿ 11,713 ಮಕ್ಕಳು ಕಾಣೆಯಾಗಿದ್ದು, 1,200 ಮಕ್ಕಳು ಇದುವರೆಗೂ ಪತ್ತೆಯಾಗಿಲ್ಲ. ಪ್ರತಿವರ್ಷ ಅಪಹರಣ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
2018ರಲ್ಲಿ 770, 2019ರಲ್ಲಿ 2124, 2020ರಲ್ಲಿ 1557, 2021ರಲ್ಲಿ 2118, 2022ರಲ್ಲಿ 2576, 2023ರಲ್ಲಿ 2568 ಸೇರಿ ಹೆಣ್ಣು-ಗಂಡು ನಾಪತ್ತೆಯಾಗಿದ್ದು, ಹೆಣ್ಣು ಮಕ್ಕಳೇ ಜಾಸ್ತಿ ಇದ್ದಾರೆ. ಒಟ್ಟಾರೆ ಐದು ವರ್ಷದಲ್ಲಿ 10,513 ಮಕ್ಕಳು ಪತ್ತೆಯಾಗಿರುವುದು ದಾಖಲಾತಿಯಲ್ಲಿದೆ. ಮಕ್ಕಳು ಯಾವ ರೀತಿ ಕಾಣೆಯಾಗುತ್ತಾರೆ ಎಂಬುದಕ್ಕೆ ಹಲವು ಕಾರಣಗಳಿವೆ. ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ಬಲೆಗೆ ಬಿದ್ದು, ಮನೆಯವರಿಗೆ ತಿಳಿಸದೆ ಮದುವೆಯಾಗುತ್ತಾರೆ. ಪಾಲಕರ ಭಯದಿಂದ ಬೇರೆಬೇರೆ ರಾಜ್ಯಗಳಲ್ಲಿ ನೆಲೆಸುತ್ತಾರೆ. ಪಾಲಕರು ಸ್ಥಳೀಯ ಠಾಣೆಗಳಲ್ಲಿ ದೂರು ನೀಡುವುದರಿಂದ ಇವರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿರುತ್ತದೆ. ಕೆಲ ಮಕ್ಕಳು ಬುದ್ಧಿಮಾಂದ್ಯತೆಯಿಂದ ಮನೆಬಿಟ್ಟು ಹೋಗುವುದು, ಜಾತ್ರೆ-ಜನಜಂಗುಳಿಯಲ್ಲಿ ಕಾಣೆಯಾಗುವುದು ಸಾಮಾನ್ಯವಾಗಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಹಣದ ಆಮಿಷದಿಂದ ನಾಪತ್ತೆ ಪ್ರಕರಣಗಳು ದಾಖಲಾಗುವುದು ಹೆಚ್ಚು. ಇದರಲ್ಲಿ ಮಕ್ಕಳು ಪತ್ತೆಯಾದರೂ ಕೆಲವೆಡೆ ದೂರು ವಾಪಸ್ ಪಡೆಯುವುದಿಲ್ಲ. ಇದರಿಂದ ಕುಟುಂಬಕ್ಕೆ ತೊಂದರೆ ಎಂದು ಪಾಲಕರು ಸುಮ್ಮನಾಗುತ್ತಾರೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಪಹರಣ ಪ್ರಕರಣಗಳು ದಾಖಲಾಗುವುದು ತೀರಾ ಕಡಿಮೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳುತ್ತಾರೆ. ಅಪಹರಣ ಪ್ರಕರಣಗಳು ಪತ್ತೆ ಹಚ್ಚಲು ಸರ್ಕಾರ ಪಾಲಕರ ಒಪ್ಪಿಗೆ ಮೇರೆಗೆ ಪತ್ರಿಕಾ ಪ್ರಕಟಣೆ, ಗಡಿ ಜಿಲ್ಲೆ ಹಾಗೂ ಬಸ್-ರೈಲ್ವೆ ನಿಲ್ದಾಣದಲ್ಲಿ ಭಿತ್ತಿಪತ್ರ, ಫೋಟೋ ಅಂಟಿಸುತ್ತದೆ. ಕೃತ್ಯ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮರಾ ದಾಖಲೆ ಲಭ್ಯತೆ ಮಾಡಿಕೊಳ್ಳುವುದು, ಮಕ್ಕಳು ಇರಬಹುದಾದ ಶಾಪಿಂಗ್​ವಾಲ್, ಉದ್ಯಾನ, ಮನರಂಜನಾ ಹಾಗೂ ಕ್ರೀಡಾ ಸ್ಥಳಗಳು ಸೇರಿ ವಿವಿಧೆಡೆ ಹುಡುಕಿ ಪತ್ತೆ ಹಚ್ಚುತ್ತಾರೆ. ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಕ್ಕಳ ನಾಪತ್ತೆ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸಬೇಕಿದೆ.
ಮಕ್ಕಳ ನಾಪತ್ತೆ ಬಗ್ಗೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಇದರ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸೂಕ್ತ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
| ಶಶಿಧರ ಕೋಸುಂಬೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + seventeen =
Remember me
