ಬೆಂಗಳೂರು:ಆದ್ಯತಾ ಪಡಿತರ ಚೀಟಿಯನ್ನು ಹೊಂದಿದ ಕುಟುಂಬಕ್ಕೆ ಪ್ರತಿ ತಿಂಗಳು ಉಚಿತವಾಗಿ ಒಂದು ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ, ವಿದೇಶದಲ್ಲಿರುವ ದೇಶದ ಪ್ರತಿಭಾವಂತರ ಜ್ಞಾನವನ್ನು ಸ್ವದೇಶದಲ್ಲಿ ಬಳಸಿಕೊಳ್ಳಲು ‘ಮರಳಿ ತಾಯ್ನಾಡಿಗೆ’ ಯೋಜನೆ ಅನುಷ್ಠಾನಕ್ಕೆ ಮಣೆ! ಇದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸೋಮವಾರ ಆರಂಭಗೊಂಡ 15ನೇ ವಿಧಾನಸಭೆಯ 12ನೇ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಎರಡು ಹೊಸ ಉಪ್ರಕಮ. ಕಳೆದೊಂದು ವರ್ಷದ ಸರ್ಕಾರದ ಕಾರ್ಯವೈಖರಿಯ ಧನಾತ್ಮಕ ಸಂಗತಿಗಳನ್ನು ರಾಜ್ಯಪಾಲರು ಶಾಸನ ಸಭೆಯಲ್ಲಿ ಬಿಡಿಸಿಟ್ಟರು.
ಸದ್ಯ ಆದ್ಯತಾ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 5 ಕೆ.ಜಿ. ಧಾನ್ಯವನ್ನು ಪ್ರತಿ ತಿಂಗಳು ಹಂಚಲಾಗುತ್ತಿದೆ, ಸರ್ಕಾರವು ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಉದ್ದೇಶಿಸಿದ್ದು, ಏ.1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರದ ತೀರ್ವನವನ್ನು ಪ್ರಕಟಿಸಿದರು. ರಾಜ್ಯದಲ್ಲಿರುವ 1.14 ಕೋಟಿ ಬಿಪಿಎಲ್ ಕಾರ್ಡ್​ದಾರರಿಗೆ ಸರ್ಕಾರದ ಈ ತೀರ್ವನದಿಂದ ಅನುಕೂಲವಾಗಲಿದೆ. ರಾಜ್ಯವು ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್​ಇಪಿ) ಜಾರಿಗೊಳಿಸಿದೆ. ಅನುಷ್ಠಾನಕ್ಕೆ ಪೂರಕವಾದ ಪಠ್ಯಕ್ರಮ ಆವಿಷ್ಕಾರ ಮಾಡಲಾಗಿದೆ.
ಕನ್ನಡದಲ್ಲಿ ಭಾಷಣ:ಮಧ್ಯಪ್ರದೇಶ ಮೂಲದ ಥಾವರ್ ಚಂದ್ ಗೆಹಲೋತ್ ಕನ್ನಡ ಕಲಿಕೆಗೆ ಆಸಕ್ತಿ ತೋರಿಸಿ, ಕನ್ನಡ ಶಿಕ್ಷಕರಿಗೆ ಹುಡುಕಾಡಿ ಗಮನ ಸೆಳೆದಿದ್ದರು. ಇದೀಗ ಉಭಯ ಸದನ ಉದ್ದೇಶಿಸಿ ಕನ್ನಡದಲ್ಲೇ ಮಾತು ಆರಂಭಿಸಿ ಎಂಟು ಸಾಲನ್ನು ಕನ್ನಡದಲ್ಲೇ ಓದಿದರು. ಅವರ ಕನ್ನಡ ಮಾತಿಗೆ ಆಡಳಿತ ಪಕ್ಷದ ಶಾಸಕರು ಮೇಜು ಗುದ್ದಿ ಸ್ವಾಗತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ರಾಜ್ಯಪಾಲನಾಗಿ ಕರ್ನಾಟಕದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಒದಗಿಬಂದಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಹಾಗೂ ಸಂತೋಷ ಎನಿಸುತ್ತಿದೆ. 2022ನೇ ಸಾಲಿನ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ತಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದು ತಡವರಿಸದೆಯೇ ಕನ್ನಡದಲ್ಲಿ ಸ್ವಾಗತಿಸಿದರು.
ಎರಡು ದಶಕಗಳ ನಂತರ ವಿಧಾನಸೌಧದ ಮೆಟ್ಟಿಲುಗಳ ಮೂಲಕ ಜಂಟಿ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲ ಎಂಬ ದಾಖಲೆಯನ್ನು ಥಾವರ್ ಚಂದ್ ಗೆಹಲೋತ್ ಬರೆದರು. ರಾಜ್ಯಪಾಲರಿಗೆ ಸ್ವಾಗತ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ.
ಮರಳಿ ತಾಯ್ನಾಡಿಗೆ ಅನುಷ್ಠಾನ:ವಿದೇಶದಲ್ಲಿರುವ ಕನ್ನಡಿಗರ ಜ್ಞಾನವನ್ನು ಸ್ವದೇಶದಲ್ಲಿ ಬಳಸಿಕೊಳ್ಳಲು ‘ಮರಳಿ ತಾಯ್ನಾಡಿಗೆ’ ಯೋಜನೆ ಅನುಷ್ಠಾನಕ್ಕೆ ತೀರ್ವನಿಸಲಾಗಿದೆ. ಅಲ್ಲಿಂದಲೇ ಅವರ ಮಾರ್ಗದರ್ಶನ ಪಡೆದುಕೊಳ್ಳುವ ಉದ್ದೇಶದ ಈ ಯೋಜನೆಗೆ ಸರ್ಕಾರ ಸೂಕ್ತ ನೀತಿ ರಚನೆ ಹಾಗೂ ಅನುದಾನ ಬಿಡುಗಡೆಗೊಳಿಸಲಿದೆ ಎಂದು ರಾಜ್ಯಪಾಲರು ಪ್ರಕಟಿಸಿದರು.
ಕೋವಿಡ್, ಪ್ರವಾಹ ಪರಿಸ್ಥಿತಿಯನ್ನು ಸರ್ಕಾರ ಹೇಗೆ ನಿಭಾಯಿಸಿದೆ ಎಂಬುದನ್ನು ತಿಳಿಸಿದ್ದೇವೆ. ವಿವಿಧ ಕ್ಷೇತ್ರಗಳ ಪ್ರಗತಿಯ ಚಿತ್ರಣ ನೀಡಿದ್ದೇವೆ. ಇನ್ನೂ ಹಲವು ಇಲಾಖೆಗಳ ಪ್ರಗತಿಯನ್ನು ರಾಜ್ಯಪಾಲರ ಭಾಷಣದಲ್ಲಿ ತಿಳಿಸಿಲ್ಲ. ಉತ್ತರ ನೀಡುವ ಸಂದರ್ಭದಲ್ಲಿ ಉಳಿದ ಇಲಾಖೆಗಳ ಪ್ರಗತಿಯ ಚಿತ್ರಣವನ್ನು ನೀಡುತ್ತೇವೆ. ಪ್ರತಿಪಕ್ಷಗಳಿಗೆ ಹೇಳುವುದಕ್ಕೆ ಏನೇನೂ ಇಲ್ಲದೆ ಟೀಕಿಸುತ್ತಿವೆ.
| ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಸರ್ಕಾರದಿಂದ ಕೋವಿಡ್ ನಿರ್ವಹಣೆ:ನನ್ನ ಸರ್ಕಾರ, ಕರೊನಾದಿಂದ ಉದ್ಭವಿಸಿದ ಕೆಟ್ಟ ಪರಿಣಾಮ ಗಳನ್ನು ನಿರ್ವ ಹಿಸಲು ಹಾಗೂ ನಿವಾರಿಸಲು ಅತ್ಯುತ್ತಮವಾಗಿ ಶ್ರಮಿಸಿದೆ. ಸವಾಲು, ಸಂಕಷ್ಟಗಳು ಇದ್ದಾಗಲೂ ಸಮರ್ಥವಾಗಿ ನಿರ್ವಹಿಸಿದೆ. ಸರ್ಕಾರದ ಮಧ್ಯಸ್ಥಿಕೆ ಯಿಂದ ರಾಜ್ಯದಲ್ಲಿ ಸಾವಿನ ಸಂಖ್ಯೆಯನ್ನು ಮೊಟಕು ಗೊಳಿಸಲು ಸಾಧ್ಯವಾಗಿದೆ ಎಂದು ಸಮರ್ಥಿಸಿಕೊಂಡರು.
ಆತ್ಮನಿರ್ಭರ ಯಶಸ್ಸು:ಪ್ರಧಾನಿ ನರೇಂದ್ರ ಮೋದಿ ಯವರ ದೂರದರ್ಶಿ ತ್ವದ ‘ಆತ್ಮನಿರ್ಭರ ಭಾರತ’ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಲಾಗಿದೆ. ಇದರಿಂದ ನಮ್ಮ ಸಾಮರ್ಥ್ಯ ವರ್ಧನೆ ಮತ್ತು ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಸಾಧ್ಯ ವಾಗಿದೆ ಎಂದು ರಾಜ್ಯ ಪಾಲರು ಹೇಳಿದರು.
ಡಬ್ಬಲ್ ಇಂಜಿನ್ ಸರ್ಕಾರ ನಾಡಿಗೆ ಡಬ್ಬಲ್ ದ್ರೋಹ ಎಸಗಿದೆ. ಸರ್ಕಾರ ರಾಜ್ಯಪಾಲರ ದಿಕ್ಕುತಪ್ಪಿಸಿ, ಅವರ ಬಾಯಿಂದ ಸುಳ್ಳು ಹೇಳಿಸಿದೆ. ಈ ಸರ್ಕಾರಕ್ಕೆ ಗೊತ್ತುಗುರಿಯೇ ಇಲ್ಲ.
| ಸಿದ್ದರಾಮಯ್ಯವಿಧಾನಸಭೆ ವಿರೋಧ ಪಕ್ಷದ ನಾಯಕ
ಕೀಳು ಮಟ್ಟದ ವಿಚಾರಧಾರೆಗಳು ಬಿಜೆಪಿ ನಾಯಕರಿಗೆ ಮಾತ್ರ ಸೀಮಿತ; ಶಾಸಕ ಜಮೀರ್ ಹೇಳಿಕೆ ಖಂಡಿಸಿದ ಸುರ್ಜೇವಾಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
