ವಿಜಯಪುರ:ವ್ಯಕ್ತಿಯೊಬ್ಬನ ಕಾಮದಾಟದಿಂದ ಅಪ್ರಾಪ್ತ ಬಾಲಕಿಯ ಜೀವನ ನರಕದಲ್ಲಿ ಸಿಲುಕಿದಂತಾಗಿದೆ. 13 ವರ್ಷದ ಬಾಲಕಿ ಮೇಲಿನ ನಿರಂತರ ಅತ್ಯಾಚಾರದಿಂದಾಗಿ ಇದೀಗ ಆಕೆ ಹೆಣ್ಣು ಮಗುವಿನ ತಾಯಿಯಾಗಿದ್ದಾಳೆ.
ಸಿಂದಗಿ ತಾಲೂಕಿನ ಗೊರವಗುಂಡಗಿ ಗ್ರಾಮದ ಶರಣಬಸು ಅವರಾದಿ (35) ನೀಚ ಕೃತ್ಯವೆಸಗಿದ ಕಾಮುಕ. ಬಸವನ‌ ಬಾಗೇವಾಡಿ ಮೂಲದ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಬೆಂಗಳೂರಿನ ಕೆಂಗೇರಿ ಬಳಿಯ ಅನಿಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಳು.
ಇದನ್ನೂ ಓದಿ:ಕರೊನಾ ತವರು ಚೀನಾದಲ್ಲಿ ಉದ್ಯೋಗಿಗಳಿಗೆ ಜೀವಂತ ಹುಳು ತಿನ್ನುವ ಶಿಕ್ಷೆ: ಕಾರಣ ಕೇಳಿದ್ರೆ ಬೆರಗಾಗ್ತೀರಾ!
ಇತ್ತ ತಾಯಿ‌ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಆರೋಪಿ ಶರಣಬಸು ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ. ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ, ನಿರಂತರವಾಗಿ ಒಂದು ವರ್ಷದಿಂದ ಅತ್ಯಾಚಾರ ಎಸಗಿದ್ದಾನೆಂದು ಆರೋಪ ಕೇಳಬಂದಿದೆ.
ಅತ್ಯಾಚಾರದ ವಿಚಾರ ಯಾರಿಗೂ ಹೇಳದಂತೆ ಅಪ್ರಾಪ್ತೆಗೆ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಆದರೆ, ಈ‌ ವಿಚಾರ ತಾಯಿಗೆ ಗೊತ್ತಾದ ಬಳಿಕವೂ ಶರಣಬಸು ಆಕೆಗೂ ಬೆದರಿಕೆಯೊಡ್ಡಿದ್ದಾನೆ. ಆದರೆ, ಸತ್ಯ ಎಷ್ಟು ದಿನ ಅಂತ ಮರೆಮಾಚಲು ಸಾಧ್ಯ. ಹೆರಿಗೆ ಬಳಿಕ ಶರಣಬಸು ಕರ್ಮಕಾಂಡವೆಲ್ಲವೂ ಬಟಾಬಯಲಾಗಿದೆ. ನಿರಂತರ ಅತ್ಯಾಚಾರ ಪರಿಣಾಮ ಮೇ 30ರಂದು ಬಾಲಕಿ ವಿಜಯಪುರದ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ‌ ನೀಡಿದ್ದಾಳೆ.
ಇದನ್ನೂ ಓದಿ:ಪಾಂಡ್ಯ ಭಾವಿ ಪತ್ನಿಗೆ ಸೀಮಂತ ಶಾಸ್ತ್ರ
ಇದೀಗ ಸಿಂದಗಿ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಸಂತ್ರಸ್ತ ಬಾಲಕಿ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶರಣಬಸು ಅವರಾದಿಯ ಪತ್ತೆಗೆ ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಇಬ್ಬರು ಪಾಕ್​ ಗೂಢಾಚಾರಿಗಳನ್ನು ಹೊರದಬ್ಬಿದ ಭಾರತ: ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − 1 =
Remember me
