ಬೆಂಗಳೂರು:ರಾಜ್ಯದ ಕರೊನಾ ಸೋಂಕಿತರಿಗೆ ಎದುರಾಗುತ್ತಿರುವ ಆಮ್ಲಜನಕ ಕೊರತೆ ನೀಗಿಸಲು ರೈಲ್ವೆ ಇಲಾಖೆ ಎರಡನೇ ಆಮ್ಲಜನಕ ವಿಶೇಷ ಎಕ್ಸ್​ಪ್ರೆಸ್​ ರೈಲನ್ನು ರಾಜ್ಯಕ್ಕೆ ಕಳುಹಿಸುತ್ತಿದೆ.ದಿನದಿಂದ ದಿನಕ್ಕೆ ಕರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸೋಂಕಿತರಿಗೆ ಅಗತ್ಯವಿರುವ ಆಮ್ಲಜನಕದ ಕೊರತೆಯೂ ಉಂಟಾಗುತ್ತಿದೆ. ಹೀಗಾಗಿ ಖುದ್ದು ಹೈಕೋರ್ಟ್​ ರಾಜ್ಯಕ್ಕೆ 1,200 ಟನ್​ ಲಿಕ್ವಿಡ್​ ಮೆಡಿಕಲ್​ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅದರಂತೆ ಕೇಂದ್ರ ಸರ್ಕಾರ ಕಳೆದ ಮಂಗಳವಾರ (ಮೇ 11) ಮೊದಲ ಆಕ್ಸಿಜನ್​ ವಿಶೇಷ ರೈಲನ್ನು ಜೆಮ್​ಶೆಡ್​ಪುರದಿಂದ ರಾಜ್ಯಕ್ಕೆ ಕಳುಹಿಸಲಾಗಿತ್ತು. ಅದರ ಮೂಲಕ 120 ಮೆಟ್ರಿಕ್​ ಟನ್​ ಲಿಕ್ವಿಡ್​ ಆಕ್ಸಿಜನ್​ ಹೊತ್ತ 6 ಟ್ಯಾಂಕರ್​ಗಳು ರಾಜ್ಯಕ್ಕೆ ಬಂದಿದ್ದವು. ಇದೀಗ ಮತ್ತೊಂದು ಆಕ್ಸಿಜನ್​ ವಿಶೇಷ ರೈಲನ್ನು ಕಳುಹಿಸಲಾಗುತ್ತಿದೆ.
130 ಮೆ.ಟನ್​ ಆಮ್ಲಜನಕ:ಮಂಗಳವಾರ ರಾಜ್ಯಕ್ಕೆ ಬಂದಿದ್ದ ಆಮ್ಲಜನಕ ವಿಶೇಷ ರೈಲನ್ನು ಇದೀಗ ಆಂಧ್ರಪ್ರದೇಶದ ಎಲೂರು ನಿಲ್ದಾಣಕ್ಕೆ ಕಳುಹಿಸಲಾಗಿದೆ. ಖಾಲಿ ಟ್ಯಾಂಕರ್​ಗಳನ್ನು ಹೊತ್ತ ರೈಲು ಗುರುವಾರ ತೆರಳಿದ್ದು, ಅಲ್ಲಿ ಆಮ್ಲಜನಕವನ್ನು ಭರ್ತಿ ಮಾಡಿಕೊಂಡು ಭಾನುವಾರದೊಳಗೆ ರಾಜ್ಯಕ್ಕೆ ವಾಪಸ್​ ಬರಲಿದೆ. ಈ ಬಾರಿ 130 ಮೆಟ್ರಿಕ್​ ಟನ್​ ಆಮ್ಲಜನಕ ರಾಜ್ಯಕ್ಕೆ ತರಲಾಗುತ್ತದೆ. ಹೀಗೆ ಆಂಧ್ರಪ್ರದೇಶದಿಂದ ಬರುವ ರೈಲು, ರೈಲ್ವೆ ಇಲಾಖೆ ನಿಗದಿ ಮಾಡುವ ನಿಲ್ದಾಣಗಳಿಗೆ ಮತ್ತೆ ವಾಪಸ್​ ತೆರಳಲಿದೆ. ಅಲ್ಲಿಂದ ಆಮ್ಲಜನಕ ಭರ್ತಿ ಮಾಡಿಕೊಂಡು ರಾಜ್ಯಕ್ಕೆ ಮತ್ತೆ ಬರಲಿದೆ.
ಇದನ್ನೂ ಓದಿ:ಹೊಸ ಪಾಕಿಸ್ತಾನದ ಭರವಸೆ ಕೊಟ್ಟ ಇಮ್ರಾನ್​ ಖಾನ್ ಅರೆಸ್ಟ್; ಜತೆಗೆ ಐವರು ಬೆಂಬಲಿಗರೂ ಒಳಗೆ!
100 ಆಮ್ಲಜನಕ ವಿಶೇಷ ರೈಲು ಸಂಚಾರ:ದೇಶಾದ್ಯಂತ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತಿರುವ ರೈಲ್ವೆ ಇಲಾಖೆ, ಈವರೆಗೆ 100 ಆಮ್ಲಜನಕ ವಿಶೇಷ ರೈಲು ಸೇವೆಯನ್ನು ನೀಡಿದೆ. ಅವುಗಳಿಂದ ಒಟ್ಟು 6,260 ಮೆಟ್ರಿಕ್​ ಟನ್​ ಆಮ್ಲಜನಕವನ್ನು ವಿವಿಧ ರಾಜ್ಯಗಳಿಗೆ ಪೂರೈಸಲಾಗಿದೆ. ಅದರಲ್ಲಿ ದೆಹಲಿಗೆ 2,404 ಮೆಟ್ರಿಕ್​ ಟನ್​ ಆಮ್ಲಜನಕ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ 1,680 ಮೆ. ಟನ್​, ಹರಿಯಾಣಕ್ಕೆ 939 ಮೆ. ಟನ್​, ಮಹಾರಾಷ್ಟ್ರಕ್ಕೆ 404 ಮೆ.ಟನ್​, ಮಧ್ಯಪ್ರದೇಶಕ್ಕೆ 360 ಮೆ.ಟನ್​ ಲಿಕ್ವಿಡ್​ ಮೆಡಿಕಲ್​ ಆಮ್ಲಜನಕವನ್ನು ರೈಲಿನ ಮೂಲಕ ಸಾಗಿಸಲಾಗಿದೆ.
ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್ಐಆರ್; ವಿಸ್ಕಿ ಎರಚಿ ಹಲ್ಲೆ ನಡೆಸಿದ ಆರೋಪ!

ವೈದ್ಯರೇ ಕರೊನಾಗೆ ಬಲಿ; ಆಸ್ಪತ್ರೆಗೆ ಬರಲು ಹಿಂಜರಿಯುತ್ತಿರುವ ಸಾರ್ವಜನಿಕರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
