ಬೆಂಗಳೂರು:ಶೇಷಾದ್ರಿಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೋಳಿಶೆಡ್​ನ ಅಂಡರ್​ಗ್ರೌಂಡ್​ನಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ 1,352 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ರಾಜ್ಯದ ಇತಿಹಾಸದಲ್ಲೇ ಇದು ಬಹುದೊಡ್ಡ ಬೇಟೆ ಎನ್ನಲಾಗುತ್ತಿದ್ದು, ಇಡೀ ರಾಜ್ಯಕ್ಕೆ ಈ ಕೋಳಿಶೆಡ್​ನಿಂದಲೇ ಗಾಂಜಾ ಸರಬರಾಜು ಆಗುತ್ತಿತ್ತು ಎಂಬ ಆತಂಕಕಾರಿ ವಿಷಯವೂ ಬಯಲಾಗಿದೆ.
ಇದನ್ನೂ ಓದಿರಿನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ
1,352ಕ್ಕೂ ಹೆಚ್ಚು ಕೆಜಿ ಗಾಂಜಾ ಸಿಕ್ಕಿದ್ದು ಕಲಬುರಗಿಯ ಲಕ್ಷ್ಮಣ್​ ನಾಯಕ್​ ತಾಂಡಾದಲ್ಲಿನ ಕೋಳಿಶಡ್​ನಲ್ಲಿ. ಒಡಿಶಾ ಮೂಲಕ ಕಲಬುರಗಿಗೆ ಗಾಂಜಾ ಸರಬರಾಜು ಆಗುತ್ತಿತ್ತು.
ಡ್ರಗ್ಸ್​ ವಿರುದ್ಧ ಸಮರದಲ್ಲಿ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಆಟೋ ಚಾಲಕನ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿದ್ದ ಕೇಂದ್ರ ವಿಭಾಗದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, 13 ಕ್ವಿಂಟಾಲ್ ಗಾಂಜಾ ಪತ್ತೆಹಚ್ಚಿದ್ದಾರೆ.
ಬೆಂಗಳೂರಿನ ಗಾಯತ್ರಿನಗರದ ಆಟೋಚಾಲಕ ಜ್ಞಾನಶೇಖರ್, ವಿಜಯಪುರದ ಸಿದ್ದುನಾಥ್, ಬೀದರ್ ಮೂಲದ ನಾಗನಾಥ್, ಕಲಬುರಗಿಯ ಚಂದ್ರಕಾಂತ್ ಬಂಧಿತರು.ಖಚಿತ ಮಾಹಿತಿ ಮೇರೆಗೆ ಕಲಬುರಗಿಯ ಕೋಳಿಶಡ್​ ಮೇಲೆ ದಾಳಿ ನಡೆಸಿದಾಗ ಸುಮಾರು 6 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ.
https://www.facebook.com/VVani4U/videos/347308149963233
video/ ಕೋಳಿ ಶೆಡ್​ಗೆ ಒಳಹೊಕ್ಕ ಪೊಲೀಸರೇ ದಂಗಾದ್ರು… 1,352 ಕೆಜಿ ಗಾಂಜಾ ರಹಸ್ಯ ಇಲ್ಲಿದೆ

ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twelve =
Remember me
