|ಕೀರ್ತಿನಾರಾಯಣ ಸಿ.ಬೆಂಗಳೂರು
ಡ್ರೋನ್ ಸರ್ವೆ, ಟಾಸ್ಕ್​ಫೋರ್ಸ್ ರಚನೆ, ವಿಶೇಷ ಕಾರ್ಯಾಚರಣೆ ಸೇರಿ ಹಲವು ಬಿಗಿ ಕ್ರಮಗಳನ್ನು ಕೈಗೊಂಡರೂ ರಾಜ್ಯದಲ್ಲಿ ‘ಅಕ್ರಮ ಗಣಿಗಾರಿಕೆ’ ಅವ್ಯಾಹತವಾಗಿ ಮುಂದುವರಿದಿದೆ. ಕಳೆದ 3 ವರ್ಷದಲ್ಲಿ 13,515 ಅಕ್ರಮ ಗಣಿಗಾರಿಕೆ ಪ್ರಕರಣಗಳು ವರದಿಯಾಗಿವೆ. ಕರ್ನಾಟಕ ಜತೆಗೆ ಕೇರಳ, ತೆಲಂಗಾಣ, ಮಧ್ಯಪ್ರದೇಶ, ಗುಜರಾತ್ ಹಾಗೂ ಆಂಧ್ರಪ್ರದೇಶಗಳಲ್ಲೂ ಇದು ಮಿತಿಮೀರಿದೆ. ಜೈಲು ಶಿಕ್ಷೆ ವಿಧಿಸಲು ಬಲವಾದ ಕಾನೂನು ಜಾರಿಯಲ್ಲಿಲ್ಲದಿರುವುದು ಗಣಿ ಅಕ್ರಮ ಗರಿಗೆದರಲು ಕಾರಣವಾಗಿದೆ.
ರಾಜ್ಯದಲ್ಲಿ ಬೆಂಗಳೂರು ಹೊರವಲಯ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಬೀದರ್, ಶಿವಮೊಗ್ಗ, ಮಂಡ್ಯ, ಮೈಸೂರು, ದ.ಕನ್ನಡ, ಬಳ್ಳಾರಿ, ತುಮಕೂರು ಮತ್ತು ವಿಜಯಪುರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಅದರಲ್ಲೂ ಕಲ್ಲು ಗಣಿಗಾರಿಕೆ ವಿಪರೀತವಾಗಿದೆ. ಅಕ್ರಮ ಗಣಿಗಾರಿಕೆ, ದಾಸ್ತಾನು ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಪೊಲೀಸ್ ಕೇಸ್​ಗಳು ವರದಿಯಾಗುತ್ತಿದ್ದರೂ ಹತೋಟಿಗೆ ಬಂದಿಲ್ಲ.
ಕರ್ನಾಟಕದಲ್ಲಿ ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಗ್ರಾನೈಟ್ ಸೇರಿ ಎಲ್ಲ ರೀತಿ ಅಕ್ರಮಗಳಿಗೆ ಸಂಬಂಧಿಸಿದಂತೆ 2019-20ರಲ್ಲಿ 4935, 2020-21ರಲ್ಲಿ 5584 ಹಾಗೂ 2021-22ರಲ್ಲಿ 2996 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಕಲ್ಲು ಹಾಗೂ ಮರಳು ಗಣಿಗಾರಿಕೆ ಪ್ರಕಣಗಳೇ ಜಾಸ್ತಿ. 2221 ಎಫ್​ಐಆರ್ ದಾಖಲಾಗಿದ್ದು, 1198 ಪ್ರಕರಣಗಳು ಕೋರ್ಟ್​ನಲ್ಲಿ ದಾಖಲಾಗಿವೆ. 70.15 ಲಕ್ಷ ರೂ. ದಂಡ ವಿಧಿಸಲಾಗಿದೆ.
16 ರಾಜ್ಯಗಳಲ್ಲಿ ನಿರಂತರ ಅಕ್ರಮ:ದೇಶದ 16 ರಾಜ್ಯಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. 2019-20ರಿಂದ 2021-22ರವರೆಗೆ ಬರೋಬ್ಬರಿ 1,86,711 ಪ್ರಕರಣ ವರದಿಯಾಗಿವೆ. ತೆಲಂಗಾಣ, ಗುಜರಾತ್ ಸೇರಿ 7 ರಾಜ್ಯಗಳಲ್ಲೂ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಸಂಬಂಧ ಕೋಟ್ಯಂತರ ರೂಪಾಯಿ ದಂಡ ವಿಧಿಸಿದೆ.
5300 ಕೋಟಿ ರೂ. ಆದಾಯ:ನಿಕ್ಷೇಪ ಸಂಗ್ರಹಕ್ಕೆ ಅಗತ್ಯವಿರುವ ಸ್ಥಳದಲ್ಲಿ ಕಾನೂನಿನ ಅನ್ವಯ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಕರ್ನಾಟಕದಲ್ಲಿ ಕಳೆದ 5300 ಕೋಟಿ ರಾಜಧನ ಸಂಗ್ರಹವಾಗಿದೆ. ಅನುಮತಿ ಪಡೆಯದಿರುವ ಕಂಪನಿಗಳೂ ಸೇರಿ ಅಂದಾಜು 2500 ಗಣಿ ಕಂಪನಿಗಳು ಗಣಿಗಾರಿಕೆ ನಡೆಸುತ್ತಿರುವ ಮಾಹಿತಿ ಇದೆ.
ನಿಯಮ ಏನಿದೆ?:ಮೈನ್ಸ್ ಆಂಡ್ ಮಿನರಲ್ಸ್ ಕಾಯ್ದೆ (ಎಂಎಂಡಿಆರ್) 1957ರ ಸೆಕ್ಷನ್ 23ಸಿ ಅನ್ವಯ ಅಕ್ರಮ ಗಣಿಗಾರಿಕೆ, ದಾಸ್ತಾನು ಮತ್ತು ಸಾಗಾಟ ನಿಯಂತ್ರಣಕ್ಕೆ ಬೇಕಾಗಿರುವ ನಿಯಮಾವಳಿ ರೂಪಿಸಿಕೊಳ್ಳುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ಕೊಡಲಾಗಿದೆ. ಅಕ್ರಮ ಗಣಿಗಾರಿಕೆ ನಿಯಂತ್ರಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳ ಆಡಳಿತ ವ್ಯಾಪ್ತಿಗೆ ಬರುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅದರಂತೆ ಗಣಿಗಾರಿಕೆಗೆ ಅರಣ್ಯ ಸಂರಕ್ಷಣೆ ಕಾಯ್ದೆ 1980 2(1) ಮತ್ತು 2(3) ಹಾಗೂ ಅರಣ್ಯ ಸಂರಕ್ಷಾಣಾ ಕಾನೂನು 2003 (6) ಹಾಗೂ ಕೇಂದ್ರ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಬಳಿಕ ಗುತ್ತಿಗೆ ಆಧಾರದಲ್ಲಿ ಗಣಿಗಾರಿಕೆ ನಡೆಯಬೇಕು.
ಬೆಂಗಳೂರು:ರಾಜ್ಯದಿಂದ ಕಬ್ಬಿಣದ ಅದಿರು ರಫ್ತು ಜತೆಗೆ ನೇರವಾಗಿ ಬಯಸಿದ ಖರೀದಿದಾರರಿಗೆ ಮಾರಾಟ ಮಾಡುವುದಕ್ಕೂ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದ್ದು, ಕಬ್ಬಿಣದ ಅದಿರು ಗಣಿಗಳ ಸದ್ದು ಮತ್ತೆ ಹೆಚ್ಚುವ ಸಾಧ್ಯತೆಗಳಿವೆ. ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿದ್ದು, ಇದೇ ನೆಪವೊಡ್ಡಿ ರಫ್ತಿಗೆ ನಿರ್ಬಂಧ ವಿಧಿಸುವುದು ಬೇಡವೆಂಬ ವಾದವನ್ನು ಪುರಸ್ಕರಿಸಿದೆ.
2013ರಲ್ಲಿ ಸಲ್ಲಿಸಿದ್ದ ಅಫಿಡವಿಟ್​ಗೆ ರಾಜ್ಯ ಸರ್ಕಾರ ಅಂಟಿಕೊಂಡಿತ್ತು. ಇದಕ್ಕೆ ಹಲವು ಸಂಘಟನೆಗಳು ಒತ್ತಾಸೆ ನೀಡಿದ್ದವು. ಆದರೆ ಕೇಂದ್ರದ ಗಣಿ, ಸ್ಟೀಲ್ ಇಲಾಖೆಗಳು, ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರೀಯ ಉನ್ನತಾಧಿಕಾರ ಸಮಿತಿ ಹಾಗೂ ಗಣಿ ಮಾಲೀಕರು ನಿಲುವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಬೇರೆ ರಾಜ್ಯಗಳಲ್ಲಿ ಇರುವ ಹಾಗೆ ಕರ್ನಾಟಕದಿಂದಲೂ ಕಬ್ಬಿಣದ ಅದಿರು ರಫ್ತಿಗೆ ಅಸ್ತು ಎಂದಿದೆ.
11 ವರ್ಷ ಬಳಿಕ ತೆರವು:ರಾಜ್ಯದಲ್ಲಿ 2011ರಿಂದ ರಫ್ತು ನಿರ್ಬಂಧ ಜಾರಿಯಲ್ಲಿತ್ತು. 11 ವರ್ಷಗಳ ನಂತರ ರಫ್ತಿಗೆ ಮುಕ್ತ ಅವಕಾಶ ಲಭಿಸುತ್ತಿದೆ. ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಕಬ್ಬಿಣದ ಅದಿರು ಗಣಿಗಾರಿಕೆ ಚಟುವಟಿಕೆಗಳು ಬಿರುಸಾಗುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಎ, ಬಿ ಮತ್ತು ಸಿ ಶ್ರೇಣಿಗಳ ಅನುಮೋದಿತ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನೆ 42 ದಶಲಕ್ಷ ಟನ್​ಗಳಿದ್ದರೂ ಟೆಂಡರ್ ಮೂಲಕ ಸ್ಟೀಲ್ ಕಂಪನಿಗಳು 32-33 ದಶಲಕ್ಷ ಟನ್ ಖರೀದಿಸುತ್ತಿದ್ದು, 7-8 ದಶಲಕ್ಷ ಟನ್ ಉಳಿಯುತ್ತಿದೆ ಎಂಬ ಗಣಿ ಮಾಲೀಕರ ಕೊರಗು ದೂರವಾಗಲಿದೆ.
ಚೀನಾ ಸೇರಿ ವಿದೇಶಿ ಮಾರುಕಟ್ಟೆಗಳಲ್ಲಿ ಕಬ್ಬಿಣ ಅದಿರು ಫೈನ್ಸ್ ಪ್ರತಿ ಟನ್ 6,500-8,000 ರೂ.ಗಳಿದೆ. ಕರ್ನಾಟಕದಲ್ಲಿ 3,500- 4,000 ರೂ.ಗಳಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಉತ್ತಮ ಬೆಲೆ ಲಾಭವನ್ನು ಒಡಿಶಾ ಸೇರಿ ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯಗಳು ಈವರೆಗೆ ಪಡೆದಿದ್ದು, ಕರ್ನಾಟಕಕ್ಕೂ ಶುಕ್ರದೆಸೆ ತಿರುಗಲಿದೆ ಎಂದು ಗಣಿ ಮೂಲಗಳು ಹೇಳಿಕೊಳ್ಳುತ್ತಿವೆ. ಕಬ್ಬಿಣದ ಅದಿರು ಲಂಪ್ಸ್​ಗೆ ಕರ್ನಾಟಕದಲ್ಲಿ ಸದ್ಯಕ್ಕೆ ಟನ್​ಗೆ 6,5000 ರಿಂದ 7,000 ರೂ.ಗಳಿದ್ದು, ಫೈನ್ಸ್ ಪೂರ್ಣ ಪ್ರಮಾಣದ ರಫ್ತಾದರೆ ಈ ಬೆಲೆ ಏರಲಿದೆ. ದುಬಾರಿ ದರ ಸ್ಟೀಲ್ ಕಂಪನಿಗಳಿಗೆ ಹೊರೆ ಎನಿಸಿದರೂ ಅಂತಿಮವಾಗಿ ಖರೀದಿದಾರರೇ ಈ ಭಾರ ಹೊರಲಿದ್ದಾರೆ ಎಂದು ಸ್ಟೀಲ್ ಕಂಪನಿ ಮೂಲಗಳು ಆತಂಕ ವ್ಯಕ್ತಪಡಿಸಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 11 =
Remember me
