ಅಯೋಧ್ಯೆ:ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಧಾರ್ಮಿಕ ವಿಧಿವಿಧಾನಗಳು ಅರಂಭಗೊಂಡಿವೆ. ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಂಭ್ರಮ ಮನೆ ಮಾಡಿದ್ದು, ಹಬ್ಬದ ವಾತಾವರಣ ಮನೆ ಮಾಡಿದೆ.
ಈಗಾಗಲೇ  ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ದೇಶದ 14 ದಂಪತಿ ಯಜಮಾನರಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಕರ್ನಾಟಕ ಮೂಲದ ದಂಪತಿ ಭಾಗಿಯಾಗುತ್ತಿರುವುದು ಭಾಗಿಯಾಗುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.
ಭಾರತದ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ಭಾಗದಿಂದ ಬಂದವರು ಮುಖ್ಯ ಯಜಮಾನರಾಗಿರುತ್ತಾರೆ. 14 ಜೋಡಿಗಳಲ್ಲಿ ಕರ್ನಾಟಕದ ದಂಪತಿಯೂ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದ ಲಿಂಗರಾಜ್ ಬಸವರಾಜ್ ಎನ್ನುವವರು ಪತ್ನಿಯೊಂದಿಗೆ ಈ ಕಾರ್ಯಕ್ರಮದಲ್ಲಿ ಯಜಮಾನರಾಗಿ ಭಾಗಿಯಾಗುತ್ತಿದ್ದಾರೆ ಎಂದು ಆರ್​ಎಸ್​ಎಸ್​  ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ರಾಮಮಲಲ್ಲಾನ ಪ್ರತಿಷ್ಟಾಪನೆಗೆ ದಿನಗಣನೆ; ಶ್ರೀರಾಮನ ಟ್ಯಾಟೂಗೆ ಮುಗಿಬಿದ್ದ ಜನ
ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ಘುಮಂತು ಸಮಾಜ ಟ್ರಸ್ಟ್‌ನಿಂದ ಮಹದೇವ್ ರಾವ್ ಗಾಯಕ್ವಾಡ್, ಲಕ್ನೋದಿಂದ ದಿಲೀಪ್ ವಾಲ್ಮೀಕಿ,  ಡೊಮ್ ರಾಜನ ಕುಟುಂಬದ ಅನಿಲ್ ಚೌಧರಿ, ಕಾಶಿಯ ಕೈಲಾಶ್ ಯಾದವ್ ದಂಪತಿ ಮತ್ತು ರವೀಂದ್ರ ಪ್ರತಾಪ್ ಸಿಂಗ್ ದಂಪತಿ, ಹರಿಯಾಣದ ಅರುಣ್ ಚೌಧರಿ, ಉದಯಪುರದ ರಾಮಚಂದ್ರ ಖರಾಡಿ, ಅಸ್ಸಾಂನ ರಾಮ್ ಕುಯಿ ಜೆಮಿ, ಜೈಪುರದ ಗುರುಚರಣ್ ಸಿಂಗ್ ಗಿಲ್, ಹರ್ದೋಯಿಯಿಂದ ಕೃಷ್ಣ ಮೋಹನ್, ಮುಲ್ತಾನಿಯಿಂದ ರಮೇಶ್ ಜೈನ್, ತಮಿಳುನಾಡಿನಿಂದ ಅಡಲರಸನ್ ಮತ್ತು ಮಹಾರಾಷ್ಟ್ರದಿಂದ ವಿಠ್ಠಲ್ ರಾವ್ ಕಮ್ನ್ಲೆ  ಎನ್ನವ ದಂಪತಿ ಯಜಮಾನರಾಗಲಿದ್ದಾರೆ.
ರ್ನಾಟಕಕ್ಕೂ ಹಾಗೂ ಅಯೋದ್ಯೆಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಬಹುದಾಗಿದೆ. ಮೈಸೂರಿನ ಶಿಲ್ಪಿ ಅರುಣ್​ ಯೋಗಿರಾಜ್​ ಅವರು ಕೆತ್ತಿರುವ ವಿಗ್ರಹ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುತ್ತಿದ್ದು, ಹುಬ್ಬಳ್ಳಿ ಮೂಲದ ಭರತನಾಟ್ಯ ಕಲಾವಿದ ವಿದ್ವಾನ್​ ಸುಜಯ್​ ಶಾನ್​ಭಾಗ್ ಅವರಿಗೆ ಕಾರ್ಯಕ್ರಮ ನಡೆಸಿಕೊಡುವಂತೆ ಆಹ್ವಾನ ನೀಡಲಾಗಿದೆ. ಇದೀಗ ಕರ್ನಾಟಕ ಮೂಲದ ದಂಪತಿ ಯಜಮಾನರಾಗಿ ಭಾಗವಹಿಸುತ್ತಿರುವುದು ರಾಜ್ಯ ಹಾಗೂ ಅಯೋಧ್ಯೆಗೂ ಇರುವ ನಂಟನನ್ಉ ಎತ್ತಿ ತೋರಿಸುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
