ಬೆಂಗಳೂರು:ಗೊತ್ತುಗುರಿ ಇಲ್ಲದೆ ನಡೆಯುತ್ತಿದ್ದ ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ 14 ಕೋಟಿ ರೂ. ವೆಚ್ಚವಾಗಿರುವುದಕ್ಕೆ ಮಾಹಿತಿಯೇ ಇಲ್ಲ. ಇದರಿಂದ ಲೆಕ್ಕ ಪರಿಶೋಧನಾ ಸಮಿತಿ ಕೇಳುತ್ತಿರುವ ಮಾಹಿತಿ ಒದಗಿಸಲು ಪ್ರಾಧಿಕಾರದಲ್ಲಿ ನಿಖರ ದಾಖಲೆಗಳೇ ಲಭ್ಯವಿಲ್ಲದಂತಾಗಿದೆ.
27 ವರ್ಷದಿಂದ ಯಾವುದೇ ಬೈಲಾ ಇಲ್ಲದೆ ಕಾರ್ಯನಿರ್ವಹಿಸಿರುವ ಪ್ರಾಧಿಕಾರ, ಸರ್ಕಾರದಿಂದ ಪಡೆದ ಧನಸಹಾಯವನ್ನು ಯಾವ ಕಾರ್ಯಗಳಿಗೆ ಬಳಕೆ ಮಾಡಿದೆ ಎಂಬ ಬಗ್ಗೆ ದಾಖಲೆಗಳನ್ನೇ ನಿರ್ವಹಿಸಿಲ್ಲ. ಲೆಕ್ಕ ಪರಿಶೋಧನಾ ಸಮಿತಿಯು ಪ್ರಾಧಿಕಾರದ ಲೆಕ್ಕ ಪರಿಶೀಲನೆಗೆ ಮುಂದಾದಾಗ ಈ ವಿಚಾರವಾಗಿ ಕೆಲ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ.
ದಾಖಲೆಯೇ ಇಲ್ಲ: 1993ರಲ್ಲಿ ಸ್ಥಾಪನೆಯಾದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹಿರಿಯ ಸಾಹಿತಿ ಪ್ರೊ. ಎಲ್.ಎಸ್. ಶೇಷಗಿರಿರಾವ್ ಪ್ರಪ್ರಥಮ ಅಧ್ಯಕ್ಷರಾಗಿದ್ದರು.
ಆಗಿನಿಂದ ಇಲ್ಲಿಯವರೆಗೂ ಹಲವಾರು ಅಧ್ಯಕ್ಷರು ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರದಿಂದ ಪ್ರಾಧಿಕಾರಕ್ಕೆ 24 ಕೋಟಿ ರೂ. ಅನುದಾನ ಬಂದಿದೆ. ಅದರೆ ಆ ಹಣವನ್ನು ಪುಸ್ತಕ ಪ್ರಕಟಣೆ, ಟೆಂಡರ್, ಸಿಬ್ಬಂದಿ ವೇತನ ಸೇರಿ ಯಾವ ಯಾವ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ ಎಂಬ ಬಗ್ಗೆ ಕಾಲಕಾಲಕ್ಕೆ ದಾಖಲೆ ನಿರ್ವಹಿಸಿಕೊಂಡು ಬಂದಿಲ್ಲ. ಇದರಿಂದಾಗಿ 14 ಕೋಟಿ ರೂ. ಯಾವ ಕಾರ್ಯಗಳಿಗೆ ಬಳಕೆಯಾಗಿದೆ ಎಂಬುದೇ ತಿಳಿಯುತ್ತಿಲ್ಲ.
ಸಿಬ್ಬಂದಿ ಖಾತೆಯಲ್ಲಿ ಪ್ರಾಧಿಕಾರದ ಹಣ:ಲೆಕ್ಕ ಪರಿಶೋಧನಾ ಸಮಿತಿ ಕೇಳಿದ ಮಾಹಿತಿ ಒದಗಿಸಲು ಪ್ರಾಧಿಕಾರ ಮುಂದಾದಾಗ ಸಿಬ್ಬಂದಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಒಂದಿಬ್ಬರು ಕೆಲಸ ತೊರೆದಿರುವುದೂ ಉಂಟು. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಅನುಮತಿ ಪಡೆದು ದಾಖಲೆಗಳ ಪರಿಶೀಲನೆ ನಡೆಸಿದಾಗ, 2010ರ ನಂತರ ಎಸ್​ಬಿಐನಲ್ಲಿ ನಡೆಸಿರುವ ವಹಿವಾಟಿನ ಬಗ್ಗೆ ಮಾತ್ರ ಮಾಹಿತಿ ಇದೆ. ಉಳಿದಂತೆ 1993-2010ರವರೆಗೆ ಹಣಕಾಸು ವಹಿವಾಟಿನ ಮಾಹಿತಿಯೇ ಇಲ್ಲ. ಕೆಲ ಸಮಯ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್​ನಲ್ಲಿ ಹಣಕಾಸು ವಹಿವಾಟು ನಡೆಸಲಾಗಿದೆ. ಆದರೆ ಅದು ಯಾವುದಕ್ಕೆ ಎಂಬ ಮಾಹಿತಿ ಇಲ್ಲ. ಈ ನಡುವೆ ಸಿಬ್ಬಂದಿಯೊಬ್ಬರ ವೈಯಕ್ತಿಕ ಖಾತೆಯಲ್ಲಿ ಪ್ರಾಧಿಕಾರದಿಂದ ಹಣದ ವಹಿವಾಟು ನಡೆದಿರುವುದಕ್ಕೆ ದಾಖಲೆ ದೊರೆತಿದೆ. ಆಶ್ಚರ್ಯದ ಸಂಗತಿ ಎಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸಂಬಂಧಿಸಿದ ಹಣವೂ ಅವರ ಖಾತೆಗೆ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಆದರೆ ಆತ ಅನಾರೋಗ್ಯದಿಂದ ಕೆಲ ದಿನಗಳ ಹಿಂದಷ್ಟೇ ಮೃತಪಟ್ಟಿದ್ದಾರೆ. ಹೀಗಾಗಿ ಆ ಹಣ ಹಿಂಪಡೆಯುವುದು ಹೇಗೆ ಎಂಬ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರಾಧಿಕಾರ ಯೋಚಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಪಾರದರ್ಶಕ ಆಡಳಿತ ವ್ಯವಸ್ಥೆಗೆ ನಾಂದಿ
ಪ್ರಾಧಿಕಾರದಲ್ಲಿ ಈವರೆಗೂ ನಡೆದಿರುವ ಖರ್ಚು ವೆಚ್ಚಗಳ ಕುರಿತು ಆಡಿಟ್ ಮಾಡಿಸುವ ವಿಚಾರವಾಗಿ ಪ್ರಾಧಿಕಾರದ ಅಧ್ಯಕ್ಷರ ಗಮನ ಸೆಳೆದ ನೂತನ ಆಡಳಿತಾಧಿಕಾರಿಗಳು ಮಹಾಲೇಖಪಾಲಕರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಪ್ರಾಧಿಕಾರದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆಗೆ ನಾಂದಿ ಹಾಡಿದ್ದಾರೆ. ಅದರಂತೆ, ಪ್ರಾಧಿಕಾರದ ಖರ್ಚು ವೆಚ್ಚ ಕುರತು ಆಡಿಟ್ ನಡೆಸಲು ಲೆಕ್ಕ ಪರಿಶೋಧನಾ ಸಮಿತಿ ಕೆಲ ದಾಖಲೆ ಒದಗಿಸುವಂತೆ ಪ್ರಾಧಿಕಾರಕ್ಕೆ ಕೋರಿದೆ. ಆದರೆ ಪ್ರಾಧಿಕಾರದಲ್ಲಿ ದಾಖಲೆ ಇಲ್ಲದಿರುವ ಕಾರಣ ಒದಗಿಸಲು ಪ್ರಾಧಿಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಪುಸ್ತಕ ಪ್ರಕಟಣೆ ಟೆಂಡರ್​ನಲ್ಲಿ ಆಕ್ರಮ
ನಿಯಮದ ಪ್ರಕಾರ, ಪ್ರಾಧಿಕಾರ ಪುಸ್ತಕಗಳನ್ನು ಪ್ರಕಟಿಸಲು ಪ್ರಕಾಶನಗಳಿಗೆ ಟೆಂಡರ್ ಮೂಲಕವೇ ಅನುಮತಿ ನೀಡಬೇಕು. ಆದರೆ ಬಹಳಷ್ಟು ಟೆಂಡರ್ ಪ್ರಕ್ರಿಯೆ ನಡೆದಿರುವ ಬಗ್ಗೆ ನಿಖರ ಮಾಹಿತಿ ಇಲ್ಲ. ಕೆಲ ಅಧ್ಯಕ್ಷರು ತಮ್ಮ ಅವಧಿಯಲ್ಲಿ ತಮಗೆ ಬೇಕಾದ ಪ್ರಕಾಶಕರಿಗೆ ಪುಸ್ತಕ ಪ್ರಕಟಣೆಗೆ ಅನುಮತಿ ನೀಡಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಯಾವ ಯಾವ ಪ್ರಕಾಶಕರಿಗೆ ಎಷ್ಟೆಷ್ಟು ಮೊತ್ತಕ್ಕೆ ಟೆಂಡರ್ ನೀಡಲಾಗಿದೆ ಎಂಬ ಬಗ್ಗೆಯೂ ನಿಖರ ಮಾಹಿತಿ ಇಲ್ಲ ಎಂದು ಮೂಲಗಳು ತಿಳಿಸಿವೆ.
| ಪಂಕಜ ಕೆ.ಎಂ.
ಮೂಲಕೇಂದ್ರದಲ್ಲೂ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + seventeen =
Remember me
