ಬೆಂಗಳೂರು:ಕರೊನಾ ವೈರಸ್ ನಿಯಂತ್ರಣಕ್ಕಾಗಿ ಮೇ 10 ರಿಂದ ಮೇ 24 ರವೆರೆಗೆ ಕರ್ನಾಟಕವನ್ನು ಸಂಪೂರ್ಣ ಲಾಕ್​ಡೌನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಘೋಷಿಸಿದ್ದಾರೆ.
ಬರುವ ಸೋಮವಾರದಿಂದ 14 ದಿನ ಕರ್ನಾಟಕದಲ್ಲಿ ಸಂಪೂರ್ಣ ಲಾಕ್​ಡೌನ್ ಇರಲಿದೆ. ಅಲ್ಲದೇ ಈ ಬಗ್ಗೆ ಮುಖ್ಯಕಾರ್ಯದರ್ಶಿ ಅವರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
1 ಸೋಮವಾರ ಬೆಳಿಗ್ಗೆ 6 ರಿಂದ ಮೇ 24 ರವರೆಗೆ ಕರ್ನಾಟಕದಾದ್ಯಂತ ಲಾಕ್​ಡೌನ್ ಇರಲಿದೆ2 ಈಗಾಗಲೇ ನಿಗದಿಪಡಿಸಿರುವ ರೈಲು ಹಾಗೂ ವಿಮಾನ ಸೇವೆ ಲಭ್ಯವಿರಲಿದೆ. ಅಗತ್ಯ ದಾಖಲೆಗಳನ್ನು ತೋರಿಸಿ ಪ್ರಯಾಣಿಸಬಹುದು3 ಮೆಟ್ರೋ ರೈಲು ಸೇವೆಗೆ ನಿರ್ಬಂಧ4 ಆಟೋ, ಕ್ಯಾಬ್​ಗೆ ತುರ್ತು ಬಳಕೆಗೆ ಮಾತ್ರ ಅವಕಾಶ5 ಶಾಲೆ, ಕಾಲೇಜು, ತರಬೇತಿ ಶಾಲೆಗಳು ಮುಚ್ಚಿರಲಾಗುತ್ತದೆ. ಆನ್​ಲೈನ್​ ಕ್ಲಾಸ್​ಗೆ ಅವಕಾಶ6 ಹೋಟೆಲ್​, ರೆಸ್ಟೊರಂಟ್​ಗಳು ಬಂದ್ ಇರುತ್ತವೆ. ಆದರೆ ಪಾರ್ಸಲ್​ಗೆ ಅವಕಾಶ ಇರುತ್ತದೆ7 ಮಾಲ್​, ಚಿತ್ರಮಂದಿರಗಳು, ಪಾರ್ಕ್​, ಬಾರ್, ಪಬ್, ಮನರಂಜನಾ ಪಾರ್ಕ್​ಗಳು ಮುಚ್ಚಬೇಕಾಗುತ್ತದೆ.8 ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ9 ಈಗಾಗಲೇ ನಿಗದಿಯಾಗಿರುವ ಮದುವೆಗಳಿಗೆ ಅವಕಾಶ. ಕೇವಲ 50 ಮಂದಿಗೆ ಮಾತ್ರ ಅವಕಾಶ, ಅಂತ್ಯಕ್ರಿಯೆಗೆ 5 ಜನಕ್ಕೆ ಅವಕಾಶ10 ಪೊಲೀಸ್, ಹೋಮ್​ಗಾರ್ಡ್, ಅಗ್ನಿಶಾಮಕ, ಬಂಧಿಖಾನೆ, ಪ್ರಾಕೃತಿಕ ವಿಕೋಪ ದಳ ಸೇರಿದಂತೆ ತುರ್ತು ಸೇವೆಗಳಿಗೆ ಅವಕಾಶ ಹಾಗೂ ವಿದ್ಯುತ್, ನೀರು, ಆರೋಗ್ಯ ಸೇವೆಗಳಿಗೆ ಅವಕಾಶ11 ಗೂಡ್ಸ್​ ವಾಗನಗಳನ್ನು ಬಿಟ್ಟು ಬೇರೆ ವಾಹನಗಳಿಗೆ ಅವಕಾಶ ಇಲ್ಲ. ಜನ ವಾಹನಗಳನ್ನು ತೆಗೆದುಕೊಂಡು ಆಹಾರ ಪಾರ್ಸಲ್ ತರುವ ಹಾಗಿಲ್ಲ. ಹತ್ತಿರದ ಸ್ಥಳಕ್ಕೆ ನಡೆದುಕೊಂಡು ಹೋಗಿ ತರಬೇಕು12 ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಕೆಲಸ ನಿರ್ವಹಿಸುತ್ತವೆ13 ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ಇರುವುದಿಲ್ಲ14 ಇ ಕಾಮರ್ಸ್​ ಮುಖಾಂತರ ಪಾರ್ಸಲ್ ತರುವುದಕ್ಕೆ ಅವಕಾಶ15 ಕೈಗಾರಿಕೆ, ಕಟ್ಟಡ ನಿರ್ಮಾಣ ಚಟುವಟಿಕೆಗೆ ಹೊರಗಿನಿಂದ ಜನ ಕರೆದುಕೊಂಡು ಬರುವ ಹಾಗಿಲ್ಲ, ಅಲ್ಲಿಯೇ ಇರುವ ಸಿಬ್ಬಂದಿಯೊಡನೆ ಕೆಲಸ ಮಾಡಿಸಬೇಕು. ಗಾರ್ಮೆಂಟ್​ ಸೆಕ್ಟರ್​ಗೂ ಇದು ಅನ್ವಯವಾಗುತ್ತದೆ16 ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ17 ಲಸಿಕೆ ಹಾಕಿಸಿಕೊಳ್ಳಲು ತೆರಳುವವರಿಗೆ ಅನುಮತಿ ಇದೆ18 ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸೇವೆ ಇರುವುದಿಲ್ಲ, ಖಾಸಗಿ ಬಸ್​ ಓಡಾಟಕ್ಕೂ ಅವಕಾಶ ಇಲ್ಲ
19 ರಿಯಾಲಿಟಿ ಷೋ ಚಿತ್ರೀಕರಣ ಎರಡು ವಾರ ಬಂದ್ ಆಗಲಿವೆ, ಎರಡು ವಾರ ಚಿತ್ರೀಕರಣಕ್ಕೆ ಅವಕಾಶ ಇಲ್ಲ
ಸೋಮವಾರದಿಂದ 14 ದಿನ ಕರ್ನಾಟಕ ಸಂಪೂರ್ಣ ಲಾಕ್​ಡೌನ್: ಸಿಎಂ ಯಡಿಯೂರಪ್ಪ ಅಧಿಕೃತ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 12 =
Remember me
