ಮಂಗಳೂರು:ದಕ್ಷಿಣ ಕನ್ನಡದ ಕರಾವಳಿಯಲ್ಲಿ ಇಂದು ಎಂಆರ್​ಪಿಎಲ್​ಗೆ ಸೇರಿದ ಟಗ್ ಬೋಟ್ ಅವಘಡ ಪ್ರಕರಣದಲ್ಲಿ ಇದುವರೆಗೆ ಸಿಲುಕಿಕೊಂಡಿದ್ದು ಒಂದು ಬೋಟ್​ ಅಲ್ಲ, ಎರಡು ಎಂಬ ಮಾಹಿತಿ ಹೊರಬಿದ್ದಿದೆ. ಎಂಆರ್​ಪಿಎಲ್​ಗೆ ಸೇರಿದ ಎರಡು ಬೋಟ್​ಗಳು ನಾಪತ್ತೆಯಾಗಿದ್ದು, ಎರಡರಲ್ಲಿ ಒಟ್ಟಿಗೆ 17 ಮಂದಿ ಇದ್ದರು.
ಎರಡು ಟಗ್​ ಬೋಟ್​ಗಳ ಪೈಕಿ ಒಂದರಲ್ಲಿ ಎಂಟು ಹಾಗೂ ಇನ್ನೊಂದರಲ್ಲಿ ಒಂಬತ್ತು ಮಂದಿ ಇದ್ದರು. ಆ ಪೈಕಿ 8 ಮಂದಿ ಇದ್ದ ಟಗ್ ಬೋಟ್​ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಲ್ಲಿದ್ದ ಎಂಟು ಜನರ ಪೈಕಿ ಇಬ್ಬರು ಈಜಿ ದಡ ಸೇರಿದ್ದು, ಒಬ್ಬರ ಶವ ಪತ್ತೆಯಾಗಿದೆ. ಉಳಿದ ಐವರು ಇನ್ನೂ ಪತ್ತೆಯಾಗಿಲ್ಲ.
ಮತ್ತೊಂದೆಡೆ 9 ಮಂದಿ ಇದ್ದ ಟಗ್​ ಬೋಟ್ ಕುರಿತು ಇನ್ನೂ ಸುಳಿವು ಸಿಕ್ಕಿಲ್ಲ. ಈ ಬೋಟ್​ನಲ್ಲಿದ್ದ 9 ಮಂದಿ, ಇನ್ನೊಂದರಲ್ಲಿದ್ದ 8 ಜನರ ಪೈಕಿ ನಾಪತ್ತೆ ಆಗಿರುವ ಐವರು ಸೇರಿ ಒಟ್ಟು 14 ಮಂದಿ ಇನ್ನೂ ಪತ್ತೆಯಾಗಿಲ್ಲ. ನಾಪತ್ತೆ ಆಗಿರುವವರಿಗಾಗಿ ಕೋಸ್ಟಲ್ ಗಾರ್ಡ್​ ಸಿಬ್ಬಂದಿ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಚಂಡಮಾರುತಕ್ಕೆ ಬೋಟ್​ ಸಿಲುಕಿ 8 ಮಂದಿ ನಾಪತ್ತೆ; ಒಬ್ಬರ ಶವ ಕಾಪು ಬಳಿ ಪತ್ತೆ

ಚಂಡಮಾರುತ ಇಫೆಕ್ಟ್​, ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್​: ನಾಳೆಯೂ ಕರಾವಳಿಯಲ್ಲಿ ಭಾರಿ ಮಳೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 4 =
Remember me
