ಬಾಗಲಕೋಟೆ:ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಕುಳಗೇರಿ ಚೆಕ್‌ಪೋಸ್ಟ್​ 1 ಮತ್ತು 2ರಲ್ಲಿ ಪ್ರತ್ಯೇಕ 9 ಪ್ರಕರಣದಡಿ ದಾಖಲೆ ಇಲ್ಲದ ಒಟ್ಟು 15.61 ಲಕ್ಷ ರೂ.ಗಳ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಬಿಎಂಡಬ್ಲ್ಯು ಜಂಟಿ ಉದ್ಯಮ: ಟಾಟಾ ಟೆಕ್ನಾಲಜೀಸ್​ ಷೇರು ಬೆಲೆ ಏರಿಕೆ ಏಕೆ?
ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಚೆಕ್‌ಪೋಸ್ಟ 1ರಲ್ಲಿ ಮಂಗಳವಾರ ಬೆಳಗಿನ ಜಾವ ಕೆರೂರ ಸಂತೆಗೆ ಆಗಮಿಸುತ್ತಿರುವ ಗೂಡ್ಸ್ ವಾಹನ, ತುಮಕೂರು ಜಿಲ್ಲೆ ತಾವರೆಕೆರೆ, ಗದಗ ಹಾಗೂ ಆಲೂರ ಎಸ್.ಕೆ ಕಡೆಯಿಂದ ಆಗಮಿಸುತ್ತಿರುವ ವಿವಿಧ ವಾಹನಗಳನ್ನು ಐ.ವಿ.ಬಸರಿಕಟ್ಟಿ ನೇತೃತ್ವದ ಸ್ಟಾಯಟಿಕ್ ಸರ್ವೇಲೆನ್ಸ್ ತಂಡ ತಪಾಸಣೆ ಕೈಗೊಂಡಾಗ ಪ್ರತ್ಯೇಕ 4 ಪ್ರಕರಣಗಳಲ್ಲಿ ಒಟ್ಟು 3.27 ಲಕ್ಷ ರೂ.ಗಳ ದಾಖಲೆ ಇಲ್ಲದ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನು ಕುಳಗೇರಿ ಕ್ರಾಸ್ ಚೆಕ್‌ಪೋಸ್ಟ್​ 2ರಲ್ಲಿ ಬೆಳಗಿನ ಜಾವ ವಿವಿಧ ವಾಹನಗಳ ತಪಾಸಣೆ ವೇಳೆಯಲ್ಲಿ ಪ್ರತ್ಯೇಕ 5 ಪ್ರಕರಣಗಳಡಿ ಒಟ್ಟು 7.28 ಲಕ್ಷ ರೂ.ಗಳನ್ನು ಎ.ಕೆ. ಉಗಲವಾಡ ನೇತೃತ್ವದ ಸ್ಟಾಯಟಿಕ್ ಸರ್ವೇಲೆನ್ಸ್ ತಂಡ ವಶಕ್ಕೆ ಪಡೆದುಕೊಂಡಿದೆ. ಅಲ್ಲದೇ ಬೆಳಗ್ಗೆ 10 ಗಂಟೆ ನಂತರದಲ್ಲಿ ಕೆರೂರಿಗೆ ಹೊರಟ ಟಾಟಾ 107 ವಾಹನದಲ್ಲಿ 1.56 ಲಕ್ಷ ರೂ, ಗೂಡ್ಸ್ ವಾಹನದಲ್ಲಿ 60 ಸಾವಿರ ರೂ. ಹಾಗೂ ಬುಲೇರೋ ವಾಹನ ತಪಾಸಣೆ ವೇಳೆ 2.20 ಲಕ್ಷ ರೂ. ದೊರೆತಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾಹಿತಿ ನೀಡಿದ್ದಾರೆ.
ಏಪ್ರಿಲ್ 2-6ರವರೆಗೆ ಈ ರಾಜ್ಯದಲ್ಲಿ ಸುರಿಯಲಿದೆ ಭಾರೀ ಮಳೆ! ಬಿಸಿಲ ಬೇಗೆಯ ಮಧ್ಯೆ ಐಎಂಡಿ ಮುನ್ಸೂಚನೆ

2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + thirteen =
Remember me
