ಬೆಂಗಳೂರು:ರಾಜ್ಯದಲ್ಲಿನ ಸುಮಾರು 15 ಲಕ್ಷ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಮಾಹಿತಿ ಹೊಂದಾಣಿಕೆ ಆಗದಿರುವ ವಿಷಯ ಬೆಳಕಿಗೆ ಬಂದಿದೆ. ಮಕ್ಕಳನ್ನು ಶಾಲೆಗೆ ಸೇರಿಸುವ ವೇಳೆ ನೀಡಲಾದ ಹೆಸರಿನ ಜತೆ ಆಧಾರ್ ಕಾರ್ಡ್​ನಲ್ಲಿ ನಮೂದಿಸಲಾಗಿರುವ ಹೆಸರು ತಾಳೆ ಆಗದಿರುವ ಸಂಗತಿ ಬಹಿರಂಗಗೊಂಡಿದೆ.
ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಮೇರೆಗೆ ರಾಜ್ಯ ಶಿಕ್ಷಣ ಇಲಾಖೆಯಿಂದ ನಡೆದ ದಾಖಲೆ ಪರಿಶೀಲನೆ ವೇಳೆ ಈ ವ್ಯತ್ಯಾಸ ಕಂಡುಬಂದಿದೆ. ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಕಾರ್ಮಿಕ ಕಲ್ಯಾಣ ಇಲಾಖೆಗಳ ವ್ಯಾಪ್ತಿಯ ವಿವಿಧ ವಿದ್ಯಾರ್ಥಿ ವೇತನ ಮತ್ತು ಪ್ರವೇಶ ಪರೀಕ್ಷೆ ಸಲುವಾಗಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ನೀಡಬೇಕಾಗಿದ್ದು, ಅವುಗಳ ಪರಿಶೀಲನೆ ವೇಳೆ ಹೆಸರು ಹೊಂದಾಣಿಕೆ ಆಗದಿರುವುದು ತಿಳಿದು ಬಂದಿದೆ.
ಇದನ್ನೂ ಓದಿ:ಕಾಡಲ್ಲಿ ಯುವತಿಯ ಶವ ಪತ್ತೆ; ಆಕೆಯ ಮೂವರು ಚಿಕ್ಕಮ್ಮಂದಿರ ಬಂಧನ: ಆಗಿದ್ದೇನು?
ಸುಮಾರು 1 ಕೋಟಿ ವಿದ್ಯಾರ್ಥಿಗಳ ಪೈಕಿ 78 ಲಕ್ಷ ವಿದ್ಯಾರ್ಥಿಗಳ ಆಧಾರ್ ಮಾಹಿತಿ ಪರಿಶೀಲನೆ ನಡೆಸಲಾಗಿದ್ದು, ಆ ಪೈಕಿ ಸುಮಾರು 15 ಲಕ್ಷ ವಿದ್ಯಾರ್ಥಿಗಳ ಹೆಸರು ಹೊಂದಾಣಿಕೆ ಆಗದಿರುವುದು ಗಮನಕ್ಕೆ ಬಂದಿದೆ. ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ.
ಇದನ್ನೂ ಓದಿ:ಪತ್ನಿಗೆ ಇರಿದು ಪರಾರಿಯಾಗಿದ್ದ ಪತಿಯ ಬಂಧನ; ಗಾಯಗೊಂಡಾಕೆಗೆ ಪೊಲೀಸರಿಂದ ರಕ್ತದಾನ
ಬಹಳಷ್ಟು ವಿದ್ಯಾರ್ಥಿಗಳ ಹೆಸರು ಮೂರು ಪದಗಳನ್ನು ಒಳಗೊಂಡಿದೆ. ನಾವು ಶಾಲಾ ದಾಖಲಾತಿಯಲ್ಲಿನ ಹೆಸರನ್ನು ಬದಲಿಸಲು ಸಾಧ್ಯವಿಲ್ಲ. ಹೀಗಾಗಿ ಆಧಾರ್​ ಕಾರ್ಡ್​ನಲ್ಲಿ ಹೆಸರು ತಿದ್ದುಪಡಿ ಮಾಡಿಸಿಕೊಂಡು ಹೊಸ ಕಾರ್ಡ್​ನ ಪ್ರತಿ ಶಾಲೆಗೆ ಸಲ್ಲಿಸುವಂತೆ ಸಂಬಂಧಿತ ಪಾಲಕರಿಗೆ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸುಮಾರು 14 ಲಕ್ಷ ಮಕ್ಕಳ ಆಧಾರ್ ಮಾಹಿತಿ ಪಾಲಕರು ಇನ್ನೂ ಸಲ್ಲಿಕೆ ಮಾಡಿಲ್ಲ ಎಂಬುದು ಕೂಡ ಗಮನಕ್ಕೆ ಬಂದಿದೆ.
ವಾಸ್ತು ಸರಿ ಇಲ್ಲವೆಂದು ಮುಚ್ಚಿದ್ದ ದ್ವಾರವನ್ನು ತೆರೆಸಿ ಸಿಎಂ ಕಚೇರಿಗೆ ಪ್ರವೇಶಿಸಿದ ಸಿದ್ದರಾಮಯ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
