ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಬಹುದಿನದ ಕೋರಿಕೆ ಕೊನೆಗೂ ಈಡೇರಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 100 ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ 150 ಹೊಸ ವಿದ್ಯಾರ್ಥಿ ನಿಲಯ ಮಂಜೂರು ಮಾಡಿದೆ. ಇದರೊಂದಿಗೆ ಹಾಸ್ಟೆಲ್ ಸಮಸ್ಯೆ ಎದುರಿಸುತ್ತಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಹೊಸ ವಿದ್ಯಾರ್ಥಿ ನಿಲಯಗಳಲ್ಲಿ ಧಾರ ವಾಡ, ಬೆಂಗಳೂರು ನಗರ ಮತ್ತು ಮೈಸೂರಿಗೆ ಸಿಂಹಪಾಲು ಸಿಕ್ಕಿದೆ. ಈ ನಗರಗಳಲ್ಲಿ ಹಾಸ್ಟೆಲ್ ಬೇಡಿಕೆ ಹೆಚ್ಚಿತ್ತು. ಇದೀಗ ಬೇಡಿಕೆಗೆ ಅನುಗುಣವಾಗಿ ಆದ್ಯತೆ ನೀಡಲಾಗಿದೆ. ಕಳೆದ ಬಜೆಟ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ವಿದ್ಯಾರ್ಥಿ ನಿಲಯ ಆರಂಭಿಸುವುದಾಗಿ ಘೋಷಿಸಿದ್ದರು. ಇದೀಗ ಪ್ರಕ್ರಿಯೆ ಆರಂಭವಾಗಿದ್ದು, 45 ಕೋಟಿ ರೂ.ಗಳನ್ನು 150 ಹಾಸ್ಟೆಲ್ ಪ್ರಾರಂಭ ಹಾಗೂ ನಿರ್ವಹಣೆಗಾಗಿ ಒದಗಿಸಲಾಗುತ್ತಿದೆ.
ಪ್ರಸ್ತಾವನೆ ಏನಿತ್ತು?: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರಸ್ತುತ 1277 ಮೆಟ್ರಿಕ್- ಪೂರ್ವ ಮತ್ತು 1169 ಮೆಟ್ರಿಕ್ ನಂತರದ ಹಾಸ್ಟೆಲ್ ಇದೆ. ಒಟ್ಟಾರೆ 2446 ವಿದ್ಯಾರ್ಥಿ ನಿಲಯದಲ್ಲಿ 2,28,736 ಮಕ್ಕಳಿಗೆ ಅವಕಾಶ ಕಲ್ಪಿಸುವ ಅವಕಾಶವಿದೆ. ರಾಜ್ಯದಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚು ಬೇಡಿಕೆ ಇರುವ ಜಿಲ್ಲೆಗಳಲ್ಲಿ ತಲಾ 100 ಸಂಖ್ಯಾಬಲದ 75 ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ
ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡುವ ಅವಶ್ಯಕತೆ ಇದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಜತೆಗೆ ವಿದ್ಯಾರ್ಥಿ ನಿಲಯದ ನಿರ್ವಹಣೆಗೆ ವಾರ್ಷಿಕವಾಗಿ 55.90 ಲಕ್ಷ ಅಗತ್ಯವೆಂದು ಬೇಡಿಕೆ ಮುಂದಿಡಲಾಗಿತ್ತು. ಹಾಗೆಯೇ ಈ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಇರುವ 975 ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಲಾಗಿತ್ತು. ಇದೀಗ ಹಣಕಾಸು ಇಲಾಖೆಯು 100 ಸಂಖ್ಯಾ ಬಲದ 75 ಮೆಟ್ರಿಕ್ ನಂತರದ ಬಾಲಕಿಯರ ಹಾಗೂ 75 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಇರುವ 825 ಹುದ್ದೆ ಸೃಜಿಸಲು ಒಪ್ಪಿಗೆ ನೀಡಿದೆ.
ನಿಲಯ ಪಾಲಕರನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ನೇಮಿಸಲಾಗುತ್ತದೆ. ಅಡುಗೆ ಸಿಬ್ಬಂದಿ, ಕಾವಲುಗಾರರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.
ಯಾವ ಜಿಲ್ಲೆ ಎಷ್ಟು ಹಾಸ್ಟೆಲ್: ಬಾಗಲಕೋಟೆ, ದಾವಣಗೆರೆ, ಬೆಳಗಾವಿ, ಕಲಬುರಗಿ- 8, ಬೆಂಗಳೂರು ಗ್ರಾ. ಉಡುಪಿ, ಉತ್ತರಕನ್ನಡ, ವಿಜಯಪುರ, ಯಾದಗಿರಿ, ವಿಜಯನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಬೀದರ್, ಗದಗ, ಕೊಡಗು, ಕೋಲಾರ- 2, ಬೆಂಗಳೂರು ನಗರ, ಮೈಸೂರು- 14, , ಬಳ್ಳಾರಿ- 3, ಚಾಮರಾಜನಗರ-1, ಹಾಸನ, ಹಾವೇರಿ, ದಕ್ಷಿಣ ಕನ್ನಡ, ಮಂಡ್ಯ, ರಾಯಚೂರು, ರಾಮನಗರ, -4, ಧಾರವಾಡ-15, ಕೊಪ್ಪಳ-10, ಶಿವಮೊಗ್ಗ-5, ತುಮಕೂರು-6
. ನಿಲಯ ಪಾಲಕರು- 150
. ಅಡುಗೆಯವರು- 300
. ಅಡುಗೆ ಸಹಾಯಕರು- 300
. ರಾತ್ರಿ ಕಾವಲುಗಾರರು- 75
ಕಾಂಗ್ರೆಸ್ ಕಚೇರಿಯಲ್ಲಿ 54ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ರಾಹುಲ್‌ ಗಾಂಧಿ

ಕೆಎಸ್ಆರ್​ಟಿಸಿ ಬಸ್​ನಲ್ಲಿ ಮರೆತು ಹೋಗಿದ್ದ 2.5 ಲಕ್ಷ ರೂ. ವಾಪಸ್ ಕೊಟ್ಟ ಸಿಬ್ಬಂದಿ, ಕಾರ್ಯವೈಖರಿಗೆ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
