| ಮಂಜುನಾಥ ಕೆ. ಬೆಂಗಳೂರುಸೈಬರ್ ಖದೀಮರು 2023ರ ಮೊದಲ ಆರು ತಿಂಗಳ ಅವಧಿಯಲ್ಲಿ ಸುಮಾರು 65 ಕೋಟಿ ರೂ. ಎಗರಿಸಿದ್ದಾರೆ. ಆದರೆ ವಂಚನೆಗೊಳಗಾದವರು ಮತ್ತು ಪೊಲೀಸರ ಸಮಯೋಚಿತ ಕ್ರಮದಿಂದಾಗಿ ಸುಮಾರು 17 ಕೋಟಿ ರೂ. (ಶೇ.26) ಸೈಬರ್ ಕಳ್ಳರ ಪಾಲಾಗದಂತೆ ತಡೆಯಲಾಗಿದೆ.
ಕಳೆದ ವರ್ಷ ಸೈಬರ್ ಕಳ್ಳರು ವಂಚಿಸಿದ 76.9 ಕೋಟಿ ರೂ.ಗಳಲ್ಲಿ 14.7 ಕೋಟಿ ರೂ.ಗಳನ್ನು ಪೊಲೀಸರು ಸೈಬರ್ ವಂಚಕರಿಗೆ ತಲುಪದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಇತ್ತೀಚೆಗೆ ವಿಧಾನಸಭೆಯಲ್ಲಿ ಶಾಸಕ ಸುರೇಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸುವಾಗ ಈ ಅಂಕಿಅಂಶಗಳನ್ನು ಗೃಹ ಸಚಿವ ಜಿ.ಪರಮೇಶ್ವರ ಅವರು ಬಹಿರಂಗಪಡಿಸಿದ್ದಾರೆ. ಪೊಲೀಸ್ ನಿಯಂತ್ರಣ (112) ಅಥವಾ ರಾಷ್ಟ್ರೀಯ ಸಹಾಯವಾಣಿಗೆ (1930) ಕರೆ ಮಾಡುವ ಮೂಲಕ ಸಂತ್ರಸ್ತರು ದೂರುಗಳನ್ನು ನೋಂದಾಯಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು. ಸಂತ್ರಸ್ತರು 112 ಅಥವಾ 1930 ಗೆ ಕರೆ ಮಾಡಿದ ತಕ್ಷಣ ಸಿಐಆರ್​ಗಳನ್ನು ನೋಂದಾಯಿಸಲಾಗುತ್ತದೆ. ಜತೆಗೆ ಫೋನ್​ನಲ್ಲಿಯೇ ದೂರುಗಳನ್ನು ಸಲ್ಲಿಸಬಹುದಾಗಿದೆ. ಸಿಐಆರ್​ಗಳನ್ನು ನೋಂದಾಯಿಸಿದ ನಂತರ, ಪೊಲೀಸರು ಸಂಬಂಧಪಟ್ಟ ಬ್ಯಾಂಕ್​ಗಳನ್ನು ಸಂರ್ಪಸುತ್ತಾರೆ ಮತ್ತು ಆರೋಪಿಯ ಖಾತೆಗಳಿಗೆ ಹೋಗಿರುವ ಹಣವನ್ನು ಜಪ್ತಿ (ಫ್ರೀಜ್) ಮಾಡಲು ಕ್ರಮಗಳನ್ನು ಪ್ರಾರಂಭಿಸುತ್ತಾರೆ.
ಸೈಬರ್ ವಂಚನೆಯ ಪ್ರಕರಣ ನಡೆದ ಎರಡು ಗಂಟೆಯೊಳಗೆ ಸಿಐಆರ್​ಎಸ್ ಮೂಲಕ ದೂರು ದಾಖಲಿಸುವುದು ಮುಖ್ಯವಾಗಿದೆ. ಸೈಬರ್ ವಂಚನೆಗೆ ಒಳಗಾದವರು ಆದಷ್ಟು ಬೇಗ 112 ಅಥವಾ 1930 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬೇಕಾಗುತ್ತದೆ. ಇದನ್ನು ‘ಗೋಲ್ಡನ್ ಅವರ್’ ಎನ್ನುತ್ತಾರೆ. ಈ ಗೋಲ್ಡನ್ ಅವರ್ ನಂತರ, ಬ್ಯಾಂಕ್ ಖಾತೆಯನ್ನು ಪತ್ತೆ ಹಚ್ಚುವುದು ಮತ್ತು ಆ ಬ್ಯಾಂಕ್ ಖಾತೆಗಳಿಂದ ಹಣವನ್ನು ಫ್ರೀಜ್ ಮಾಡುವುದು ಕಷ್ಟಕರವಾಗಿರುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
12,850 ದೂರು ದಾಖಲು:ಅಂಕಿ-ಅಂಶಗಳ ಪ್ರಕಾರ, ಸಿಐಆರ್​ಗಳು ಪ್ರಾರಂಭವಾದಾಗಿನಿಂದ ಸೈಬರ್ ಅಪರಾಧದ ಕುರಿತು 12,850 ದೂರುಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 11,719 ಅನ್ನು ವಿಲೇವಾರಿ ಮಾಡಲಾಗಿದೆ. ವಿಲೇವಾರಿ ಎಂದರೆ ಹಣವನ್ನು ಆರೋಪಿಯ ಖಾತೆಗಳಿಂದ ವಶಪಡಿಸಿಕೊಳ್ಳುವುದು ಅಥವಾ ಸಂತ್ರಸ್ತರಿಗೆ ಹಿಂತಿರುಗಿಸುವುದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೈಬರ್ ವಂಚಕರನ್ನು ಬೆನ್ನಟ್ಟುವುದಕ್ಕಿಂತ ಹೆಚ್ಚಾಗಿ ಹಣವನ್ನು ಮರಳಿ ಪಡೆಯುವಲ್ಲಿ ಹೆಚ್ಚು ಗಮನ ಹರಿಸಲಾಗುತ್ತದೆ. ಈ ವರ್ಷದ ಜನವರಿ 1 ರಿಂದ ಜೂ. 30 ರವರೆಗೆ ಸಂತ್ರಸ್ತರಿಗೆ ಸುಮಾರು 65 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿದ್ದೇವೆ. ಈ ಹೆಚ್ಚಿನ ಪ್ರಕರಣಗಳಲ್ಲಿ ಸಂತ್ರಸ್ತರು ಸಮಯವನ್ನು ವ್ಯರ್ಥ ಮಾಡದೆ ಘಟನೆಯ ನಂತರ ತಕ್ಷಣವೇ ಸಿಐಆರ್​ಗಳನ್ನು ದಾಖಲಿಸಿದ್ದಾರೆ. ಒಮ್ಮೆ ಪೊಲೀಸರು ಸೈಬರ್ ವಂಚಕರ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ವಶಪಡಿಸಿಕೊಂಡ ನಂತರ, ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣವನ್ನು ಸಲ್ಲಿಸಲಾಗುತ್ತದೆ ಮತ್ತು ನ್ಯಾಯಾಲಯದ ಅನುಮತಿಯೊಂದಿಗೆ, ಸರಿಯಾದ ಕಾರ್ಯವಿಧಾನದ ನಂತರ ಹಣವನ್ನು ಸಂತ್ರಸ್ತರಿಗೆ ಹಿಂತಿರುಗಿಸಲಾಗುತ್ತದೆ ಎಂದು ಸೈಬರ್ ಕ್ರೖೆಂ ಸೆಲ್​ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5 ವರ್ಷದಲ್ಲಿ ಕೇವಲ 25 ಮಂದಿಗೆ ಶಿಕ್ಷೆ:2017ರಲ್ಲಿ 2, 2018ರಲ್ಲಿ 7, 2019ರಲ್ಲಿ 7, 2020ರಲ್ಲಿ 2, 2021ರಲ್ಲಿ 3, 2022ರಲ್ಲಿ 5 ಸೈಬರ್ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸ ಲಾಗಿದೆ. ಕಳೆದ 5 ವರ್ಷದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಕೇವಲ 25 ಮಂದಿಯನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗಿದೆ.
ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
