ಬೆಂಗಳೂರು:ಇತ್ತೀಚೆಗಷ್ಟೇ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದಾದ ಬೆನ್ನಲ್ಲೇ ಎಸಿಬಿಗೆ ಮಂಜೂರಾಗಿದ್ದ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಬಳಸಿಕೊಂಡು ಹೊಸದಾಗಿ 9 ಉಪ ವಿಭಾಗ ಮತ್ತು 4 ಸಂಚಾರ ಠಾಣೆಗಳನ್ನು ಸೃಜಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಆ ಪೈಕಿ ಎಸಿಬಿ ಮಂಜೂರಾಗಿದ್ದ 10 ಎಸ್‌ಪಿ, 35 ಡಿವೈಎಸ್​ಪಿ, 76 ಇನ್‌ಸ್ಪೆಕ್ಟರ್ ಸೇರಿದಂತೆ 445 ಹುದ್ದೆಗಳ ಪೈಕಿ ಲೋಕಾಯುಕ್ತ ಸಂಸ್ಥೆಗೆ 224 ಹುದ್ದೆಗಳನ್ನು ವರ್ಗಾಯಿಸಿ, ಉಳಿದ 221 ಹುದ್ದೆಗಳನ್ನು ಪೊಲೀಸ್ ಇಲಾಖೆ ತನ್ನ ವಶದಲ್ಲಿ ಇರಿಸಿಕೊಂಡಿತ್ತು.
ಇದೀಗ ಅದರ ಮುಂದುವರಿದ ಭಾಗ ಎಂಬಂತೆ ಲೋಕಾಯುಕ್ತಕ್ಕೆ ಒಂದೇ ದಿನದಲ್ಲಿ 15 ಡಿವೈಎಸ್​ಪಿಗಳನ್ನು ನೇಮಕ ಮಾಡಲಾಗಿದೆ. ಅರ್ಥಾತ್, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಹಂತದ ವರ್ಗಾವಣೆ ನಡೆದಿದ್ದು, ಎಸಿಬಿಯಲ್ಲಿದ್ದ ಬಹಳಷ್ಟು ಡಿವೈಎಸ್​ಪಿಗಳು ಸೇರಿದಂತೆ ಒಟ್ಟು 17 ಡಿವೈಎಸ್​ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಆ ಪೈಕಿ 15 ಡಿವೈಎಸ್​ಪಿಗಳನ್ನು ಲೋಕಾಯಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಲೋಕಾಯುಕ್ತಕ್ಕೆ ಹೊಸದಾಗಿ 15 ಡಿವೈಎಸ್​ಪಿಗಳು ಸಿಕ್ಕಂತಾಗಿದ್ದು, ಅದನ್ನು ಮತ್ತಷ್ಟು ಬಲಗೊಳಿಸಿದಂತಾಗಿದೆ.

ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

ಹಳೇ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ; ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್​​ ಭರವಸೆಗೆ ಒತ್ತಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 2 =
Remember me
