ಬೆಂಗಳೂರು:ಲಾಕ್​ಡೌನ್ ಸಡಿಲಿಕೆ ನಂತರ ರಾಜ್ಯದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಅದರ ಜೊತೆ ಜೊತೆಗೆ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ 17 ಅಂಶಗಳ ಮಾರ್ಗಸೂಚಿ ಪ್ರಕಟಿಸಿದೆ. ಕರೊನಾ ನಿಯಂತ್ರಣಕ್ಕೆ ಬರುವವರೆಗೂ ಮದುವೆ, ಸಭೆ, ಸಮಾರಂಭಗಳು ಸೇರಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವವರು ಈ ಮಾರ್ಗಸೂಚಿಯಲ್ಲಿನ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಇಲಾಖೆ ಆಯುಕ್ತರು ಅದೇಶ ಹೊರಡಿಸಿದ್ದಾರೆ.
ನಿಯಮಗಳು ಇಂತಿವೆ. * ಅಗತ್ಯ ಸಭೆ, ಸಮಾರಂಭಗಳ ಆಯೋಜನೆಗೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ. *ಮದುವೆ ಸಮಾರಂಭದಲ್ಲಿ ಕೇವಲ 50 ಜನರಿಗೆ ಮಾತ್ರವೇ ಅವಕಾಶ. *ಕಾರ್ಯಕ್ರಮಗಳು ನಡೆಯುವ ಸ್ಥಳದಲ್ಲಿ ಎಸಿ ಬಳಕೆ ಮಾಡದೆ, ಪ್ರಕೃತಿದತ್ತವಾದ ಗಾಳಿ ಬೆಳಕು ಇರುವಂತೆ ಗಮನ. *ಕಂಟೈನ್ಮೆಂಟ್ ವಲಯಗಳಲ್ಲಿ ವಾಸಿಸುವವರು ಕಾರ್ಯಕ್ರಮದಲ್ಲಿ ಭಾಗಿ ಆಗುವಂತಿಲ್ಲ. *ಗರ್ಭಿಣಿ, 65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಿಲ್ಲ ಅವಕಾಶ. *ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿನ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯ. *ಪ್ರವೇಶ ದ್ವಾರಗಳಲ್ಲಿ ಆಗಮಿಸುವ ಎಲ್ಲರಿಗೂ ಥರ್ಮಲ್ ಸ್ಕಾ್ಯನಿಂಗ್. *37.5 ಸೆಲಿಯ್್ಸಂತ ಕಡಿಮೆ ಹಾಗೂ 99.5 ಫ್ಯಾರನ್ ಹೀಟ್ ತಾಪಮಾನ ಹೊಂದಿರುವವರ ವೈದ್ಯಕೀಯ ಪರೀಕ್ಷೆ ಸೂಚನೆ. *ಎಲ್ಲರಿಗೂ ಮಾಸ್ಕ್ ಕಡ್ಡಾಯ. *ಸಾಮಾಜಿಕ ಅಂತರ ಇರಲಿ. *ಕೈಗಳನ್ನು ಸ್ವಚ್ಛಗೊಳಿಸಲು ಸೋಪು ಹಾಗೂ ಹ್ಯಾಂಡ್​ವಾಷ್ ನೀಡಿಕೆ. *ಗುಟ್ಖಾ, ಪಾನ್ ಮಸಾಲ, ಮದ್ಯ, ತಂಬಾಕು ಬಳಕೆ ನಿಷೇಧ. *ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ. *ಸಾರ್ವಜನಿಕ ಸ್ಥಳಗಳು ಸೇರಿ ಎಲ್ಲಂದರಲ್ಲಿ ಉಗುಳುವುದಕ್ಕೆ ನಿಷೇಧ. *ಕಾರ್ಯಕ್ರಮಕ್ಕೆ ನೋಡಲ್ ವ್ಯಕ್ತಿ ನೇಮಕ. *ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ಪಡೆಯುವಿಕೆ ಕಡ್ಡಾಯ. *ಆರೋಗ್ಯ ಸೇತು ಆಪ್ ಡೌನ್​ಲೋಡ್.
ಹೆಚ್ಚಿನ ಮಾಹಿತಿ ಸಂಪರ್ಕಕ್ಕೆ ಇಲಾಖೆ ವೆಬ್​ಸೈಟ್ https://covid19.karnataka.gov.in ಅಥವಾ ದೂ. 080-46848600.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eight =
Remember me
