ದಾವಣಗೆರೆ:ಬೆಳ್ಳಂಬೆಳಗ್ಗೆ ಆನೆ ದಾಳಿಗೆ ಹುಡುಗಿಯೊಬ್ಬಳು ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯ ಸೋಮಳಾಪುರ ಗ್ರಾಮದಲ್ಲಿ ನಡೆದಿದೆ.
ಕವನ (17) ಮೃತಪಟ್ಟ ದುರ್ದೈವಿ. ಸ್ವಂತ ಜಮೀನಿಗೆ ಅವರೆ ಕಾಯಿ ಬಿಡಿಸಲು ಹೋದಾಗ ಆನೆ ದಾಳಿ ಮಾಡಿದೆ. ತಾಯಿ ಮಂಜುಳಾ ಜೊತೆ ಕವನ ಜಮೀನಿಗೆ ಬಂದಿದ್ದಳು. ಅವರೆಕಾಯಿ ಬಿಡಿಸುವ ವೇಳೆ ಹಿಂದಿನಿಂದ ಆನೆ ಏಕಾಏಕಿ ದಾಳಿ ಮಾಡಿದೆ. ಸೊಂಡಿಲಿನಿಂದ ಇಬ್ಬರನ್ನೂ ಎತ್ತಿ ಬಿಸಾಡಿದೆ.
ಇದನ್ನೂ ಓದಿ:ಪತ್ನಿ, ಪುತ್ರನ ಜತೆ ವಿನೋದ್​ ರಾಜ್​!? ಚಂದನವನದಲ್ಲಿ ಸಂಚಲನ ಮೂಡಿಸಿದೆ ಈ ನಿರ್ದೇಶಕನ ಮಾತು

ಘಟನೆಯಲ್ಲಿ ಕವನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿ ಮಂಜುಳಾಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಾಮುತ್ತ ಆನೆ ಸುತ್ತಾಡುತ್ತಿದೆ. ಬೆಳಗಿನ ಜಾವ 6 ಗಂಟೆ ಸುಮಾರಿಗೆ ಆನೆ ಕಾಣಿಸಿಕೊಂಡಿದೆ. ಆನೆ ದಾಳಿಯಿಂದ ಓರ್ವ ಮಹಿಳೆ ಹಾಗೂ ದಾವುಜ್ ನಾಯ್ಕ್ ಎನ್ನುವರಿಗೆ ಸಣ್ಣಪುಟ್ಟ ಗಾಯಗಾಳಗಿವೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ರಾಜಕೀಯದಲ್ಲಿ ಸಿನಿ ಗುಂಗು: ಪಕ್ಷದ ವರ್ಚಸ್ಸು ವೃದ್ಧಿ ಆಗಲಿಲ್ಲ, ವೈಯಕ್ತಿಕ ಛಾಪೂ ಮೂಡಿಸದ ತಾರೆಯರು

ಅನೆ ಕಾಣಿಸಿಕೊಂಡ ಹಿ‌ನ್ನಲೆ ಜನರು ಭಯಭೀತರಾಗಿದ್ದಾರೆ. ಯಾರು ಕೂಡ ಒಂಟಿಯಾಗಿ ಓಡಾಡಬಾರದು ಎಂದು ಅರಣ್ಯ ಇಲಾಖೆಯಿಂದ‌ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಆನೆಯನ್ನು ಕಾಡಿಗಟ್ಟುವ ಕೆಲಸದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
2 ಸಂಚು ವಿಫಲ, ಕನ್ನಡಿಗರ ಜೀವನಾಡಿ ನಂದಿನಿ ಮುಗಿಸಲು 3ನೇ ಸಂಚು ನಡೆದಿದೆ: ಎಚ್​ಡಿಕೆ ಆಕ್ರೋಶ

ಸುದೀಪ್​ ಹೇಳಿಕೆಯಿಂದ ಆಘಾತ ಹಾಗೂ ನೋವಾಗಿದೆ: ನಟ ಪ್ರಕಾಶ್​ ರಾಜ್​

ಮೋದಿ ಜತೆಗೆ ಕಾಣಿಸಿಕೊಂಡ ಅಭಿಷೇಕ್​ ಅಂಬರೀಷ್​; ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − thirteen =
Remember me
