ದೇವನಹಳ್ಳಿ:ತೊಟ್ಟಿಯಲ್ಲಿದ್ದ ಕಲುಷಿತ ನೀರು ಕುಡಿದು 18 ಮೇಕೆಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕಲುಷಿತ ನೀರು ಸೇವಿಸಿ 18 ಮೇಕೆಗಳು ಸಾವನ್ನಪ್ಪಿದ್ದು , 8 ಮೇಕೆಗಳು ಅಸ್ವಸ್ಥಗೊಂಡಿವೆ. ದೊಡ್ಡ ತತ್ತಮಂಗಲ ಗ್ರಾಮದ ರೈತ ಮುನಿಶಾಮಪ್ಪ ಎಂಬುವವರಿಗೆ ಸೇರಿದ ಮೇಕೆಗಳಾಗಿವೆ.
ಇದನ್ನೂ ಓದಿ: ವೈದ್ಯರಿಂದ ಮೃತ ಎಂದು ಘೋಷಿಸಲ್ಪಟ್ಟ ಐದು ಗಂಟೆಗಳ ನಂತರ ಕಣ್ಣು ತೆರೆದ ವೃದ್ಧೆ..!
ತೊಟ್ಟಿಯನ್ನು ಆಸೀಡ್ ನಿಂದ ತೊಳೆದು ಹೊಸ ನೀರನ್ನು ತುಂಬಿಸಲಾಗಿತ್ತು. ಮೇಕೆಗಳು ಹೊಲದಲ್ಲಿ‌ ಮೇಯ್ದು ತೊಟ್ಟಿಯಲ್ಲಿ ಇದ್ದ ನೀರನ್ನ ಸೇವಿಸಿದ ಕಾರಣ ಅವಘಡ ಸಂಭವಿಸಿದೆ. ಮೇಕೆಗಳು ದಾರುಣ ಸಾವಿನಿಂದ ರೈತ ಮುನಿಶಾಮಪ್ಪ ಕಣ್ಣೀರು ಹಾಕಿದ್ದಾರೆ.
ಸ್ಥಳಕ್ಕೆ ಪಶು ಸಂಗೋಪನಾ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಕೆಗಳ ಸಾವಿಗೆ ಪರಿಹಾರಕ್ಕಾಗಿ ರೈತ ಕುಟುಂಬ ಸರ್ಕಾರದ ಬಳಿ ಮನವಿ ಮಾಡಿದೆ.
https://www.vijayavani.net/no-lungi-or-nightie-in-common-areas-housing-society-imposes-bizarre-dress-code
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
