ಬೆಂಗಳೂರು:ರಾಜ್ಯ ಗೃಹ ಇಲಾಖೆಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮುಂದುವರಿದಿದ್ದು, 19 ಮಂದಿ ಡಿವೈಎಸ್ಪಿಗಳು ಹಾಗೂ 192 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಸರ್ಕಾರದ ಸೂಚನೆ ಅನ್ವಯ ಪೊಲೀಸ್ ಇಲಾಖೆ ಆಡಳಿತ ವಿಭಾಗದ ಎಡಿಜಿಪಿ ಸೌಮೇಂದು ಮುಖರ್ಜಿ ಅವರು ಬೆಂಗಳೂರು ಕಮಿಷನರೇಟ್ ವ್ಯಾಪ್ತಿ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದ್ದಾರೆ.ಈ ಇನ್‌ಸ್ಪೆಕ್ಟರ್‌ಗಳಿಗೆ ವರ್ಗಾವಣೆಗೊಂಡ ಠಾಣೆಗಳಲ್ಲಿ ತಕ್ಷಣವೇ ಕರ್ತವ್ಯ ಹಾಜರಾಗುವಂತೆ ಸೂಚಿಸಲಾಗಿದೆ. ಈ ಸೂಚನೆಯಂತೆ ಬಹುತೇಕ ಇನ್‌ಸ್ಪೆಕ್ಟರ್‌ಗಳು ನಿಯೋಜಿತ ಠಾಣೆಗಳಲ್ಲಿ ಭಾನುವಾರವೇ ಕಾರ್ಯಾಭಾರ ವಹಿಸಿಕೊಂಡಿದ್ದಾರೆ.

ನಗರಕ್ಕೆ ವರ್ಗಾವಣೆಯಾದ ಇನ್ಸ್‌ಪೆಕ್ಟರ್‌ಗಳ ಪಟ್ಟಿ:ಅಶೋಕ್ ಕುಮಾರ್ ಎ.ಎನ್.- ಆಡುಗೋಡಿ ಸಂಚಾರ ಠಾಣೆ, ಎ.ವಿ.ಕುಮಾರ್-ಅನ್ನಪೂರ್ಣೇಶ್ವರಿನಗರ, ವಿ.ಎಸ್.ಶಬರೀಶ್-ಬಾಗಲೂರು, ಅರುಣ್ ಸಾಲುಂಕೆ-ಬಾಣಸವಾಡಿ, ಬಿ.ಎಂ.ಕೊಟ್ರೇಶಿ-ಬನಶಂಕರಿ, ಸವಿತಾ- ಬಸವನಗುಡಿ, ಗಿರೀಶ್ ನಾಯ್ಕ-ಚನ್ನಮ್ಮನಕೆರೆ ಅಚ್ಚುಕಟ್ಟು, ಎಸ್.ಶಿವರತ್ನ- ಸಿಇಎನ್ ಉತ್ತರ, ಎಂ.ಹೇಮಂತ್ ಕುಮಾರ್- ಸಿಇಎನ್ ವೈಟ್ ಫೀಲ್ಡ್, ಡಿ.ಎಲ್.ರಾಜು- ಚಿಕ್ಕಪೇಟೆ ಸಂಚಾರ, ಎಚ್.ಬಿ.ಸುನೀಲ್- ಡಿ.ಜೆ,ಹಳ್ಳಿ, ಜಿ.ಎಂ.ನವೀನ್-ಎಲೆಕ್ಟ್ರಾನಿಕ್ ಸಿಟಿ, ಎಚ್.ಜಯರಾಜ್-ಗೋವಿಂದಪುರ, ಆರ್.ಪ್ರಕಾಶ್- ಹಲಸೂರು, ಕಿರಣ್ ಕುಮಾರ್ ಎಸ್ ನೀಲಗಾರ್- ಕಲಾಸಿಪಾಳ್ಯ, ಎಂ.ಪಾಪಣ್ಣ- ಕೋಣನಕುಂಟೆ, ಎಚ್.ಎ.ಮಂಜು- ಮಹಾಲಕ್ಷ್ಮೀ ಲೇಔಟ್, ಬಿ.ಆರ್.ಜಗದೀಶ್- ಮಲ್ಲೇಶ್ವರ, ದಿನೇಶ್ ಪಾಟೀಲ್- ಮಲ್ಲೇಶ್ವರ ಸಂಚಾರ, ಬಿ.ಎನ್.ಪುನೀತ್-ರಾಜಗೋಪಾಲನಗರ, ಭಾಗ್ಯವತಿ ಜೆ.ಬಂಟಿ- ಸಂಜಯನಗರ, ಕೆ.ಎಂ.ಚೈತನ್ಯ- ಜೆ.ಸಿ.ನಗರ, ಎಂ.ಎಸ್.ರಾಜು- ಸುಬ್ರಮಣ್ಯಪುರ, ಎಚ್.ವಿ.ಸುರೇಶ್- ಸುಬ್ರಮಣ್ಯನಗರ, ಕೆ.ವಿಶ್ವನಾಥ್- ತಿಲಕನಗರ, ಶಂಕರಗೌಡ ಬಸವನಗೌಡ- ವೈಯಾಲಿಕಾವಲ್, ಸಿ.ಕೃಷ್ಣಕುಮಾರ್- ಬನ್ನೇರುಘಟ್ಟ.ಕೆ.ಎಂ.ಹರೀಶ್‌ಬಾಬು- ಬನಶಂಕರಿ ಸಂಚಾರ, ಟಿ.ಮಂಜಣ್ಣ- ಚಾಮರಾಜಪಪೇಟೆ, ಡಿ.ಸಂತೋಷ್ ಕುಮಾರ್- ಮಾಗಡಿ ರಸ್ತೆ ಸಂಚಾರ, ಬಿ.ರಾಜಣ್ಣ ಮೈಕೋ ಲೇಔಟ್, ಎಂ.ನಾಗರಾಜು-ಶೇಷಾದ್ರಿಪುರಂ ಸಂಚಾರ, ಎಸ್.ಜೆ.ಪ್ರಕಾಶ್-ಸಿಸಿಬಿ ಬೆಂಗಳೂರು, ಬಿ.ಭರತ್- ಹೈಗ್ರೌಂಡ್ಸ್, ಆರ್.ದೀಪಕ್-ಜಯನಗರ, ಪಿ.ಬಿ.ಚಿದಾನಂದಮೂರ್ತಿ ಅವರನ್ನು ಪೀಣ್ಯ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − seven =
Remember me
