ನವದೆಹಲಿ:ಶ್ರೀಮಂತ ಇತಿಹಾಸ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಐಟಿ ಉದ್ಯಮಗಳ ಕಾರಣದಿಂದ ಬೆಂಗಳೂರನ್ನು ಭಾರತದ ಸಿಲಿಕಾನ್​ ವ್ಯಾಲಿ ಎಂದೇ ಖ್ಯಾತಿ ಪಡೆದಿದೆ. ಆದರೆ, ದುರಾದೃಷ್ಟವಶಾತ್ ಇದೇ ಬೆಂಗಳೂರು​ ಟ್ರಾಫಿಕ್​ ಜಾಮ್​ ಕುಖ್ಯಾತಿಯನ್ನು ಹೊಂದಿದೆ. ಸಾವಿಲ್ಲದ ಮನೆಯಿಲ್ಲ, ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ ಅನುಭವಿಸದ ವ್ಯಕ್ತಿಯಿಲ್ಲ ಎಂಬ ಪರಿಸ್ಥಿತಿ ನಮ್ಮ ಬೆಂದಕಾಳೂರದ್ದು. ಬಹುತೇಕ ಎಲ್ಲರು ಟ್ರಾಫಿಕ್​ ಕಿರಿಕಿರಿಯನ್ನು ಅನುಭವಿಸಿದ್ದಾರೆ. ಆದರೆ, ಇದೇ ಟ್ರಾಫಿಕ್​ನಿಂದ ಬೆಂಗಳೂರಿಗೆ ಭಾರೀ ನಷ್ಟವಾಗುತ್ತಿದೆ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಇತ್ತೀಚಿನ ಸಂಶೋಧನಾ ವರದಿ ಇದನ್ನು ನಂಬುವಂತೆ ಮಾಡಿದೆ.
ಹೌದು, ಟ್ರಾಫಿಕ್​ನಿಂದ ಬೆಂಗಳೂರು ನಗರಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿದೆ. ಈ ಸಂಗತಿ ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂ.ಎನ್. ಶ್ರೀಹರಿ ಮತ್ತು ಅವರ ತಂಡ ನೀಡಿರುವ ಸಂಶೋಧನಾ ವರದಿಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ:ರಾಜ್ಯ ಪಠ್ಯಕ್ರಮ ಶಾಲೆಗೆ ಮಕ್ಕಳ ಸೇರಿಸಲು ಪಾಲಕರ ಹಿಂದೇಟು?: ನಾಲ್ಕು ಲಕ್ಷ ಮಕ್ಕಳ ಸಂಖ್ಯೆ ಕುಸಿತ; ಕಳೆದ ವರ್ಷಕ್ಕಿಂತ ಗಣನೀಯ ಇಳಿಕೆ
ವರದಿಯ ಪ್ರಕಾರ ಟ್ರಾಫಿಕ್​ ಜಾಮ್​ನಿಂದಾಗಿ ಬೆಂಗಳೂರಿಗೆ ವರ್ಷಕ್ಕೆ 19 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗುತ್ತಿದೆ. ನಗರದಲ್ಲಿ 60 ಚಾಲ್ತಿಯಲ್ಲಿರುವ ಮೇಲ್ಸೇತುವೆ ಇದ್ದರೂ ಟ್ರಾಫಿಕ್​ನಿಂದ ಕೋಟಿ ಕೋಟಿ ರೂ. ಲಾಸ್ ಆಗುತ್ತಿದೆ. ವಾಹನದ ಸಮಯದ ನಷ್ಟ, ಇಂಧನ ನಷ್ಟ ಹಾಗೂ ಉದ್ಯೋಗಿಗಳ ಸಮಯ ನಷ್ಟದ ಆಧಾರದ ಮೇಲೆ ವರದಿಯನ್ನು ರೂಪಿಸಲಾಗಿದೆ.
ಈ ವರದಿಯನ್ನು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಾಗಿದೆ. ವರದಿಯಲ್ಲಿ ಸಂಚಾರ ನಿರ್ವಹಣೆ, ರಸ್ತೆ ಯೋಜನೆ, ಮೇಲ್ಸೇತುವೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಉಲ್ಲೇಖಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥಿಸಿಕೊಳ್ಳುವ ಲಜ್ಜೆಗೇಡಿ ಸಿಎಂ ರಾಜ್ಯಕ್ಕೆ ವಕ್ಕರಿಸಿದ್ದಾರೆ: ಎಚ್​ಡಿಕೆ ವಾಗ್ದಾಳಿ

ಟ್ರಕ್​ ಹಿಂದೆ ನಿಂತಿದ್ದ ಕಾರಿಗೆ ಮತ್ತೊಂದು ಟ್ರಕ್ ಡಿಕ್ಕಿ​: ದೇವಸ್ಥಾನದಿಂದ ಮರಳುತ್ತಿದ್ದ ಯುವತಿ ದುರ್ಮರಣ

ಹರ ಹರ ಶಂಭು ಹಾಡನ್ನು ಹಾಡಿ ಜನಮನ ಗೆದ್ದಿರುವ ಗಾಯಕಿ ಫರ್ಮಾನಿ ನಾಜ್​ ಸಹೋದರನ ಬರ್ಬರ ಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
